
ಬೆಂಗಳೂರು, (ಸೆ.7): 18 ರಿಂದ 23 ವಯಸ್ಸಿನ ಕರ್ನಾಟಕ ಯುವತಿಗೆ ಸುವರ್ಣಾವಕಾಶ. ಒಂದು ದಿನದ ಮಟ್ಟಿಗೆ ಭಾರತದ ಬ್ರಿಟಿಷ್ ಹೈ ಕಮಿಷನರ್ ಆಗಬಹುದು.
ಈ ಬಾರಿ ಕರ್ನಾಟಕದ ಮಹಿಳೆಯರಿಗೆ ಈ ಅವಕಾಶ ಸಿಕ್ಕಿದ್ದು, ರಾಜ್ಯದ ಯುವತಿಯರು ಒಂದು ದಿನದ ಮಟ್ಟಿಗೆ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಆಗಿ ಅನುಭವ ಪಡೆಯಬಹುದಾಹಗಿದೆ.
ISRO ಶ್ರಮ ಆಗಿಲ್ಲ ವ್ಯರ್ಥ, ನಿರೀಕ್ಷೆಗಳು ಇನ್ನೂ ಜೀವಂತ! ನಾವಿರೋಣ ಪ್ರಾರ್ಥಿಸುತ್ತಾ!
ಹೌದು...ಅಕ್ಟೋಬರ್ 11ರಂದು ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನ ಆಚರಿಸಲಾಗುತ್ತಿದೆ. ಈ ಕಾರಣಕ್ಕಾಗಿ ಬ್ರಿಟಿಷ್ ಹೈಕಮಿಷನ್ 18ರಿಂದ 23 ವರ್ಷ ವಯಸ್ಸಿನ ಯುವತಿಯರಿಗಾಗಿ ಸ್ಪರ್ಧೆಯೊಂದನ್ನು ಆಯೋಜಿಸಿದೆ.
ಬೆಂಗಳೂರಿನಲ್ಲಿರುವ ಬ್ರಿಟಿಷ್ ಡೆಪ್ಯೂಟಿ ಹೈ ಕಮಿಷನ್, ಡೆಪ್ಯುಟಿ ಬ್ರಿಟಿಷ್ ಹೈ ಕಮಿಷನರ್ ಫಾರ್ ಎ ಡೇ ಎಂಬ ಕಾರ್ಯಕ್ರಮ ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಒಂದು ದಿನದ ಮಟ್ಟಿಗೆ ಬ್ರಿಟಿಷ್ ಹೈಕಮಿಷನರ್ ಆಗುವ ಸುವರ್ಣಾವಕಾಶ ಸಿಗಲಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು, ಲಿಂಗ ಸಮಾನತೆ ಏಕೆ ಮುಖ್ಯ ಎಂಬ ವಿಷಯಗ ಬಗ್ಗೆ ಒಂದು ನಿಮಿಷದ ವಿಡಿಯೋ ಮಾಡ ಬೇಕು.ಮತ್ತು ಅವರ ದೊಡ್ಡ ಸ್ಫೂರ್ತಿ ಯಾರು ಎಂಬ ಬಗ್ಗೆಯೂ ವಿಡಿಯೋದಲ್ಲಿ ತಿಳಿಸಿ @UKindia ಮತ್ತು @UKinBenngaluru ವಿಳಾಸಕ್ಕೆ ಟ್ವಿಟ್ಟರ್ , ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ನಲ್ಲಿ #Dayofthegirl ಎಂದು ಟ್ಯಾಗ್ ಮಾಡಬೇಕು.
ಸೆಪ್ಟಂಬರ್ 10 ವಿಡಿಯೋ ಅಪ್ ಲೋಡ್ ಮಾಡಲು ಕೊನೆಯ ದಿನಾಂಕವಾಗಿದೆ.
ಹಾಗಿದ್ದರೇ ಮತ್ತೇಕೆ ತಡ ಈಗಿನಿಂದಲೇ ಹೈಕಮಿಷನರ್ ಆಗಲು ಟ್ರೈ ಮಾಡಿ...ಒಂದ್ ದನ ಬ್ರಿಟಿಷ್ ಹೈ ಕಮಿಷನರ್ ಆಗಿ ಮೆರೆಯಿರಿ. ಆಲ್ ದಿ ಬೆಸ್ಟ್.......
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.