ಭಾರತ ಸರ್ಕಾರದ ಖಜಾನೆಯಲ್ಲಿರುವ ಚಿನ್ನವೆಷ್ಟು..?

Published : May 11, 2018, 10:32 AM IST
ಭಾರತ ಸರ್ಕಾರದ ಖಜಾನೆಯಲ್ಲಿರುವ ಚಿನ್ನವೆಷ್ಟು..?

ಸಾರಾಂಶ

ದೇಶದ ಆರ್ಥಿಕತೆಯ ಬಗ್ಗೆ ನಾನಾ ರೀತಿಯ ಟೀಕೆ ಹಾಗೂ ವ್ಯಾಖ್ಯಾನಗಳು ಕೇಳಿಬರುತ್ತಿರುವುದರ ಮಧ್ಯೆಯೇ ಭಾರತೀಯ ಆರ್‌ಬಿಐ ತನ್ನ ವಿದೇಶಿ ವಿನಿಮಯ ಮೀಸಲಿಗೆ 3.1 ಟನ್ ಚಿನ್ನವನ್ನು ಹೊಸತಾಗಿ ಸೇರಿಸಿದೆ.

ಮುಂಬೈ: ದೇಶದ ಆರ್ಥಿಕತೆಯ ಬಗ್ಗೆ ನಾನಾ ರೀತಿಯ ಟೀಕೆ ಹಾಗೂ ವ್ಯಾಖ್ಯಾನಗಳು ಕೇಳಿಬರುತ್ತಿರುವುದರ ಮಧ್ಯೆಯೇ ಭಾರತೀಯ ಆರ್‌ಬಿಐ ತನ್ನ ವಿದೇಶಿ ವಿನಿಮಯ ಮೀಸಲಿಗೆ 3.1 ಟನ್ ಚಿನ್ನವನ್ನು ಹೊಸತಾಗಿ ಸೇರಿಸಿದೆ. ಅದರೊಂದಿಗೆ ಭಾರತದ ವಿದೇಶಿ
ಮೀಸಲಿನ ಚಿನ್ನದ ಒಟ್ಟು ಪ್ರಮಾಣವೀಗ 560.3 ಟನ್‌ಗೆ ಏರಿಕೆಯಾಗಿದೆ. 

ಇಷ್ಟು ಚಿನ್ನದ ಅಂದಾಜು ಮೊತ್ತ ಸುಮಾರು 1.68 ಲಕ್ಷ ಕೋಟಿ ರು.  2009ರಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದ 200 ಟನ್ ಚಿನ್ನ ಖರೀದಿಸಿ ಭಾರತ ತನ್ನ ವಿದೇಶಿ ಮೀಸಲಿಗೆ ಸೇರಿಸಿತ್ತು. ಅದರ ನಂತರ ಇದೇ ಮೊದಲ ಬಾರಿಗೆ 2018ರ ಮಾರ್ಚ್‌ಗೆ ಕೊನೆಯಾದ 2017-18ನೇ ಸಾಲಿನ 4ನೇ ತ್ರೈಮಾಸಿಕದ ವೇಳೆ 3.1 ಟನ್ ಚಿನ್ನ ಖರೀದಿಸಿ ವಿದೇಶಿ ಮೀಸಲು ನಿಧಿಯನ್ನು ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.

ಜಗತ್ತಿನ ಎಲ್ಲಾ ದೇಶಗಳು ಜಾಗತಿಕ ಮೀಸಲು ಕರೆನ್ಸಿಯಾದ ಅಮೆರಿಕನ್ ಡಾಲರ್ ಹಾಗೂ ಚಿನ್ನದ ರೂಪದಲ್ಲಿ ಬೃಹತ್ ಮೊತ್ತದ ಸಂಪತ್ತನ್ನು ವಿದೇಶಿ ವಿನಿಮಯ ಮೀಸಲಾಗಿ ಸಂಗ್ರಹಿಸಿಟ್ಟಿರುತ್ತವೆ. ಈ ಮೀಸಲು ಎಷ್ಟಿದೆ ಎಂಬುದರ ಮೇಲೆ ಆಯಾ ದೇಶ
ಗಳು ನಿರ್ದಿಷ್ಟ ಪ್ರಮಾಣದ ಕರೆನ್ಸಿ ನೋಟು ಪ್ರಿಂಟ್ ಮಾಡಿ ತಮ್ಮ ದೇಶದಲ್ಲಿ ಬಿಡುಗಡೆ ಮಾಡಬಹುದು.

ಭಾರತೀಯ ರಿಸರ್ವ್ ಬ್ಯಾಂಕ್ ಮಹಾರಾಷ್ಟ್ರದ ನಾ ಗ್ಪುರ ಮತ್ತು ಲಂಡನ್‌ನಲ್ಲಿ ವಿದೇಶಿ ಮೀಸಲು ಕೋಶ ಹೊಂದಿದ್ದು, ಅಲ್ಲಿ ಚಿನ್ನ ಹಾಗೂ ಡಾಲರ್‌ಗಳನ್ನು ಸಂಗ್ರಹಿಸಿಡುತ್ತದೆ. ಇದೀಗ 3.1 ಟನ್ ತೂಕದ ಚಿನ್ನವನ್ನು ಲಂಡನ್ ಮೂಲದ 2 ಬ್ಯಾಂಕ್‌ಗಳಿಂದ ಖರೀದಿಸಲಾಗಿದೆ ಎಂದು ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್