ಉಡುಪಿಯ ಅಲೆವೂರು ಗ್ರಾಮ ಪಂಚಾಯತ್ ಯಡವಟ್ಟು: ಸಹಭೋಜನದ ಕಾರ್ಯಕ್ರಮದಲ್ಲಿ ಹೈಡ್ರಾಮ

Published : Mar 14, 2017, 02:32 AM ISTUpdated : Apr 11, 2018, 12:43 PM IST
ಉಡುಪಿಯ ಅಲೆವೂರು ಗ್ರಾಮ ಪಂಚಾಯತ್ ಯಡವಟ್ಟು: ಸಹಭೋಜನದ ಕಾರ್ಯಕ್ರಮದಲ್ಲಿ ಹೈಡ್ರಾಮ

ಸಾರಾಂಶ

ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಈ ಹೇಳಿಕೆ ಕೆಲವೊಮ್ಮೆ ಯಾವ ರೀತಿಯಲ್ಲಿ ಅಪಹಾಸ್ಯಕ್ಕೆ ಒಳಗಾಗುತ್ತೆ ಎನ್ನುವುದಕ್ಕೆ ಇಲ್ಲಿದೆ ಒಂದು ಸಾಕ್ಷಿ. ಕೊರಗರ ಮನೆಯಲ್ಲಿ ಸಹಭೋಜನದ ಹೆಸರಿನಲ್ಲಿ  ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಹೈಡ್ರಾಮವೇ ನಡೆದು ಹೋಗಿದೆ. ಅದೇನು ಅಂತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ

ಉಡುಪಿ(ಮಾ.14): ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಈ ಹೇಳಿಕೆ ಕೆಲವೊಮ್ಮೆ ಯಾವ ರೀತಿಯಲ್ಲಿ ಅಪಹಾಸ್ಯಕ್ಕೆ ಒಳಗಾಗುತ್ತೆ ಎನ್ನುವುದಕ್ಕೆ ಇಲ್ಲಿದೆ ಒಂದು ಸಾಕ್ಷಿ. ಕೊರಗರ ಮನೆಯಲ್ಲಿ ಸಹಭೋಜನದ ಹೆಸರಿನಲ್ಲಿ  ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಹೈಡ್ರಾಮವೇ ನಡೆದು ಹೋಗಿದೆ. ಅದೇನು ಅಂತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ

ಸಿಎಂ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಆಡಿಗಳಿಗೆ ಹೋಗಿ ಗ್ರಾಮ ವಾಸ್ತವ್ಯ ಹೂಡಿ ಜನಪ್ರಿಯತೆ ಗಳಿಸಿದ್ದರು. ಅದೇ ರೀತಿ ಈ ಬಾರಿಯ ಹೊಸ ವರ್ಷ ದಿನ ಕೊರಗ ಜನಾಂಗದವರ ಮನೆಯಲ್ಲಿ  ಆಹಾರ ಸೇವಿಸಿ ಸಹಭೋಜನ ಕೂಡ ಮಾಡಿದ್ರು. ಈ ಕಾರ್ಯಕ್ರಮ ಭಾರೀ ಜನಪ್ರೀಯತೆ ಗಳಿಸಿತ್ತು. ಇದೇ ಕಾರ್ಯಕ್ರಮ ನಕಲು ಮಾಡಲು ಹೋದ  ಉಡುಪಿಯ ಅಲೆವೂರು ಗ್ರಾಮ ಪಂಚಾಯತ್ ಎಡವಿದೆ. ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಹೊರಗಿನಿಂದ ತರಿಸಿಕೊಂಡ ಊಟ ತಿಂದು ತೇಗಿಕಾಟಾಚಾರದ ಸಹಭೋಜನ ನಡೆಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಈಬಗ್ಗೆ  ನನಗೆ ಗೊತ್ತೆ ಇಲ್ಲ ಎಂದಿದ್ದಾರೆ.

ಅಡುಗೆ ಭಟ್ಟರ ಮನೆಯಲ್ಲಿ ಊಟ ತಯಾರಿಸಿ ಕೊರಗರ ಮನೆಯಲ್ಲಿ ಬಡಿಸಲಾಗಿದೆಯಂತೆ. ಯಾವ ಕೊರಗರೂ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳ ಜೊತೆ ಊಟಕ್ಕೆ ಕೂರಲಿಲ್ಲ. ಬಂದವರು ಅವರ ಪಾಡಿಗೆ ಉಂಡು ಹೋಗಿದ್ದಾರೆ. ಅಷ್ಟೆ ಅಲ್ಲದೆ ಕಾರ್ಯಕ್ರಮಕ್ಕೆ ಪಂಚಾಯತ್ ನಡೆ ಕೊರಗ ಸಮುದಾಯದ ಎಡೆಗೆ ಎಂಬ ಹೆಸರು ನೀಡಲಾಗಿತ್ತು. ಆದ್ರೆ ಇದು ಕೇವಲ ಕಾಟಾಚಾರದ ಶೀರ್ಷಿಕೆಯಾಗಿ ಉಳಿದಿದೆ.

ಇಂದಿಗೂ ಕರಾವಳಿಯ ಕೊರಗರು ಅತ್ಯಂತ ಹಿಂದುಳಿದಿದ್ದಾರೆ. ತಮಗಾಗಿ ಬರುವ ಅನುದಾನವನ್ನು ಬಳಸಿಕೊಳ್ಳುವ ಅರಿವೂ ಇಲ್ಲದ ಮುಗ್ದ ಜನರು.  ಜನರ ಮುಗ್ಧತೆಯನ್ನ ಜನಪ್ರತಿನಿಧಿಗಳು, ಅಧಿಕಾರಿಗಳು, ಈ ರೀತಿ ಬಳಸಿಕೊಳ್ತಾರೆ ಅಂದ್ರೆ ನಿಜಕ್ಕೂ ನಾಚಿಕೇಗೇಡು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

KSRTC ಬಸ್‌ನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುವವರಿಗೆ ಬಿಗ್ ಶಾಕ್, 8 ಲಕ್ಷಕ್ಕೂ ಅಧಿಕ ದಂಡ ವಸೂಲಿ!
ಮತ್ತೆ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಚಿಂತನೆ, ಪ್ರಯಾಣಿಕರ ಆಕ್ರೋಶ, ಹೋರಾಟದ ಎಚ್ಚರಿಕೆ ಕೊಟ್ಟ ಸಂಸದ ಸೂರ್ಯ