ಶಾಸಕ ಕೃಷ್ಣನಾಯ್ಕ ಅವರು ಫೋನ್ ಟ್ಯಾಪಿಂಗ್ ಮತ್ತು ಹನಿಟ್ರ್ಯಾಪ್ ವಿಚಾರಗಳನ್ನು ಸರ್ಕಾರವು ಅಧಿಕಾರ ಉಳಿಸಿಕೊಳ್ಳಲು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಜನವಿರೋಧಿಯಾಗಿದ್ದು, ಆಡಳಿತದಲ್ಲಿ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಬಳ್ಳಾರಿ/ವಿಜಯನಗರ (ಮಾ.25): ಸರ್ಕಾರದಲ್ಲಿ ಅವರವರ ಅಧಿಕಾರ ಉಳಿಸಿಕೊಳ್ಳಲು ಪೋನ್ ಟ್ಯಾಪಿಂಗ್ ಹಾಗೂ ಹನಿಟ್ರ್ಯಾಪ್ ವಿಚಾರವನ್ನು ಮುಂದೆ ತರುತ್ತಿದ್ದಾರೆ ಎಂದು ಹಡಗಲಿ ಶಾಸಕ ಕೃಷ್ಣನಾಯ್ಕ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿಚಾರದಲ್ಲಿ ಯಾರೂ- ಯಾರಿಗೋ ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಹೀಗಾಗಿ ಸದನದಲ್ಲಿ ಏನೆಲ್ಲಾ ಮಾಡಬಾರದೋ ಅದನ್ನು ಚರ್ಚೆ ಸಮಯ ಕಳೆದಿದ್ದಾರೆ. ಯಾರು ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತುತ್ತಾರೋ ಅವರನ್ನು ಹೊರ ಹಾಕೋ ಕೆಲಸ ಮಾಡಲಾಗುತ್ತಿದೆ. ಸರ್ಕಾರದ ಸ್ವಾರ್ಥ ನಿರ್ಧಾರದಿಂದಾಗಿ ಕಾಂಗ್ರೆಸ್ ಸರ್ಕಾರ 18 ಶಾಸಕರ ಅಮಾನತ್ತು ಮಾಡಿದೆ. ಈ ಹಿಂದೆ ಸಭಾಪತಿಗಳನ್ನು ಸ್ಥಾನದಿಂದ ಕೆಳಗೆಳೆದು ಹಾಕಿದ್ದರು. ಅಗ ಯಾಕೆ ಎಲ್ಲರೂ ಸೈಲೆಂಟ್ ಆಗಿದ್ದರು. ಆದರೆ, ಈಗ ಸ್ಪೀಕರ್ ಪೀಠದ ಬಳಿಗೆ ಹೋಗಿದ್ದಕ್ಕೆ ಅಮಾನತ್ತು ಮಾಡಿರುವುದಲ್ಲಿ ಯಾವ ನ್ಯಾಯ ಎಂದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸಿಂಗಟಾಲೂರ ಯೋಜನೆಯ ಹರಿಕಾರ!
ಅಲ್ಲದೇ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರವಾಗಿದೆ. ಆಡಳಿತ ನಡೆಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ರಾಜ್ಯದ ಬಡಜನರ ಪರ ಚರ್ಚೆ ಮಾಡಬೇಕಾಗಿತ್ತು. ಆದರ ಚರ್ಚೆಯಾಗಬಾರದ ವಿಚಾರಗಳೆಲ್ಲಯೂ ಅಧಿವೇಶನದಲ್ಲಿ ಚರ್ಚೆಯಾಗಿದೆ. ಶಾಸಕರಿಗೆ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಮಾತನಾಡುವುದಕ್ಕೆ ಹೆಚ್ಚಿಗೆ ಅವಕಾಶ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.