ಗುಟ್ಕಾ, ಪಾನ್ ಮಸಾಲಾ ಸಂಪೂರ್ಣ ಬ್ಯಾನ್: ಅಡಿಕೆ ಬೆಳೆಗಾರರಿಗೆ ನಡುಕ!

By Web DeskFirst Published Oct 19, 2019, 3:44 PM IST
Highlights

ಗುಟ್ಕಾ, ಪಾನ್ ಮಸಾಲಾ ಸಂಪೂರ್ಣ ಬ್ಯಾನ್| ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳಿಗೆ ಗುಡ್‌ ಬೈ ಎಂದ ಸರ್ಕಾರ| ಅಡಿಕೆ ಬೆಳೆಯನ್ನೇ ಅವಲಂಭಿಸಿರುವ ಜನರಿಗೆ ನಡುಕ

ಡೆಹ್ರಾಡೂನ್[ಅ.19]: ಗುಟ್ಕಾ, ಪಾನ್ ಮಸಾಲಾ ಆರೋಗ್ಯಕ್ಕೆ ಹಾನಿಕಾರಕ ಎಂಬ ಸಾಲು ಉತ್ಪನ್ನದ ಮೇಲಿದ್ದರೂ ಸೇವಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ನಿಟ್ಟಿನಲ್ಲಿ ಹಲವಾರು ರಾಜ್ಯಗಳು ಇದನ್ನು ನಿಷೇಧಿಸುವ ನಿರ್ಧಾರಕ್ಕೆ ಬಂದರೂ, ಅಡಿಕೆ ಬೆಳೆಗಾರರು ಮಾತ್ರ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಸದ್ಯ ಉತ್ತರಾಖಂಡ್ ಸರ್ಕಾರ ಗುಟ್ಕಾ, ಪಾನ್ ಮಸಾಲಾ ಬ್ಯಾನ್ ಮಾಡಿದ್ದು, ಅಡಿಕೆ ಬೆಳೆಗಾರರಿಗೆ ನಡುಕ ಆರಂಭವಾಗಿದೆ.

‘ರಾಜ್ಯದಲ್ಲಿ ಹಂತ ಹಂತವಾಗಿ ತಂಬಾಕು, ಗುಟ್ಕಾ ನಿಷೇಧ’

ಹೌದು ಉತ್ತರಾಖಂಡ್ ಸರ್ಕಾರ, ರಾಜ್ಯದಲ್ಲಿ ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಗುಟ್ಕಾ ಹಾಗೂ ಪಾನ್ ಮಸಾಲಾ ತಯಾರಿಕೆ, ಸಂಗ್ರಹಣೆ, ವಿತರಣೆ ಹಾಗೂ ಮಾರಾಟ ಹೀಗೆ ಎಲ್ಲವನ್ನೂ ಸಂಪೂರ್ಣವಾಗಿ ನಿಷೇಧಿಸಿದೆ. ಇಲ್ಲಿನ ಆಹಾರ ಸುರಕ್ಷತಾ ಆಯುಕ್ತ ನಿತೀಶ್ ಕುಮಾರ್ ಜಾ ಶುಕ್ರವಾರದಂದು ಈ ಆದೇಶ ಹೊರಡಿಸಿದ್ದಾರೆ. ಈ ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರಕವೆಂಬ ನಿಟ್ಟಿನಲ್ಲಿ ರಾಜ್ಯದಲ್ಲಿ ಇದನ್ನು ನಿಷೇಧಿಸಲಾಗಿದೆ ಎಂಬ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಇ-ಸಿಗರೇಟ್ ಬ್ಯಾನ್ ಘೋಷಣೆ ನಿಮ್ಮಿಂದೇಕೆ?: ಕಿರಣ್ ಬೆರಗಾದರು ನಿರ್ಮಲಾ ಉತ್ತರಕ್ಕೆ!

ಆದರೆ ಈ ನಿರ್ಧಾರ ಅಡಿಕೆ ಬೆಳೆಯನ್ನೇ ಅವಲಂಬಿಸಿ ಜೀವನ ಸಾಗಿಸುವ ಬೆಳೆಗಾರರಿಗೆ ನುಂಗಲಾರದ ತುತ್ತಾಗಿದೆ. ನಿಷೇಧದಿಂದ ಅಡಿಕೆ ಬೇಡಿಕೆ ಕುಸಿಯುವುದರಿಂದ ಬೆಳೆಗಾರರಿಗೆ ನಷ್ಟವಾಗುತ್ತದೆ. ಇದೇ ಕಾರಣದಿಂದ ಗುಟ್ಕಾ, ಪಾನ್ ಮಸಾಲಾ ನಿಷೇಧಿಸುವ ಮಾತು ಸದ್ದು ಮಾಡುವಾಗೆಲ್ಲಾ ಅಡಿಕೆ ಬೆಳೆಯನ್ನೇ ಅವಲಂಬನೆಯಾಗಿರುವ ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗದ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಾರೆ.

click me!