
ನವದೆಹಲಿ(ಸೆ.22): ವಿವಾದಿತ ರಫೆಲ್ ಯುದ್ಧ ವಿಮಾನ ಒಪ್ಪಂದ ಕುರಿತು ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಪ್ರಧಾನಿ ಮೋದಿ ಓರ್ವ ಕಳ್ಳ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ನಿಂದ ಒಪ್ಪಂದವನ್ನು ರಿಲಯನ್ಸ್ ಸಂಸ್ಥೆಗೆ ವರ್ಗಾಯಿಸಿದ್ದರ ಕುರಿತು ಮಾಹಿತಿಯೇ ಇರಲಿಲ್ಲ ಎಂದೂ ರಾಹುಲ್ ಆರೋಪಿಸಿದ್ದಾರೆ.
ಮನೋಹರ್ ಪರಿಕ್ಕರ್ ಅವರಿಗೆ ಬದಲಾವಣೆ ಬಗ್ಗೆ ಅರಿವಿರಲಿಲ್ಲ. ಅವರು ಗೋವಾದ ಮಾರುಕಟ್ಟೆಯಲ್ಲಿ ಮೀನು ಖರೀದಿಸುವುದರಲ್ಲಿಯೇ ಬ್ಯುಸಿಯಾಗಿದ್ದರು ಎಂದು ವ್ಯಂಗ್ಯವಾಡಿದ್ದಾರೆ.
ಫ್ರಾಂಕೋಯಿಸ್ ಹೊಲಾಂಡೆ ಹೇಳಿಕೆ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿರುವ ರಾಹುಲ್ ಗಾಂಧಿ, ಇದೇ ಮೊದಲ ಬಾರಿಗೆ ವಿದೇಶದ ಮಾಜಿ ಅಧ್ಯಕ್ಷರೊಬ್ಬರು ನಮ್ಮ ಪ್ರಧಾನಿಯನ್ನು ಕಳ್ಳ ಎಂದು ಕರೆಯುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ನಮ್ಮ ದೇಶದ ಪ್ರಧಾನಿ ಭ್ರಷ್ಟ ಎಂಬುದು ನಮಗೆ ಮನದಟ್ಟಾಗಿದೆ. ಭಾರತೀಯರ ಮನಸ್ಸಿನಲ್ಲಿ ಒಂದು ಅಭಿಪ್ರಾಯವಂತೂ ಸ್ಪಷ್ಟವಾಗಿ ಮೂಡಿದೆ ಅದೆಂದರೆ ದೇಶ ಸೇವಕ ಕಳ್ಳ, ದರೋಡೆಕೋರ ಎಂದು ಟೀಕಿಸಿದ್ದಾರೆ.
ರಫೆಲ್ ಡೀಲ್: ಮೋದಿಗೆ ಮುಜುಗರ ತಂದಿತ್ತ ಫ್ರಾನ್ಸ್ ಮಾಜಿ ಅಧ್ಯಕ್ಷ!
ಅಂಬಾನಿ ಬೇಕೆಂದಿದ್ದು ನಾವೇ: ಡಸ್ಸಾಲ್ಟ್ ಕಂಪನಿ ಸ್ಪಷ್ಟನೆ!
ಮೋದಿ-ಅಂಬಾನಿಯಿಂದ ರಕ್ಷಣಾ ಪಡೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್: ರಾಹುಲ್!
ಮೋದಿ ವಿರುದ್ಧ ನಿಂತ್ರಾ ಸ್ವಾಮಿ?: 'ಗಂಭೀರ' ಎಚ್ಚರಿಕೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.