ಸಿಎಂ ಎಚ್ .ಡಿ.ಕುಮಾರಸ್ವಾಮಿಯಿಂದ ಪೊಲೀಸ್ ವರ್ಗಾವಣೆಗೆ ದಿಢೀರ್ ಬ್ರೇಕ್

By Web DeskFirst Published Sep 26, 2018, 10:33 AM IST
Highlights

ಕಾಂಗ್ರೆಸ್ ಮುಖಂಡರು ಅಸಮಾಧಾನ ಹೊರ ಹಾಕಿದ ನಿಟ್ಟಿನಲ್ಲಿ ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 141 ಇನ್ಸ್ ಪೆಕ್ಟರ್‌ಗಳ ಪೈಕಿ 16 ಮಂದಿಯ ವರ್ಗಾವಣೆಗೆ ದಿಢೀರ್ ಬ್ರೇಕ್ ಹಾಕಿದ್ದಾರೆ. 

ಬೆಂಗಳೂರು :  ಪೊಲೀಸರ ಸಾಮಾನ್ಯ ವರ್ಗಾವಣೆ ವಿಚಾರವಾಗಿ ಕಾಂಗ್ರೆಸ್ ಶಾಸಕರು ಅತೃಪ್ತಿ ಹೊರ ಹಾಕಿದ ಬೆನ್ನೆಲ್ಲೇ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ಸೋಮವಾರ ನಡೆದಿದ್ದ 141 ಇನ್ಸ್ ಪೆಕ್ಟರ್‌ಗಳ ಪೈಕಿ 16 ಮಂದಿಯ ವರ್ಗಾವಣೆಗೆ ದಿಢೀರ್ ಬ್ರೇಕ್ ಹಾಕಿದ್ದಾರೆ. 

ಅಲ್ಲದೆ, ಇನ್ನುಳಿದ 125 ಇನ್ಸ್ ಪೆಕ್ಟರ್‌ಗಳಿಗೆ ಮಂಗಳವಾರ ರಾತ್ರಿವರೆಗೆ ಸಹ ಕಾರ್ಯಸ್ಥಾನ ಬಿಡು ಗಡೆಗೆ ಇಲಾಖೆ ಅನುಮತಿ ಪತ್ರ ನೀಡದೆ ಕುತೂಹಲ  ಮೂಡಿಸಿದೆ. ಇದರಲ್ಲಿ ಸಹ ಕೆಲವು ಬದಲಾವಣೆಗಳಾ ಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಈ ವರ್ಗಾವಣೆ ವಿಷಯದಲ್ಲಿ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಕುಟುಂಬದ ಸದಸ್ಯರೂ ಸೇರಿ ದಂತೆ ಅವರ ಆಪ್ತರಾದ ಪ್ರಸಾದ್ ಬಾಬು ಅಲಿ ಯಾಸ್ ಕಬಡ್ಡಿ ಬಾಬು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಗೊಟ್ಟಿಗೆರೆ ಮಂಜು ಅವರ ಮಾತೇ ಹೆಚ್ಚು ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಅವರ ವಿರುದ್ಧ ಕಾಂಗ್ರೆಸ್ಸಿಗರು ಸಿಡಿದೆದ್ದಿದ್ದಾರೆ. 

ಡಿಕೆಶಿ ಸೋದರರಿಗೂ ಅಸಮಾಧಾನ: ಗಮನಾರ್ಹವೆಂದರೆ ಮೈತ್ರಿ ಕುಮಾರಸ್ವಾಮಿ ಅವರೊಂದಿಗೆ ಗೋಡೆಯಂತೆ ಗಟ್ಟಿಯಾಗಿ ನಿಂತು ಕೊಂಡಿರುವ ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್ ಸೋದರರು ಸಹ ಅಸಮಾಧಾನಗೊಂಡಿದ್ದು, ತಮ್ಮ ಸ್ವಂತ ಜಿಲ್ಲೆ ರಾಮನಗರ ಹಾಗೂ ಬೆಂಗಳೂರು ನಗರದಲ್ಲಿ ನಮಗೆ ಮಾನ್ಯತೆ ಸಿಕ್ಕಿಲ್ಲ ಎಂದು ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಈ ಅಸಮಾಧಾನದ ವಿಚಾರ ತಿಳಿದ ಮುಖ್ಯಮಂತ್ರಿಗಳು, ತಕ್ಷಣವೇ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್. ರಾಜು ಅವರಿಗೆ ಕರೆ ಮಾಡಿ ವರ್ಗಾವಣೆಗೆ ತಡೆ ನೀಡುವಂತೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ಕಬಡ್ಡಿ ಆಟಕ್ಕೆ ‘ಕೈ’ ಥಂಡಾ: ಸರ್ಕಾರ ರಚನೆ ಗೊಂಡ ಬಳಿಕ ಪೊಲೀಸ್ ವರ್ಗಾವಣೆ ವಿಷಯವಾಗಿ ಮಿತ್ರ ಪಕ್ಷಗಳ ನಡುವೆ ಸಮನ್ವಯತೆ ಮೂಡಲಿಲ್ಲ. ಆಗ ಮಿತ್ರ ಪಕ್ಷಗಳ ಶಾಸಕರಿರುವ ಕ್ಷೇತ್ರಗಳಿಗೆ ಆಯಾ ಶಾಸಕರ ಶಿಫಾರಸು ಹಾಗೂ ಬಿಜೆಪಿ ಶಾಸಕರ ಕ್ಷೇತ್ರ ಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದ ಮಿತ್ರ ಪಕ್ಷಗಳ ನಾಯಕರ ಮಾತಿನಂತೆ ವರ್ಗಾವಣೆಗೆ ತೀರ್ಮಾನಿಸಲಾಗಿತ್ತು. ಆದರೀಗ ಸೋಮವಾರ ನಡೆದ ಪೊಲೀಸರ ವರ್ಗಾವಣೆಯಲ್ಲಿ ಮೈತ್ರಿ ಧರ್ಮ ಉಲ್ಲಂಘನೆಯಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. 

ತಮ್ಮ ಸ್ವಕ್ಷೇತ್ರ ರಾಮನಗರ, ಬೆಂಗಳೂರು ನಗರದಲ್ಲಿ ಡಿ.ಕೆ.ಶಿವಕುಮಾರ್ ಸೋದರರ ಶಿಫಾರಸಿಗೂ ಮಾನ್ಯತೆ ಕೊಟ್ಟಿಲ್ಲ. ಕನಕಪುರ ಕ್ಷೇತ್ರವು ಚನ್ನಪಟ್ಟಣ ಉಪ ವಿಭಾಗದ ವ್ಯಾಪ್ತಿಗೆ ಬರುತ್ತದೆ. ಈ ಉಪ ವಿಭಾಗದ ಡಿವೈಎಸ್ಪಿ, ಕನಕಪುರ ಸೋದರರ ಆಪ್ತ ಎನ್ನಲಾದ ಮಂಜುನಾಥ್ ಅವರನ್ನು ಏಕಾಏಕಿ ಬದಲಿಸಿದ ಸರ್ಕಾರವು, ಆ ಸ್ಥಾನಕ್ಕೆ ಸಿಐಡಿಯಲ್ಲಿದ್ದ ಜೆಡಿಎಸ್ ನಾಯಕರ ಆಪ್ತ ಮಲ್ಲೇಶ್ ಅವರನ್ನು ನಿಯೋಜಿಸಿದೆ. ಹಾಗೆಯೇ ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ  ಗೊಟ್ಟಿಗೆರೆ ಮಂಜು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳನ್ನು ಸೋಮವಾರ ಸಂಜೆ ಭೇಟಿಯಾಗಿ ಸಂಸದ ಡಿ.ಕೆ.ಸುರೇಶ್ ನೇರವಾಗಿ ಆಕ್ಷೇಪಿಸಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

click me!