ಹನಿಟ್ರ್ಯಾಪ್ ಬಗ್ಗೆ ಕೆ ಎನ್ ರಾಜಣ್ಣ ಅವರು ಆರೋಪ ಮಾಡಿದ್ದರು. ಈಗ ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ ಸಿಡಿ ಪ್ರಕರಣ, ಹನಿಟ್ರ್ಯಾಪ್ ವಿಚಾರ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡ್ತಿದೆ. ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು “ನನ್ನನ್ನು ಹನಿಟ್ರ್ಯಾಪ್ ಮಾಡುವ ಪ್ರಯತ್ನ ಆಗಿದೆ. ಒಂದಲ್ಲ, ಎರಡು ಬಾರಿ ಈ ಯತ್ನ ಆಗಿದೆ” ಎಂದು ಹೇಳಿದ್ದರು. ಈಗ ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರು ತಿರುಗೇಟು ಕೊಟ್ಟಿದ್ದಾರೆ.
ರಾಜಣ್ಣ ಆರೋಪ ಏನಾಗಿತ್ತು?
ರಾಜಣ್ಣ ಮಾತನಾಡಿ, “ನಮ್ಮ ಬೆಂಗಳೂರು ನಿವಾಸದಲ್ಲಿ ಸಿಸಿಟಿವಿ ಕ್ಯಾಮರಾ ಇಲ್ಲ. ಇನ್ನು ಹನಿಟ್ರ್ಯಾಪ್ ಆಗಿದೆ ಅಂತ ಹೇಳಲು ಯಾವುದೇ ಸಾಕ್ಷಿ ಕೂಡ ಇಲ್ಲ. ಓರ್ವ ಹುಡುಗ ಬೇರೆ ಬೇರೆ ಹುಡುಗಿಯರ ಜೊತೆ ನಮ್ಮ ಮನೆಗೆ ಬಂದಿದ್ದು ಸತ್ಯ. ಅವರ ಫೋಟೋ ತೋರಿಸಿದರೆ ನಾನು ಗುರುತುಹಿಡಿಯುವೆ. ಈಗ ಟೈಮ್ ಸಿಗ್ತು ಅಂತ ದೂರು ಕೊಟ್ಟಿದ್ದೇನೆ. ಮೂರು ಪುಟಗಳ ದೂರು ಕೊಟ್ಟಿದ್ದೇನೆ” ಎಂದು ಹೇಳಿದ್ದರು. ಈ ಬಗ್ಗೆ ನಿಖಿಲ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಹುಲ್ ಗಾಂಧಿ ಸಂವಿಧಾನದ ಬುಕ್ ಹಿಡ್ಕೊಂಡು ಗಂಟೆ ಅಲ್ಲಾಡಿಸಿದ್ರೆ ಆಗಲ್ಲ: ನಿಖಿಲ್ ಕುಮಾರಸ್ವಾಮಿ!
ಬೆಳಗ್ಗೆ ಮನಿ, ಸಂಜೆ ಹನಿ!
ಸಚಿವ ರಾಜಣ್ಣ ಹನಿಟ್ರ‍್ಯಾಪ್ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿದ್ದು, “ದೇವಾಲಯದಂತ ವಿಧಾನಸೌಧದಲ್ಲಿ ಬೆಳಿಗ್ಗೆ ಮನಿ, ಸಂಜೆ ಹನಿ ಬಗ್ಗೆ ಚರ್ಚೆ ಆಗ್ತಿದೆ” ಎಂದು ಹೇಳಿದ್ದರು.
ಪುಣ್ಯಾತ್ಮರು ಆಡಳಿತ ಮಾಡಿದ ಜಾಗ ಅದು!
“ನಾನೊಬ್ಬ ಯುವಕನಾಗಿ ಹೊಸದಾಗಿ ರಾಜಕೀಯ ಕ್ಷೇತ್ರಕ್ಕೆ ಬರುತ್ತಿದ್ದೇನೆ. ನನ್ನಂತ ಎಷ್ಟೋ ಯುವಕರಿಗೆ ಪಾಲಿಟಿಕ್ಸ್‌ಗೆ ಬರುವ ಆಸೆ ಇದೆ. ವಿಧಾನಸೌಧದ ಒಳಗೆ ಅನೇಕ ಪುಣ್ಯಾತ್ಮರು ಆಡಳಿತ ಮಾಡಿದ್ದಾರೆ. ಇಂತಹ ದೇಗುಲದಲ್ಲಿ ಬೆಳಗ್ಗೆ ಮನಿ, ಸಂಜೆ ಹನಿ ಆಗ್ತಿದೆ” ಎಂದು ನಿಖಿಲ್ ಹೇಳಿದ್ದಾರೆ.
ಬ್ಲ್ಯೂ ಜೀನ್ಸ್ ಹಾಕೋ ಎಲ್ಲ ಹುಡುಗೀರು ಹನಿಟ್ರ್ಯಾಪ್ ಮಾಡ್ತಾರಾ? ಕೆಎನ್ ರಾಜಣ್ಣಗೆ ಚೇತನ್ ಅಹಿಂಸ ಪ್ರಶ್ನೆ!
ಸಿಡಿ ಫ್ಯಾಕ್ಟರಿ ಮಾಲೀಕ ಯಾರು.?
ಈ ಕಾಂಗ್ರೆಸ್ ಸರ್ಕಾರ ಮನಿ-ಹನಿ ಸರ್ಕಾರ ಆಗಿದೆ. ಸದನದ ಒಳಗೆ ರಾಜಣ್ಣ ಹನಿಟ್ರ್ಯಾಪ್ ಆರೋಪ ಮಾಡಿದ್ದರು. ಕ್ಯಾಬಿನೆಟ್ ಸಚಿವರಿಗೆ ರಕ್ಷಣೆ ಇಲ್ಲ ಅಂದ್ರೆ ಬೇರೆಯವ್ರ ಕಥೆ ಏನು? 48 ಜನರ ಸಿಡಿ ಇದೆ ಅಂತ ಹೇಳ್ತಾರೆ. ಒಂದು ಕುರ್ಚಿಗೋಸ್ಕರ ಈ ಮಟ್ಟಕ್ಕೆ ರಾಜಕೀಯ ಮಾಡ್ತಿದ್ದಾರೆ. ಹಾಗಾದರೆ ಸಿಡಿ ಫ್ಯಾಕ್ಟರಿ ಮಾಲೀಕ ಯಾರು? ಎಳೂವರೆ ಕೋಟಿ ಮಹಾನ್ ವ್ಯಕ್ತಿ ಯಾರು? ಇಷ್ಟು ಸಿಡಿ ಮಾಡಿಸಿದ ಪುಣ್ಯಾತ್ಮ ಯಾರು ಅಂತ ಜನರು ತಿಳಿಯಲು ಕಾಯುತ್ತಿದ್ದಾರೆ. ರಾಜಣ್ಣ ಅವರೇ ದೂರು ಕೊಡಿ. ಯಾಕೆ ಸತಾಯಿಸುತ್ತೀರಾ” ಎಂದರು.