ಬಿಜೆಪಿಗೆ ಬಿಗ್ ಶಾಕ್: ಪಕ್ಷ ತೊರೆಯಲಿರುವ ಫೇಮಸ್ ನಾಯಕ!

Published : Sep 22, 2018, 05:17 PM ISTUpdated : Sep 22, 2018, 05:23 PM IST
ಬಿಜೆಪಿಗೆ ಬಿಗ್ ಶಾಕ್: ಪಕ್ಷ ತೊರೆಯಲಿರುವ ಫೇಮಸ್ ನಾಯಕ!

ಸಾರಾಂಶ

ಕಮಲ ಪಾಳೇಯಕ್ಕೆ ಶಾಕ್ ಕೊಟ್ಟ ಹಿರಿಯ ನೇತಾರ! ಏಕಾಏಕಿ ಬಿಜೆಪಿ ಪಕ್ಷ ತೊರೆಯಲಿರುವ ಹಿರಿಯ ನಾಯಕ! ಬಿಜೆಪಿ ತೊರೆದ ಜಸ್ವಂತ್ ಸಿಂಗ್ ಪುತ್ರ ಮನ್ವೇಂದ್ರ ಸಿಂಗ್! ಬಿಜೆಪಿ ಸೇರಿದ್ದು ತಮ್ಮ ಜೀವನದ ದೊಡ್ಡ ತಪ್ಪು ಎಂದ ಮನ್ವೇಂದ್ರ! ಕೇಂದ್ರ ಮತ್ತು ರಾಜಸ್ಥಾನ ಸರ್ಕಾರದ ವಿರುದ್ದ ಹರಿಹಾಯ್ದ ಮನ್ವೇಂದ್ರ! ವಿಧಾನಸಭೆ ಹೊಸ್ತಿಲಲ್ಲೇ ಪಕ್ಷಕ್ಕೆ ಶಾಕ್ ನೀಡಿದ ಮನ್ವೇಂದ್ರ ಸಿಂಗ್     

ಬಾರ್ಮರ್(ಸೆ.22): ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಪುತ್ರ, ಮನ್ವೇಂದ್ರ ಸಿಂಗ್ ಪಕ್ಷ ತೊರೆಯುವ ಘೋಷಣೆ ಮಾಡಿದ್ದಾರೆ.

ಬಾರ್ಮರ್ ನಲ್ಲಿ ಆಯೋಜಿಸಲಾಗಿದ್ದ ಸ್ವಾಭೀಮಾನ್ ರ‍್ಯಾಲಿ ಸಮಾವೇಶದಲ್ಲಿ ಮಾತನಾಡಿದ ಮನ್ವೇಂದ್ರ ಸಿಂಗ್, ಬಿಜೆಪಿ ಸೇರಿದ್ದು ತಮ್ಮ ಜೀವಮಾನದ ದೊಡ್ಡ ತಪ್ಪು ಎಂದು ಹೇಳಿದ್ದಾರೆ.

ರಾಜಸ್ಥಾನ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಮನ್ವೇಂದ್ರ ಸಿಂಗ್, ಎರಡೂ ಸರ್ಕಾರಗಳು ಜನರಿಗೆ ದ್ರೋಹ ಬಗೆದಿದ್ದು, ಇಂತಹ ಪಕ್ಷದಲ್ಲಿ ಇರುವುದು ಆತ್ಮ ಸ್ವಾಭಿಮಾನವನ್ನು ಮಾರಿಕೊಂಡಂತೆ ಎಂದು ಮನ್ವೇಂದ್ರ ಹೇಳಿದ್ದಾರೆ.

ಇನ್ನು ರಾಜಸ್ಥಾನ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಮನ್ವೇಂದ್ರ ಸಿಂಗ್ ಬಿಜೆಪಿ ತೊರೆಯಲಿರುವುದು ಪಕ್ಷಕ್ಕೆ ಭಾರೀ ನಷ್ಟವನ್ನುಟಂಟು ಮಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಟ್ರಂಪ್ ಮಾತ್ರವಲ್ಲ, ಕ್ಲಿಂಟನ್, ಬಿಲ್ ಗೇಟ್ಸ್ ಕೂಡ..' ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಫೋಟೋಗಳು ರಿಲೀಸ್
ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!