
ಶ್ರೀನಗರ: ಇತ್ತೀಚೆಗಷ್ಟೇ ಬಂಧಿತನಾದ ಕಾಶ್ಮೀರ ಉಗ್ರನೊಬ್ಬ, ಹಿಂಸಾತ್ಮಕ ಕೃತ್ಯಗಳಿಂದ ದೂರ ಉಳಿಯುವಂತೆ ತನ್ನ ಸಹಚರರಿಗೆ ಮನವಿ ಮಾಡಿಕೊಂಡಿದ್ದಾನೆ.
ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ತನ್ನನ್ನು ತಾನು ಐಜಿಜ್ ಅಹ್ಮದ್ ಗೊಜ್ರಿ ಎಂದು ಹೇಳಿಕೊಂಡ ಸೇನಾ ವಶದಲ್ಲಿರುವ ಆರೋಪಿ, ‘ಪಾಕಿಸ್ತಾನ, ಯುವ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.
ಹೀಗಾಗಿ ತಪ್ಪು ದಾರಿ ಹಿಡಿದ ನನ್ನ ಸ್ನೇಹಿತರಾದ ಸುಹೇಬ್ ಅಖೂನ್, ಮೊಹ್ಸಿನ್ ಮುಷ್ತಾಕ್ ಭಟ್ ಮತ್ತು ನಾಸೀರ್ ಅಮಿನ್ ಡ್ರಾಜಿ ಅವರು ಪುನಃ ತಮ್ಮ ಕುಟುಂಬಗಳಿಗೆ ಮರಳಬೇಕು,’ ಎಂದಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.