ಟ್ರಂಪ್‌ ‘ಅಭೇದ್ಯ’ ಗೋಡೆಗೆ ಅಕ್ರಮ ವಲಸಿಗರಿಂದ ಕನ್ನ!

By Kannadaprabha NewsFirst Published Nov 4, 2019, 10:30 AM IST
Highlights

ಅಕ್ರಮ ವಲಸಿಗರು ದೇಶದೊಳಕ್ಕೆ ಪ್ರವೇಶಿಸುವುದನ್ನು ತಡೆಯಲು ಮೆಕ್ಸಿಕೋ ಗಡಿಯಲ್ಲಿ ‘ಅಭೇದ್ಯ’ ಗೋಡೆ | ಡ್ರಗ್ಸ್‌ ವಾಹನ ನುಸುಳಿಸುವಷ್ಟುದೊಡ್ಡ ರಂಧ್ರ | ಈ ವರದಿ ನಿರಾಕರಿಸಿದ ಟ್ರಂಪ್ 

ವಾಷಿಂಗ್ಟನ್‌ (ನ. 04): ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಕ್ರಮ ವಲಸಿಗರು ದೇಶದೊಳಕ್ಕೆ ಪ್ರವೇಶಿಸುವುದನ್ನು ತಡೆಯಲು ಮೆಕ್ಸಿಕೋ ಗಡಿಯಲ್ಲಿ ‘ಅಭೇದ್ಯ’ ಗೋಡೆ ನಿರ್ಮಿಸಿದ್ದಾರೆ. ಆದರೆ, ಮೆಕ್ಸಿಕೋದ ಕಳ್ಳಸಾಗಾಣಿಕೆದಾರರು ಮಾರುಕಟ್ಟೆಯಲ್ಲಿ ಲಭ್ಯವಿರುವ ಅಗ್ಗದ ಸಾಧನಗಳನ್ನು ಬಳಸಿಕೊಂಡು ಗೋಡೆಗೇ ಕನ್ನ ಹಾಕುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಹಾರ್ಡ್‌ವೇರ್‌ ಅಂಗಡಿಗಳಲ್ಲಿ 7000 ರು.ಗೆ ಸಿಗುವ ಸಾಧನಗಳಿಂದ ಸ್ಟೀಲ್‌ ಮತ್ತು ಕಾಂಕ್ರೀಟ್‌ನಿಂದ ನಿರ್ಮಿಸಿದ ಗೋಡೆಗೆ ರಂಧ್ರಗಳನ್ನು ಕೊರೆಯಲಾಗಿದ್ದು, ಅದು ಕಳ್ಳಸಾಗಾಣಿಕೆದಾರರು ಹಾಗೂ ಡ್ರಗ್ಸ್‌ ತುಂಬಿದ ವಾಹನವನ್ನು ದಾಟಿಸುವಷ್ಟುದೊಡ್ಡದಾಗಿದೆ ಎಂದು ‘ವಾಷಿಂಗ್ಟನ್‌ ಪೋಸ್ಟ್‌’ ವರದಿ ಮಾಡಿದೆ.

ಚಳಿಗಾಲದಲ್ಲಿ ದೊಡ್ಡ ದಾಳಿ ನಡೆಸಲು ಉಗ್ರರ ಸಂಚು

ಗೋಡೆಗೆ ಬಳಸಲಾದ ಸ್ಟೀಲ್‌ ಕಂಬಗಳನ್ನು ಕೆಲವೇ ನಿಮಿಷಗಳಲ್ಲಿ ತುಂಡರಿಸಿ ಅದರ ಮೂಲಕ ಕಳ್ಳಸಾಗಾಣಿಕೆದಾರರು ಗಡಿಯೊಳಕ್ಕೆ ಪ್ರವೇಶಿಸಲು ಸಾಧ್ಯವಿದೆ. ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್‌ ಡಿಯಾಗೊ ಬಳಿ ಗೋಡೆಯನ್ನು ತುಂಡರಿಸಿರುವ ಹೆಚ್ಚಿನ ಪ್ರಕರಣಗಳು ನಡೆದಿವೆ ಎಂದು ವರದಿಗಳು ತಿಳಿಸಿವೆ.

ಇದೇ ವೇಳೆ ಕಳ್ಳ ಸಾಗಾಣಿಕೆದಾರರು ಮೆಕ್ಸಿಕೋ ಗೋಡೆಗಳನ್ನು ತುಂಡರಿಸಿದ್ದಾರೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ನಾವು ಶಕ್ತಿಶಾಲಿ ಗೋಡೆಯನ್ನು ನಿರ್ಮಿಸಿದ್ದೇವೆ. ಅದೆಷ್ಟೇ ಶಕ್ತಿಶಾಲಿಯಾಗಿದ್ದರೂ, ಏನನ್ನೂ ಬೇಕಾದರೂ ಕತ್ತರಿಸಬಹುದು. ಕತ್ತರಿಸಿದರೂ, ಸುಲಭವಾಗಿ ಸರಿಪಡಿಸಬಹುದಾಗಿದೆ ಎಂದು ಹೇಳಿದ್ದಾರೆ.

click me!