
ನವದೆಹಲಿ: ಖಾತೆಗಳಲ್ಲಿ ಕನಿಷ್ಠ ಮೊತ್ತ (ಮಿನಿಮಮ್ ಬ್ಯಾಲೆನ್ಸ್) ನಿರ್ವಹಿಸದ ಕಾರಣಕ್ಕೆ ಖಾತೆದಾರರಿಗೆ ವಿಧಿಸಲಾಗುವ ದಂಡದ ರೂಪದಲ್ಲಿ 21 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಹಾಗೂ ಮೂರು ಖಾಸಗಿ ಬ್ಯಾಂಕುಗಳಿಗೆ 2017 - 18ನೇ ಸಾಲಿನಲ್ಲಿ ಭರ್ಜರಿ 5 ಸಾವಿರ ಕೋಟಿ ರು. ಆದಾಯಹರಿದುಬಂದಿದೆ.
ಪ್ರಧಾನಮಂತ್ರಿ ಜನಧನ ಹಾಗೂ ಕನಿಷ್ಠ ಉಳಿತಾಯ ಖಾತೆ ಠೇವಣಿಯಂತಹ ಖಾತೆಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಖಾತೆಗಳ ಗ್ರಾಹಕರು ತಮ್ಮ ಖಾತೆಯಲ್ಲಿ ಸರಾಸರಿ ನಿರ್ದಿಷ್ಟ ಮೊತ್ತದ ಹಣವನ್ನು ಕನಿಷ್ಠ ಮೊತ್ತವಾಗಿ ನಿರ್ವಹಿಸು ವುದು ಕಡ್ಡಾಯ. ಕನಿಷ್ಠ ಮೊತ್ತಕ್ಕಿಂತ ಕಡಿಮೆ ಹಣ ನಿರ್ವಹಿಸಿದರೆ ಬ್ಯಾಂಕುಗಳು ದಂಡ ವಿಧಿಸುತ್ತವೆ.
ಇಂತಹ ದಂಡದ ರೂಪದಲ್ಲೇ ಕಳೆದ ವರ್ಷ ಬ್ಯಾಂಕುಗಳಿಗೆ 4989.55 ಕೋಟಿ ರು. ಆದಾಯ ಸಿಕ್ಕಿದೆ. 24 ಬ್ಯಾಂಕುಗಳ ಪೈಕಿ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಗೆ ದಂಡದ ಹಣದಲ್ಲಿ ಅರ್ಧದಷ್ಟು ಭಾಗ ಸಿಕ್ಕಿರುವುದು ಗಮನಾರ್ಹ. 2017 - 18ನೇ ಸಾಲಿನಲ್ಲಿ 6547 ಕೋಟಿ ರು. ನಷ್ಟ ಅನುಭವಿಸಿದ್ದ ಎಸ್‌ಬಿಐಗೆ ದಂಡದ ರೂಪದಲ್ಲಿ 2433 . 87 ಕೋಟಿ ರು. ಬರದಿದ್ದರೆ, ಅದರ ನಷ್ಟ ಇನ್ನಷ್ಟು ಹೆಚ್ಚಾಗುತ್ತಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.