ದೇಶ ಕಟ್ಟಲು ಹೊರಟ ನಿತ್ಯಾನಂದ, ದೊರೆ ನಡೆ ಅದೆಷ್ಟು ಚೆಂದ: ಟಾಪ್ 10 ಸುದ್ದಿ!

By Suvarna News  |  First Published Dec 4, 2019, 4:44 PM IST

ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹತ್ತು ಹಲವು ಘಟನಾವಳಿಗಳು| ಸುದ್ದಿಯ ಸಾರವರಿತು ಸುದ್ದಿಯ ವಿಶ್ಲೇಷಿಸುವ ನಿಮ್ಮ ಸುವರ್ಣನ್ಯೂಸ್.ಕಾಂ| ದಿನದ ಟಾಪ್ 10 ಸುದ್ದಿಗಳು ನಿಮಗಾಗಿ| ಡಿ.04ರಂದು ನಡೆದ ವಿವಿಧ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ|


ಬೆಂಗಳೂರು(ಡಿ.04): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

'ಕಾಂಗ್ರೆಸಿಗೆ ತಿರುಕನ ಕನಸು : ಬಿಜೆಪಿಗೆ 15 ಸ್ಥಾನ ಪಕ್ಕಾ'

Tap to resize

Latest Videos

undefined

ಮತ್ತೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರಲಿದೆ ಖರ್ಗೆ ಅಥವಾ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಖರ್ಗೆನೂ ಸಿಎಂ ಆಗಲ್ಲ, ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿ ಆಗಲ್ಲ. ರಾಜ್ಯದ ಜನರು ಬಿಜೆಪಿ ಪರವಾಗಿದ್ದಾರೆ. ನಮ್ಮ ಸರ್ಕಾರಕ್ಕೆ ಪೂರ್ಣ ಬಹುಮತ ಬರಲಿದೆ ಎಂದು ಈಶ್ವರಪ್ಪ ಹೇಳಿದರು.

ಹನಿಟ್ರ್ಯಾಪ್ ಹಗರಣದ 'ಕಿಲಾಡಿ' ಅಂದರ್ ; ಮತ್ತಷ್ಟು ಗಣ್ಯರ ಬಂಡವಾಳ ಬಾಹರ್?

ರಾಜ್ಯರಾಜಕಾರಣವನ್ನು ಬೆಚ್ಚಿ ಬೀಳಿಸಿದ್ದ ಹನಿಟ್ರ್ಯಾಪ್  ಪ್ರಕರಣದಲ್ಲಿ ಮತ್ತೊಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಕಾರಣಿಗಳನ್ನು  ಗುರಿಯಾಗಿಸಿ, ಮಂಚಕ್ಕೆ ಕರೆದು ಹನಿಟ್ರ್ಯಾಪ್ ನಡೆಸುತ್ತಿದ್ದ ಈ ಗ್ಯಾಂಗ್‌ನ ಪ್ರಮುಖ ಕಿಲಾಡಿ ಈತ. ಪುಷ್ಪಾ ಶಾಸಕರ ಜೊತೆಗಿದ್ದ ವಿಡಿಯೋವನ್ನು ಕಿಂಗ್‌ಪಿನ್ ರಾಘು ಈತನಿಗೆ ಕಳುಹಿಸುತ್ತಿದ್ದ. ವಿಡಿಯೋವನ್ನು ಮುಂದಿಟ್ಟುಕೊಂಡು ಹಣ ವಸೂಲಿ ಮಾಡೋದನ್ನ ಇವರು ಚರ್ಚೆ ಮಾಡುತ್ತಿದ್ದರು. ಇಲ್ಲಿದೆ ಮತ್ತಷ್ಟು ಮಾಹಿತಿ.

ಸಮಾರಂಭದಲ್ಲಿ ಬಾಲಕಿಯತ್ತ ನೋಡದ ದೊರೆ: ಮನೆಗೆ ತೆರಳಿ ಮುತ್ತಿಟ್ಟರೆ..?

ಸರ್ಕಾರಿ ಸಮಾರಂಭದಲ್ಲಿ ಕೈಕುಲುಕಲು ಬಂದ ಬಾಲಕಿಯನ್ನು ನೋಡದೇ ಮುಂದೆ ಸಾಗಿದ್ದ ಅಬು ದಾಬಿ ದೊರೆ ಶೇಖ್ ಮೊಹ್ಮದ್ ಬಿನ್ ಜಯೈದ್, ಬಳಿಕ ಬಾಲಕಿಯ ಮನೆಗೇ ತೆರಳಿ ಆಕೆಯನ್ನು ಭೇಟಿ ಮಾಡಿದ ಅಪರೂಪದ ಪ್ರಹಸನ ನಡೆದಿದೆ. ಬಾಲಕಿ ತಮ್ಮ ಕೈಕುಲುಕಲು ಮುಂದೆ ಬಂದಿದ್ದ ವಿಡಿಯೋ ನೋಡಿದ್ದ ಶೇಖ್ ಮೊಹ್ಮದ್, ಆಯಿಶಾ ಮನೆಗೆ ತೆರಳಿ ಆಕೆಯ ಹಣೆಗೆ ಮುತ್ತಿಟ್ಟು ಆಶೀರ್ವದಿಸಿದ್ದಾರೆ.

ಅಕ್ಷಯ್‌ ಜೊತೆ ಸಿನಿಮಾ ಮಾಡಲು ಯಾವ ನಿರ್ದೇಶಕರೂ ಮುಂದೆ ಬರ್ತಿಲ್ಲ?

ಬಾಲಿವುಡ್‌ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಸಿನಿಮಾ ಕಥೆ ಹೇಗೆ ಇರಲಿ ಬಾಕ್ಸ್‌ ಆಫೀಸ್‌ ಮುಟ್ಟದೇ ಬಿಡುವುದಿಲ್ಲ. ಇದಕ್ಕೆ ಸಾಕ್ಷಿ ಆದದ್ದು 'ಹೌಸ್‌ಫುಲ್‌ 2' ಚಿತ್ರ.   ಕರೀನಾ ಕಪೂರ್ ಮತ್ತು ಕಿಯಾರ ಅಡ್ವಾನಿಗೆ ಜೊತೆ 'ಗುಡ್‌ ನ್ಯೂಜ್' ಚಿತ್ರದಲ್ಲಿ ಮಿಂಚಲು ಸಜ್ಜಾಗಿರುವ ಅಕ್ಷಯ್ ಕುಮಾರ್ ಪ್ರಮೋಶನ್ ವೇಳೆ ವಾಹಿನಿಯೊಂದರಲ್ಲಿ ಮಾತನಾಡುತ್ತಾ ಮನಸ್ಸಿನಲ್ಲಿದ್ದ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಅಯ್ಯೋ ನಿತ್ಯಾನಂದ: ದೇಶ ಕಟ್ಟುವ ನಿಯಮ ಗೊತ್ತೇನೋ ಕಂದ?

ಈಕ್ವೆಡಾರ್‌ನಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿರುವ ಕರ್ನಾಟಕದ ಬಿಡದಿ ಬಳಿಯ ಧ್ಯಾನಪೀಠದ ವಿವಾದಿತ ಪೀಠಾಧಿಪತಿ ನಿತ್ಯಾನಂದ, ಅಲ್ಲಿ 'ಕೈಲಾಸ'ಹೆಸರಿನ ದೇಶವನ್ನು ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾನೆ. ಆದರೆ ನಿರ್ದಿಷ್ಟ ಪ್ರದೇಶವೊಂದಕ್ಕೆ ದೇಶದ ಮಾನ್ಯತೆ ನೀಡಲು ವಿಶ್ವಸಂಸ್ಥೆ ಕೆಲವು ನಿಯಮಾವಳಿಗಳನ್ನು ರೂಪಿಸಿದೆ.

ಭೀಮಾ ಕೋರೆಗಾಂವ್ ಪ್ರಕರಣ ವಾಪಸ್ ಪಡೆದ ಉದ್ಧವ್ ಸರ್ಕಾರ!

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ವಾಪಾಸ್ ಪಡೆಯುವುದಾಗಿ ಸಿಎಂ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ. ಗಂಭೀರ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರನ್ನು ಹೊರತುಪಡಿಸಿ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ವಾಪಾಸ್ ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಉದ್ಧವ್ ತಿಳಿಸಿದ್ದಾರೆ.

ಭಾರತದಲ್ಲಿರುವ ಅಕ್ರಮ ವಲಸಿಗರನ್ನು ಹೊರಹಾಕಲು 2024 ಡೆಡ್‌ಲೈನ್; ಎನ್‌ಆರ್‌ಸಿ ಜಾರಿ ಹೇಗೆ?

ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಅಸ್ಸಾಂನಲ್ಲಿ ನಡೆಸಲಾದ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಹೇಳುತ್ತಿದ್ದ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ, ಈಗ ಅದಕ್ಕೆ ಕಾಲಮಿತಿಯನ್ನೂ ನಿಗದಿ ಮಾಡಿದ್ದಾರೆ. 2024 ರ ಒಳಗಾಗಿ ದೇಶಾದ್ಯಂತ ಎನ್‌ಆರ್‌ಸಿ ಪ್ರಕ್ರಿಯೆ ಪೂರ್ಣಗೊಳ್ಳಬೇಕೆಂಬ ಗಡುವು ನೀಡಿದ್ದಾರೆ. ಅಂದರೆ, ಇನ್ನು ನಾಲ್ಕು ವರ್ಷದೊಳಗೆ ದೇಶದಲ್ಲಿರುವ ಎಲ್ಲಾ ಅಕ್ರಮ ವಲಸಿಗರನ್ನೂ ಹೊರ ಹಾಕಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎನ್‌ಆರ್‌ಸಿ ಎಂದರೆ ಏನು, ದೇಶಾದ್ಯಂತ ಇದನ್ನು ಹೇಗೆ ಅನುಷ್ಠಾನಗೊಳಿಸಲಾಗುತ್ತದೆ, ಅಸ್ಸಾಂಗಿಂತ ಇದು ಹೇಗೆ ಭಿನ್ನ ಎಂಬ ಮಾಹಿತಿ ಇಲ್ಲಿದೆ.

ವೈರಲ್ ಮಾಡ್ತೀನಿ, ಹಣ ಕೊಡಿ; ನಗ್ನ ವಿಡಿಯೋ ಮಾಡಿ ಮಹಿಳೆಯಿಂದ ರೇಪ್ ಬೆದರಿಕೆ!

ಹನಿಟ್ರ್ಯಾಪ್‌ ಮೂಲಕ ಲಕ್ಷಾಂತರ ರುಪಾಯಿ ಹಣ ದರೋಡೆಗೆ ಯತ್ನಿಸಿದ ಮಹಿಳೆ ಮತ್ತು ಆಕೆಯ ಗ್ಯಾಂಗನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.  ಅಪ್ರಾಪ್ತ ಸೇರಿದಂತೆ 6 ಮಂದಿಯನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ದೂರುದಾರನನ್ನು ಅಪಹರಿಸಿ, ಮೈಮೇಲಿದ್ದ ಬಟ್ಟೆಗಳನ್ನು ಬಿಚ್ಚಿಸಿ ನಗ್ನಗೊಳಿಸಿ, ವಿಡಿಯೋ ಮಾಡಿದ್ದಾರೆ. ಆತನ ಬಳಿಯಿದ್ದ ಹಣವನ್ನು ದೋಚಿ, ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಏನಿದು ಹನಿಟ್ರ್ಯಾಪ್ ಕಥೆ? ಮುಂದೇನಾಯ್ತು? ಇಲ್ಲಿದೆ ವಿವರ.

ಕೋಚ್‌ ಮಗಳು ಎಂದು ಗೊತ್ತಿಲ್ಲದೆ ಮದುವೆಯಾದ ಪುಟ್‌ಬಾಲ್‌ ನಾಯಕನ ಪ್ರೇಮಕಥೆ!

ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನೀಲ್‌ ಛೇಟ್ರಿ ಅಪ್ರತಿಮ ಪ್ರತಿಭಾವಂತ. ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಈ ಹುಡುಗ ಏರಿದ ಎತ್ತರ ಯಾರಿಗೇ ಆದರೂ ಸ್ಫೂರ್ತಿ ನೀಡುವಂಥದ್ದು. ಇವರು ತಮ್ಮ ಪ್ರೇಮಕತೆಯನ್ನು ಹೇಳಿಕೊಂಡಿದ್ದಾರೆ. ಮುದ್ದಾದ ಈ ಕತೆ ಒಂದು ಚೆಂದದ ಸಿನಿಮಾದಂತಿದೆ.

ಟ್ರಂಪ್ ಆಡಿದ ಅದೊಂದು ಮಾತು: ಚಿನ್ನದ ದರ ಕತೆಯೇ ಬೇರೆ ಆಯ್ತು!

ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ದರಲ್ಲಿ ಇಳಿಕೆ ಕಂಡುಬಂದಿದೆ. ಆದರೆ ಚೀನಾದೊಂದಿಗಿನ ವಾಣಿಜ್ಯ ಯುದ್ಧದ ಕುರಿತು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೀಡಿದ ಹೇಳಿಕೆಯ ಪರಿಣಾಮವಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಕಂಡಿದೆ.

click me!