ಸರ್ಕಾರಿ ವಲಯದಲ್ಲಿ ಉದ್ಯೋಗಗಳೇ ಇಲ್ಲ. ಇದರ ಮಧ್ಯೆ ಮೀಸಲಾತಿಯನ್ನು ಹೇಗೆ ಕಲ್ಪಿಸುವುದು ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಔರಂಗಾಬಾದ್: ಮರಾಠಾ ಮೀಸಲಾತಿಗೆ ಒತ್ತಾಯಿಸಿಮಹಾರಾಷ್ಟ್ರದಾದ್ಯಂತ ಹೋರಾಟ ನಡೆಯುತ್ತಿರುವ ಬೆನ್ನಲ್ಲೇ, ಸರ್ಕಾರದ ವಲಯದಲ್ಲಿ ಉದ್ಯೋಗಗಳ ಪ್ರಮಾಣವೇ ಕುಸಿಯುತ್ತಿರುವಾಗ ಮರಾಠ ಸಮುದಾ ಯಕ್ಕೆ ಮೀಸಲಾತಿ ನೀಡಿ ಏನು ಪ್ರಯೋಜನ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಶ್ನಿಸಿದ್ದಾರೆ.
ಭಾನುವಾರ ಪತ್ರಕರ್ತರೊಂದಿಗೆ ಸಮಾಲೋಚನೆ ನಡೆಸಿದ ಅವರು, ‘ಐಟಿಯಿಂದಾಗಿ ಬ್ಯಾಂಕಿಂಗ್ ಸೇರಿದಂತೆ ಇತರ ಸರ್ಕಾರದ ಉದ್ಯೋಗಗಳ ಪ್ರಮಾಣ ಕ್ಷೀಣಿಸುತ್ತಿದೆ. ಸರ್ಕಾರಿ ನೇಮಕಾತಿ ಪ್ರಮಾಣವೂ ಕುಸಿಯುತ್ತಿದೆ. ಸರ್ಕಾರದಲ್ಲಿ ಎಲ್ಲಿ ಕೆಲಸ ಖಾಲಿ ಇದೆ,’ ಎಂದು ಅವರು ಪ್ರಶ್ನಿಸಿದರು.
‘ಇತ್ತೀಚಿನ ಪ್ರತಿಯೊಬ್ಬರೂ ತಾನು ಹಿಂದುಳಿದವ ಎಂ ದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಬಡತನ ಎಂದರೆ ಬಡತನ ಅಷ್ಟೇ. ಇದರಲ್ಲಿ ಜಾತಿ, ಧರ್ಮಗಳನ್ನು ಸಮೀಕರಿಸುವುದೇ ಅಪ್ರಸ್ತುತ ಎಂದು ಹೇಳಿದರು.