ಮಂಗನಿಂದ ಮಾನವರಲ್ಲ, ನಾವು ಋಷಿ ವಂಶಸ್ಥರು: ಬಿಜೆಪಿ ಸಂಸದ

Published : Jul 20, 2019, 09:27 AM ISTUpdated : Jul 20, 2019, 12:32 PM IST
ಮಂಗನಿಂದ ಮಾನವರಲ್ಲ, ನಾವು ಋಷಿ ವಂಶಸ್ಥರು: ಬಿಜೆಪಿ ಸಂಸದ

ಸಾರಾಂಶ

ಮಂಗನಿಂದ ಮಾನವರಲ್ಲ, ನಾವು ಋುಷಿ ವಂಶಸ್ಥರು: ಬಿಜೆಪಿ ಸಂಸದ| ಸಂಸತ್ತಿನಲ್ಲಿ ಮಸೂದೆಯೊಂದರ ಚರ್ಚೆಯ ವೇಳೆ ಮಾತನಾಡಿದ ಸಿಂಗ್‌

ನವದೆಹಲಿ[ಜು.20]: ಬ್ರಿಟಿಷ್‌ ವಿಜ್ಞಾನಿ ಡಾರ್ವಿನ್‌ ಪ್ರತಿಪಾದಿಸಿರುವಂತೆ ಮಂಗನಿಂದ ಮಾನವನ ಉಗಮವಾಗಿಲ್ಲ. ಮಾನವರು ಋುಷಿಗಳ ವಂಶಸ್ಥರು ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ಸಂಸದ ಸತ್ಯಪಾಲ್‌ ಸಿಂಗ್‌ ಹಳೆಯ ಸಿದ್ಧಾಂತವನ್ನು ಪ್ರಶ್ನಿಸಿದ್ದಾರೆ.

ಸಂಸತ್ತಿನಲ್ಲಿ ಮಸೂದೆಯೊಂದರ ಚರ್ಚೆಯ ವೇಳೆ ಮಾತನಾಡಿದ ಸಿಂಗ್‌, ನಾವು ಋುಷಿಗಳ ವಂಶಸ್ಥರು ಎನ್ನುವುದು ನಮ್ಮ ನಂಬಿಕೆ. ಮಂಗನಿಂದ ಮಾನವ ಎಂಬ ಸಿದ್ಧಾಂತದಲ್ಲಿ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಶಾಲೆಗಳ ಪಠ್ಯದಿಂದಲೂ ಇಂಥ ಅಂಶ ತೆಗೆದುಹಾಕಬೇಕು ಎಮದು ಹೇಳಿದ್ದಾರೆ. ಈ ಹೇಳಿಕೆಗೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಈ ಹಿಂದೆ ಮಾನವ ಸಂಪನ್ಮೂಲ ಸಚಿವರಾಗಿದ್ದಾಗಲೂ ಸತ್ಯಪಾಲ್‌ ಸಿಂಗ್‌ ಡಾರ್ವಿನ್‌ ಸಿದ್ಧಾಂತವನ್ನು ಪ್ರಶ್ನಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜೀವಂತ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಿದ ಲಕ್ಷ್ಮೇಶ್ವರ ಪುರಸಭೆ!
ಪರಿಷತ್‌ನಲ್ಲಿ ಮಧುಗೆ ಮೆಚ್ಚುಗೆ: 'ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ?' ಕಾಲೆಳೆದ ಸಿಟಿ ರವಿ!