ಮೋದಿ ತಂತ್ರ ಇಮ್ರಾನ್ ಖಾನ್ ಗೆಲುವಿನ ಮಂತ್ರ

By Web DeskFirst Published Aug 6, 2018, 10:52 AM IST
Highlights

 2015ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಆ್ಯಪ್ ಪಿಟಿಐಗೆ ಭಾರೀ ನೆರವು ನೀಡಿತ್ತು. ಹೀಗಾಗಿ ಇದನ್ನೇ 2018ರ ಚುನಾವಣೆಗೂ ಬಳಸಲು ಪಕ್ಷ ನಿರ್ಧರಿಸಿತು. ಇಷ್ಟೆಲ್ಲಾ ಪ್ರಕ್ರಿಯೆಗಳು ಚುನಾವಣೆ ಹೊತ್ತಿನಲ್ಲಿ ನಡೆಯುತ್ತಿದ್ದರೂ, ತಂತ್ರಜ್ಞಾನದ ಬಳಕೆಯನ್ನು ಇಮ್ರಾನ್ ಖಾನ್ ಪಕ್ಷ ಅತ್ಯಂತ ರಹಸ್ಯವಾಗಿಟ್ಟಿತ್ತು.

ಇಸ್ಲಾಮಾಬಾದ್(ಆ.06): ಪಾಕಿಸ್ತಾನ ಲೋಕಸಭೆ ಚುನಾವಣೆಯಲ್ಲಿ ಘಟಾನುಘಟಿ ರಾಜಕಾರಣಿಗಳಾದ ನವಾಜ್ ಷರೀಫ್, ಆಸಿಫ್ ಅಲಿ ಜರ್ದಾರಿ ಮುಂದಾಳತ್ವದ ಪಕ್ಷಗಳನ್ನು ಮಣಿಸಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಜಯಭೇರಿ ಬಾರಿಸಿದ್ದು ಹೇಗೆ ಎಂಬುದಕ್ಕೆ ಕುತೂಹಲಕಾರಿ ಉತ್ತರ ದೊರಕಿದೆ.

ಇಮ್ರಾನ್ ಪಾಕಿಸ್ತಾನದಾದ್ಯಂತ ಜನಪ್ರಿಯರಾಗಿದ್ದರೂ, ಅದು ಮತಗಳಾಗಿ ಪರಿವರ್ತನೆಯಾಗುತ್ತಿರಲಿಲ್ಲ. ಜತೆಗೆ ಇದಕ್ಕೆ ಏನಾದರೂ ಪರಿಹಾರ ಹುಡುಕಬೇಕು ಎಂಬ ಸಲಹೆ ವ್ಯಕ್ತವಾಗಿದ್ದವು. ಆಗ ಚಿಂತನೆ ನಡೆಸಿ ‘ಕ್ಷೇತ್ರ ನಿರ್ವಹಣೆ ವ್ಯವಸ್ಥೆ’ ಎಂಬ ಆ್ಯಪ್ ಹಾಗೂ ದತ್ತಾಂಶ ಸಂಗ್ರಹಕ್ಕೆ ಇಮ್ರಾನ್ ಖಾನ್ ಆಪ್ತರು ಮುಂದಾದರು.

2015ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಆ್ಯಪ್ ಪಿಟಿಐಗೆ ಭಾರೀ ನೆರವು ನೀಡಿತ್ತು. ಹೀಗಾಗಿ ಇದನ್ನೇ 2018ರ ಚುನಾವಣೆಗೂ ಬಳಸಲು ಪಕ್ಷ ನಿರ್ಧರಿಸಿತು. ಇಷ್ಟೆಲ್ಲಾ ಪ್ರಕ್ರಿಯೆಗಳು ಚುನಾವಣೆ ಹೊತ್ತಿನಲ್ಲಿ ನಡೆಯುತ್ತಿದ್ದರೂ, ತಂತ್ರಜ್ಞಾನದ ಬಳಕೆಯನ್ನು ಇಮ್ರಾನ್ ಖಾನ್ ಪಕ್ಷ ಅತ್ಯಂತ ರಹಸ್ಯವಾಗಿಟ್ಟಿತ್ತು.ಏಕೆಂದರೆ ಈ ರಹಸ್ಯ ಬಯಲಾದರೆ ಎದುರಾಳಿ ಪಕ್ಷಗಳೂ ಅದನ್ನು ಅಳವಡಿಸಿಕೊಳ್ಳಬಹುದು ಎಂಬ ಭೀತಿ.

ಈ ಸುದ್ದಿಯನ್ನು ಓದಿ: ಇಮ್ರಾನ್ ಖಾನ್ ಕಲರ್’ಫುಲ್ ಕಹಾನಿ: ಖಾನ್ ಖಾಸಗಿ ಬದುಕು ಅನಾವರಣ..!

ಟಾರ್ಗೆಟ್ 150
ಚುನಾವಣೆಗೂ ಮುನ್ನ ಪಿಟಿಐ ಪಕ್ಷದ ಪರ ಒಲವು ಇರುವ 150 ಕ್ಷೇತ್ರಗಳನ್ನು ಗುರುತಿಸಿ, ಆದ್ಯತೆ ನೀಡಲಾಯಿತು. ಮತದಾರರ ಪಟ್ಟಿಯನ್ನು ಸ್ಕ್ಯಾನ್ ಮಾಡುವ ಸಾಫ್ಟ್ ವೇರ್ ಬಳಸಿ, ದತ್ತಾಂಶ ಸೃಷ್ಟಿಸಲಾಯಿತು. ಆ್ಯಪ್‌ಗೆ ಅಳವಡಿಸಲಾಯಿತು. ಮತದಾರರ ಗುರುತಿನ ಚೀಟಿಯನ್ನು ಆ್ಯಪ್‌ನಲ್ಲಿ ನಮೂಸಿದ ತಕ್ಷಣ ಇಮ್ರಾನ್ ಖಾನ್ ಪಕ್ಷದ ಕಾರ್ಯಕರ್ತರಿಗೆ ಮತದಾರರ ವಿಳಾಸ, ಎಷ್ಟು ಜನ ಇದ್ದಾರೆ, ಅವರು ಎಲ್ಲಿ ಮತ ಹಾಕುತ್ತಾರೆ ಎಂಬ ವಿವರ ಸುಲಭವಾಗಿ ಲಭ್ಯವಾಯಿತು.

ಈ ಸುದ್ದಿಯನ್ನು ಕ್ಲಿಕ್ಕಿಸಿ : ಮೋದಿ ಪಾಕಿಸ್ತಾನಕ್ಕೆ ಹೋದರೆ ಏನಾಗುತ್ತದೆ?

ಮತದಾನದ ದಿನ ಮತಗಟ್ಟೆ ಹುಡುಕಲು ಜನರು ಸಮಸ್ಯೆ ಎದುರಿಸುತ್ತಿದ್ದಾಗ ಇಮ್ರಾನ್ ಖಾನ್ ಪಕ್ಷದ ಕಾರ್ಯಕರ್ತರು ಮತದಾರರನ್ನು ಹುಡುಕಿ ಹುಡುಕಿ
ಮತಗಟ್ಟೆ ತಂದರು. ಸರ್ಕಾರದ ಸಹಾಯವಾಣಿ ಕೆಟ್ಟರೂ ಈ ಆ್ಯಪ್ ಕೈಕೊಡಲಿಲ್ಲ. ಮತಗಟ್ಟೆ ಬಳಿಗೆ ಬಂದ ಮತದಾರರಿಗೆ ನವಾಜ್ ಷರೀಫ್ ಪಕ್ಷದ ಕಾರ್ಯಕರ್ತರು ಕೈಯಲ್ಲಿ ಚೀಟಿ ಬರೆದುಕೊಡುತ್ತಿದ್ದರೆ, ಇಮ್ರಾನ್ ಪಕ್ಷದ ಕಾರ್ಯಕರ್ತರು ಚೀಟಿಯನ್ನು ಅಲ್ಲೇ ಮುದ್ರಿಸಿ ನೀಡುತ್ತಿದ್ದರು. ಇದರಿಂದಾಗಿ ೧೩ ಕೋಟಿ ಮತದಾರರಿಗೆ ಕೈಯಲ್ಲಿ ಚೀಟಿ ಬರೆಯುವ ಕೆಲಸ ತಪ್ಪಿತು. ಹೆಚ್ಚುವರಿ ಕಾರ್ಯಕರ್ತರು ಪ್ರಚಾರಕ್ಕೆ ಬಳಕೆಯಾದರು ಎಂದು ಕೆಲ ನಾಯಕರು
ತಿಳಿಸಿದ್ದಾರೆ.

 

click me!