ಪ್ರತಿ ಜಿಲ್ಲೆಗಳಲ್ಲೂ ಆಯುಷ್‌ ಆಸ್ಪತ್ರೆ ಸ್ಥಾಪನೆ: ಕೇಂದ್ರ

By Kannadaprabha NewsFirst Published Nov 4, 2019, 10:36 AM IST
Highlights

ದೇಶದ ಪ್ರತಿ ಜಿಲ್ಲೆಗಳಲ್ಲೂ ಆಯುಷ್‌ ಆಸ್ಪತ್ರೆ ಅಸ್ತಿತ್ವಕ್ಕೆ ಬರಲಿವೆ ಎಂದು ಕೇಂದ್ರ ಸಚಿವ ಶ್ರೀಪಾದ್‌ ಯಸ್ಸೋ ನಾಯ್ಕ್ ಹೇಳಿದ್ದಾರೆ.

ಹೈದ್ರಾಬಾದ್‌ [ನ.04]: ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ದೇಶದ ಪ್ರತಿ ಜಿಲ್ಲೆಗಳಲ್ಲೂ ಆಯುಷ್‌ ಆಸ್ಪತ್ರೆ ಅಸ್ತಿತ್ವಕ್ಕೆ ಬರಲಿವೆ ಎಂದು ಕೇಂದ್ರ ಸಚಿವ ಶ್ರೀಪಾದ್‌ ಯಸ್ಸೋ ನಾಯ್ಕ್ ಹೇಳಿದ್ದಾರೆ.

ಹೈದ್ರಾಬಾದ್‌ನಲ್ಲಿ ಉನ್ನತೀಕರಿಸಿದ ಕೇಂದ್ರೀಯ ಯುನಾನಿ ಸಂಶೋಧನಾ ಸಂಸ್ಥೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಆಯುಷ್‌ ಚಿಕಿತ್ಸೆಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 

ಆಯುಷ್ಮಾನ್‌ ಭಾರತ ಸೂಪರ್‌ ಹಿಟ್‌...

ಹಲವಾರು ಜಾಢ್ಯಗಳು ಈ ಚಿಕಿತ್ಸಾ ಕ್ರಮದಿಂದ ವಾಸಿಯಾಗಿವೆ. ವಿವಿಧೆಡೆ ಈಗಾಗಲೇ 50 ಹಾಸಿಗೆಗಳ 100 ಆಯುಷ್‌ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಒಂದು ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಆಯುಷ್‌ ಆಸ್ಪತ್ರೆ ನಿರ್ಮಾಣಕ್ಕೆ ರಾಜ್ಯ ಸರ್ಕಾರಗಳು ಪ್ರಸ್ತಾವನೆ ಸಲ್ಲಿಸಿವೆ. ಮುಂದಿನ 3-4 ವರ್ಷದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.

click me!