ಏ.1ರಿಂದ ಆರೋಗ್ಯ,ವಾಹನ ವಿಮೆ ಹೆಚ್ಚಳ ?

Published : Mar 14, 2017, 03:29 AM ISTUpdated : Apr 11, 2018, 12:46 PM IST
ಏ.1ರಿಂದ ಆರೋಗ್ಯ,ವಾಹನ ವಿಮೆ ಹೆಚ್ಚಳ ?

ಸಾರಾಂಶ

ಥರ್ಡ್‌ ಪಾರ್ಟಿ ಮೋಟರ್‌ ವಿಮೆ ಹಾಗೂ ಗ್ರೂಪ್‌ ಹೆಲ್ತ್‌ ಇನ್ಶೂರೆನ್ಸ್‌ ಯೋಜನೆಗಳ ಪ್ರೀಮಿಯಂ ಏ.1ರಿಂದಲೇ ಹೆಚ್ಚಾಗಬಹುದು. ಏ.1ರಿಂದ ದೇಶೀಯ ಸಾಮಾನ್ಯ ವಿಮಾ ಮಾರುಕಟ್ಟೆಯಲ್ಲಿ ವಿಮೆಗಳ ನವೀಕರಣ ಪ್ರಕ್ರಿಯೆ ನಡೆಯುತ್ತದೆ

ಮುಂಬೈ(ಮಾ.14): ವಾಹನ ಹಾಗೂ ಆರೋಗ್ಯ ವಿಮಾ ಯೋಜನೆಗಳ ಪ್ರೀಮಿಯಂ ಮೊತ್ತ ಏ.1ರಿಂದ ಅನ್ವಯವಾಗುವಂತೆ ಶೇ.10ರಿಂದ ಶೇ.15ರಷ್ಟು ಹೆಚ್ಚಳವಾಗುವ ಸಂಭವವಿದೆ. ವಿಮಾ ಪರಿಹಾರ ಪಾವತಿ ಪ್ರಕರಣಗಳು ಹೆಚ್ಚಾಗಿರುವುದು ಹಾಗೂ ಬ್ಯಾಂಕ್‌ಗಳ ಬಡ್ಡಿ ದರ ಕುಸಿತದಿಂದಾಗಿ ಹೂಡಿಕೆ ಆದಾಯ ಕುಸಿದಿರುವುದರಿಂದ ಚಿಂತೆಗೆ ಒಳಗಾಗಿರುವ ಜೀವ ವಿಮೆಯೇತರ ವಿಮಾ ಸೌಲಭ್ಯ ಒದಗಿಸುವ ಕಂಪನಿಗಳು, ಪ್ರೀಮಿಯಂ ಹೆಚ್ಚಿಸುವ ಕುರಿತು ಗಂಭೀರ ಚಿಂತನೆಯಲ್ಲಿ ಮುಳುಗಿವೆ.
ಈ ನಡುವೆ, ಥರ್ಡ್‌ ಪಾರ್ಟಿ ಮೋಟರ್‌ ವಿಮೆ ಹಾಗೂ ಗ್ರೂಪ್‌ ಹೆಲ್ತ್‌ ಇನ್ಶೂರೆನ್ಸ್‌ ಯೋಜನೆಗಳ ಪ್ರೀಮಿಯಂ ಏ.1ರಿಂದಲೇ ಹೆಚ್ಚಾಗಬಹುದು. ಏ.1ರಿಂದ ದೇಶೀಯ ಸಾಮಾನ್ಯ ವಿಮಾ ಮಾರುಕಟ್ಟೆಯಲ್ಲಿ ವಿಮೆಗಳ ನವೀಕರಣ ಪ್ರಕ್ರಿಯೆ ನಡೆಯುತ್ತದೆ ಎಂದು ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ)ಯ ಜೀವ ವಿಮೆಯೇತರ ವಿಭಾಗದ ಸದಸ್ಯ ಪಿ.ಜೆ. ಜೋಸೆಫ್‌ ತಿಳಿಸಿದ್ದಾರೆ. ಆಸ್ತಿ ವಿಭಾಗದಡಿ ಬರುವ ಔಷಧ, ಸಿಮೆಂಟ್‌ ಹಾಗೂ ವಿದ್ಯುತ್‌ನಂತಹ ಕ್ಷೇತ್ರಗಳು ಮತ್ತು ಸಮೂಹ ವಿಮಾ ಯೋಜನೆಗಳ ಕಂತನ್ನು ಶೇ.10ರಿಂದ ಶೇ.15ರಷ್ಟುಹೆಚ್ಚಿಸಲು ಪರಿಶೀಲಿಸಲಾಗುತ್ತಿದೆ ಎಂದು ನ್ಯಾಷನಲ್‌ ಇನ್ಶೂರೆನ್ಸ್‌ ಕಂಪನಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇತಿಹಾಸ ಸೃಷ್ಟಿಸಿದ ತಮನ್ನಾ ಭಾಟಿಯಾ.. ನಟಿಯ ಈ ಹೊಸ 'ಕಥೆ'ಗೆ ಬೆಚ್ಚಿಬಿದ್ದ ಇಡೀ ಭಾರತ!
ವಿವಾಹಿತ ತೆರಿಗೆದಾರರಿಗೆ ಭರ್ಜರಿ ಗುಡ್​ನ್ಯೂಸ್​: ಈ ಬಾರಿ ಜಂಟಿ ತೆರಿಗೆ? ಏನಿದು ಹೊಸ ತಂತ್ರ- ಡಿಟೇಲ್ಸ್​ ಇಲ್ಲಿದೆ