
ಕಲಬುರಗಿ[ಏ.12]: ಕಲಬುರಗಿಯಲ್ಲೊಂದು ವಿಚಿತ್ರ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ. ಕುರಿಗಳಿಗೆ ಮರದ ತಪ್ಪಲು ಕೊಯ್ಯಲು ಬಳಸುವ ಕುಡಗೋಲು ತಗುಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಈ ಘಟನೆ ಎಲ್ಲರನ್ನೂ ನಿಬ್ಬೆರಗಾಗಿಸಿದೆ.
ಕುರಿಗಾಹಿಯೊಬ್ಬ ತನ್ನ ಉದ್ದನೆಯ ಹಿಡಿಕೆಯುಳ್ಳ ಕುಡುಗೋಲು ಸೈಕಲ್ ಗೆ ಕಟ್ಟಿಕೊಂಡು ಹೊರಟಿದ್ದ. ಇತ್ತ ವಿದ್ಯಾರ್ಥಿನಿ ಆತನ ಸೈಕಲ್ ಹಿಂದೆ ಬೈಕ್ ನಲ್ಲಿ ಬರುತ್ತಿದ್ದಳು. ತನ್ನ ದಾರಿಯಲ್ಲಿ ಸಾಗುತ್ತಿದ್ದ ಕುರಿಗಾಯಿ ತಿರುವೊಂದರಲ್ಲಿ ಸೈಕಲ್ ನ್ನು ಎಡಕ್ಕೆ ತಿರುಗಿಸಿದಾಗ ಹಿಂಬದಿಯಲ್ಲಿ ಸಿಕ್ಕಿಸಿದ್ದ ಕುಡುಗೋಲು ಬಲಕ್ಕೆ ಹೊರಳಿದೆ. ಇದು ಹಿಂಬದಿಯಲ್ಲಿ ಬೈಕ್ ನಲ್ಲಿ ಬರುತ್ತಿದ್ದ ವಿದ್ಯಾರ್ಥಿನಿಯ ಕತ್ತನ್ನೇ ನೇರವಾಗಿ ಕೊಯ್ದಿದೆ. ಈ ಅಪಘಾತದಲ್ಲಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಮೃತ ವಿದ್ಯಾರ್ಥಿನಿಯನ್ನು ಮೇಘನಾ (20) ಎಂದು ಗುರುತಿಸಲಾಗಿದೆ. ಮೇಘನಾ ಕಲಬುರಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ. ಸದ್ಯ ಈ ಅಪಘಾತದಿಂದ ಸಾರ್ವಜನಿಕರು ನಿಬ್ಬೆರಗಾಗಿದ್ದಾರೆ. ಕಲಬುರಗಿಯ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.