
2018ರಲ್ಲಿ ಸುಪ್ರೀಂ ಪ್ರಕಟಿಸಿರುವ ಮಹತ್ವದ ತೀರ್ಪುಗಳಿವು.
1. ಏಪ್ರಿಲ್ 5: ಸಲ್ಮಾನ್ ಖಾನ್ ಜೈಲಿಗೆ
ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಜೋಧಪುರ ಕೋರ್ಟ್ನಿಂದ 5 ವರ್ಷ ಜೈಲು ಶಿಕ್ಷೆ. ಕೂಡಲೇ ಬಂಧನ. 2 ದಿನ ಬಳಿಕ ಜಾಮೀನು ಮೇಲೆ ಬಿಡುಗಡೆ.
ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಸಲ್ಲೂ ಕೈದಿ ನಂ.106
2. ಏಪ್ರಿಲ್ 25: ಆಸಾರಾಂಗೆ ಜೀವನವಿಡೀ ಜೈಲು
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಆಧ್ಯಾತ್ಮ ಗುರು ಆಸಾರಾಂ ಬಾಪುಗೆ ಆಜೀವ ಜೈಲು ಶಿಕ್ಷೆ ವಿಧಿಸಿ ಜೋಧಪುರ ಕೋರ್ಟ್ ತೀರ್ಪು
ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಅಪ್ರಾಪ್ತೆಯ ಅತ್ಯಾಚಾರ : ಸಾವಿರಾರು ಕೋಟಿ ಒಡೆಯನಿಗೆ ಸಾಯುವವರೆಗೆ ಜೈಲು
3. ಜುಲೈ 07: ಶರವೇಗದಲ್ಲಿ ಕೋರ್ಟ್ ತೀರ್ಪು
ಕೊಲೆ ನಡೆದ 11 ದಿನದಲ್ಲಿ ತೀರ್ಪು ಪ್ರಕಟಿಸಿ ಚಿತ್ರದುರ್ಗ ಕೋರ್ಟ್ ದಾಖಲೆ ಬರೆಯಿತು. ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸಿದ ಚಿತ್ರದುರ್ಗ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಘಟನೆ ನಡೆದ ಕೇವಲ 11 ದಿನಗಳಲ್ಲಿಯೇ ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ಇತಿಹಾಸ ಸೃಷ್ಟಿಸಿದೆ.
4. ಆಗಸ್ಟ್ 14: ಕೊನೆಗೂ ಮಹದಾಯಿ ಪಾಲು
ಮಹದಾಯಿ ನ್ಯಾಯಾಧಿಕರಣ ಆ.14ರಂದು ಅಂತಿಮ ಐತೀರ್ಪು ಪ್ರಕಟಿಸಿತು. ಕರ್ನಾಟಕಕ್ಕೆ 13.42 ಟಿಎಂಸಿ ಹಾಗೂ ಗೋವಾಕ್ಕೆ 24 ಟಿಎಂಸಿ ಹಂಚಿಕೆ ಮಾಡಿತು. ಹಂಚಿಕೆಯಾದ ನೀರು ರೈತರಿಗೆ ಸದ್ಯಕ್ಕೆ ಸಿಗುವಂತೆ ಕಾಣುತ್ತಿಲ್ಲ.
ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಮಹದಾಯಿ ತೀರ್ಪು ಪ್ರಕಟ: ಕರ್ನಾಟಕಕ್ಕೆ 4 ಟಿಎಂಸಿ ಕುಡಿಯುವ ನೀರು
5. ಸಪ್ಟೆಂಬರ್ 06: ಸಲಿಂಗಕಾಮ ಸಕ್ರಮ
158 ವರ್ಷಗಳಿಂದ ದೇಶದಲ್ಲಿ ಅಕ್ರಮ ಎನಿಸಿ ಕೊಂಡಿದ್ದ ಸಲಿಂಗಕಾಮವನ್ನು ಸಕ್ರಮಗೊಳಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿತು.
ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಸಲಿಂಗ ಕಾಮ ಅಪರಾಧವಲ್ಲ ಎಂದ ಸುಪ್ರೀಂಕೋರ್ಟ್
6. ಸಪ್ಟೆಂಬರ್ 23: ಪಟಾಕಿ ಸಿಡಿಸಲು ಟೈಂ ಫಿಕ್ಸ್
ಮಾಲಿನ್ಯ ಹಿನ್ನೆಲೆ ಪಟಾಕಿ ಸಿಡಿಸಲು ರಾತ್ರಿ 8 ರಿಂದ 10ರ ಸಮಯ ನಿಗದಿಪಡಿಸಿ ಆ.23ರಂದು ಸುಪ್ರೀಂಕೋರ್ಟ್ ಆದೇಶಿಸಿತು. ಹೊಸವರ್ಷ, ಕ್ರಿಸ್‌ಮಸ್ ಸಂದರ್ಭ ರಾತ್ರಿ 11.55ರಿಂದ ಮಧ್ಯರಾತ್ರಿ 12.30ರವರೆಗೆ ಅವಕಾಶ. ಆದರೆ ಇದು ಪಾಲನೆಯಾಗಲಿಲ್ಲ.
7. ಸೆಪ್ಟೆಂಬರ್ 25: ರಾಜ್ ಕಿಡ್ನ್ಯಾಪರ್ಸ್ ಖುಲಾಸೆ
ವರನಟ ಡಾ| ರಾಜ್ ಕುಮಾರ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನರಹಂತಕ, ದಂತಚೋರ ವೀರಪ್ಪನ್‌ನ 9 ಸಹಚರರನ್ನು ತಮಿಳುನಾಡು ಕೋರ್ಟ್ ಖುಲಾಸೆಗೊಳಿಸಿತು.
8. ಸೆಪ್ಟೆಂಬರ್ 26: ಆದಾರ್ ಕಡ್ಡಾಯ ಅಲ್ಲ
ಸರ್ಕಾರಿ ಸವಲತ್ತು ಪಡೆಯಲು ಆಧಾರ್ ಕಡ್ಡಾಯ. ಆದರೆ ಮೊಬೈಲ್ ಸಂಪರ್ಕ ಬ್ಯಾಂಕ್ ಖಾತೆಗೆ ಕಡ್ಡಾಯವಲ್ಲ. ಎಂದು ಸೆ. 26ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು.
ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಆಧಾರ್ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ: ಕೆಲವು ಷರತ್ತು ಅನ್ವಯ!
8. ಸೆಪ್ಟೆಂಬರ್ 27: ವ್ಯಭಿಚಾರ ಅಪರಾಧವಲ್ಲ:
ವ್ಯಭಿಚಾರ ಅಪರಾಧವಲ್ಲ ಎಂದು ಸೆ. 27ರಂದು ಸುಪ್ರೀಂ ಸಾರಿತು. ಬ್ರಿಟಿಷರ ವ್ಯಭಿಚಾರ ತಡೆ ಕಾನೂನು ರದ್ದುಗೊಳಿಸಿತು. ಹೆಂಡತಿಗೆ ಗಂಡ ಮಾಲೀಕನಲ್ಲ ಎಂದಿತು.
ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಅಕ್ರಮ ಸಂಬಂಧ ಅಪರಾಧವಲ್ಲ: ಸುಪ್ರೀಂ ತೀರ್ಪು!
9. ಸೆಪ್ಟೆಂಬರ್ 28: ಅಯ್ಯಪ್ಪ ಗುಡಿಗೆ ಯಾರು ಬೇಕಾದರೂ ಹೋಗ್ರಪ್ಪ
10 ರಿಂದ 50ವರ್ಷದೊಳಗಿನ ಮಹಿಳೆಯರು ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸುವಂತಿಲ್ಲ ಎಂಬ ಸಂಪ್ರದಾಯ 800 ವರ್ಷಗಳಿಂದ ಇತ್ತು. ಅದನ್ನು ಸೆ. 28 ರಿಂದು ಸುಪ್ರೀಂಕೋರ್ಟ್ ರದ್ದುಗೊಳಿಸಿತು.
ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಸುಪ್ರೀಂ ಅಸ್ತು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ