ಖಾತೆಯಲ್ಲಿ 80 ಲಕ್ಷವಿದ್ರೂ ಅಪರೇಷನ್‌ಗೆ ಸಿಗದ ಹಣ: ಪಿಎಂಸಿ ಹಗರಣಕ್ಕೆ ನಾಲ್ಕನೇ ಬಲಿ

Published : Oct 19, 2019, 02:33 PM ISTUpdated : Oct 19, 2019, 02:34 PM IST
ಖಾತೆಯಲ್ಲಿ 80 ಲಕ್ಷವಿದ್ರೂ ಅಪರೇಷನ್‌ಗೆ ಸಿಗದ ಹಣ: ಪಿಎಂಸಿ ಹಗರಣಕ್ಕೆ ನಾಲ್ಕನೇ ಬಲಿ

ಸಾರಾಂಶ

ಖಾತೆಯಲ್ಲಿ 80 ಲಕ್ಷವಿದ್ರೂ ಅಪರೇಷನ್‌ಗೆ ಸಿಗದ ಹಣ| ಅಪರೇಷನ್‌ಗೆ ಹಣ ಸಿಗದೆ 84ರ ವೃದ್ಧ ಸಾವು| ಪಿಎಂಸಿ ಹಗರಣಕ್ಕೆ ನಾಲ್ಕನೇ ಬಲಿ| 

ಮುಂಬೈ[ಅ.19]: ಬಹುಕೋಟಿ ಅವ್ಯವಹಾರ ಪ್ರಕರಣದ ಸುಳಿಯಲ್ಲಿ ಸಿಲುಕಿಕೊಂಡಿರುವ ಪಂಜಾಬ್‌ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ (ಪಿಎಂಸಿ)ನ ಇನ್ನೊಬ್ಬ ಗ್ರಾಹಕ ಚಿಕಿತ್ಸೆಗೆ ಹಣ ತೆಗೆಯಲು ಸಾಧ್ಯವಾಗದೇ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪಿಎಂಸಿ ಹಗರಣ: ಸಚಿವೆ ನಿರ್ಮಲಾಗೆ ಬ್ಯಾಂಕ್‌ ಠೇವಣಿದಾರರಿಂದ ಮುತ್ತಿಗೆ

ಕಳೆದೊಂದು ವಾರದಲ್ಲಿ ನಡೆದ ನಾಲ್ಕನೇ ಪ್ರಕರಣ ಇದಾಗಿದೆ. ಘಟನೆಗೆ ಸಂಬಂಧಿಸಿ ಗ್ರಾಹಕರು ಬುಧವಾರದಿಂದಲೂ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಮುರಳೀಧರ್‌ ಧರಾ ಎಂಬವರು ಹೃದಯಾಘಾತದಿಂದ ನಿಧನರಾದ ಪಿಎಂಸಿ ಹಿರಿಯ ಗ್ರಾಹಕ.

8880 ಕೋಟಿ ಒಟ್ಟು ಸಾಲದಲ್ಲಿ ಎಚ್‌ಡಿಐಎಲ್‌ಗೆ 6500 ಕೋಟಿ!

ಅನಾರೋಗ್ಯದ ಹಿನ್ನೆಲೆಯಲ್ಲಿ ಹಣ ವಿತ್‌ಡ್ರಾ ಮಾಡಲು ಪ್ರಯತ್ನಿಸಿ ಸಾಧ್ಯವಾಗಿರಲಿಲ್ಲ. ಪರಿಣಾಮ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಶಪಡಿಸಿದ 200ಕೆಜಿ ಗಾಂಜಾ ಎಲ್ಲಿ? ಪೊಲೀಸ್ ಉತ್ತರಕ್ಕೆ ದಂಗಾಗಿ ಆರೋಪಿ ಖುಲಾಸೆಗೊಳಿಸಿದ ಕೋರ್ಟ್
ಹೊಸ ವರ್ಷ 2026: ಕರ್ನಾಟಕ ರಾಜ್ಯದ ಸಾರ್ವತ್ರಿಕ ರಜೆಗಳ ಪಟ್ಟಿ, ಕೊಡಗು ಜಿಲ್ಲೆಗೆ ಮಾತ್ರ ಸ್ಪೆಷಲ್ ರಜೆ