ವಿತ್ತ ವಿದ್ಯಾ ಪಾರಂಗತ: ಬಿಜೆಪಿಯ 'ಅರುಣ' ಅಸ್ತಂಗತ!

Published : Aug 24, 2019, 12:42 PM ISTUpdated : Aug 24, 2019, 04:05 PM IST
ವಿತ್ತ ವಿದ್ಯಾ ಪಾರಂಗತ: ಬಿಜೆಪಿಯ 'ಅರುಣ' ಅಸ್ತಂಗತ!

ಸಾರಾಂಶ

ಹಿರಿಯ ಬಿಜೆಪಿ ನಾಯಕ ಅರುಣ್ ಜೇಟ್ಲಿ ವಿಧಿವಶ| ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ| ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬಿಜೆಪಿ ಹಿರಿಯ ನಾಯಕ| ಅತ್ಯುತ್ತಮ ಸಂಸದೀಯ ಪಟು ಎಂದೇ ಹೆಸರು ಗಳಿಸಿದ್ದ ಅರುಣ್ ಜೇಟ್ಲಿ| ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಮಾಜಿ ವಿತ್ತ ಸಚಿವ|  

ನವದೆಹಲಿ (ಆ.24): ಬಿಜೆಪಿ ಹಿರಿಯ ಮುಖಂಡ, ಕೇಂದ್ರ ಮಾಜಿ ಹಣಕಾಸು ಸಚಿವ, ಅತ್ಯುತ್ತಮ ಸಂಸದೀಯ ಪಟು ಅರುಣ್‌ ಜೇಟ್ಲಿ ಅವರು ವಿಧಿವಶರಾದರು.

"

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 66 ವರ್ಷದ ಜೇಟ್ಲಿ, ಆ.24ರಂದು ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಎರಡು ವಾರಗಳ ಹಿಂದೆಯೇ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಜೇಟ್ಲಿ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಚಿಕಿತ್ಸೆಗೆ ಸ್ಪಂದಿಸಿದ ಜೇಟ್ಲಿಗೆ ಜೀವ ರಕ್ಷಕ ವ್ಯವಸ್ಥೆ ಅಳವಡಿಸಲಾಗಿತ್ತು. 

ಈ ವರ್ಷದ ಆರಂಭದಲ್ಲಿಯೇ ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆದಿದ್ದ ಜೇಟ್ಲಿ, ನಂತರ ಭಾರತದಲ್ಲಿಯೇ ಚಿಕಿತ್ಸೆ ಮುಂದುವರಿಸಿದ್ದರು. 2014ರಲ್ಲಿ ಮೋದಿ ನೇತೃತ್ವದ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ಜೇಟ್ಲಿ, ಅನಾರೋಗ್ಯದ ಹಿನ್ನೆಲೆಯಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.

ಟ್ರಬಲ್ ಶೂಟರ್ ಕಳೆದುಕೊಂಡ ಬಿಜೆಪಿ

2019ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿದ NDA ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೋದಿಗೆ ಪತ್ರ ಬರೆದ ಜೇಟ್ಲಿ, ತಮ್ಮನ್ನು ಎಲ್ಲ ಜವಾಬ್ದಾರಿಗಳಿಂದಲೂ ಮುಕ್ತ ಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಸರಕಾರಿ ಬಂಗಲೆಯನ್ನು ತಕ್ಷಣವೇ ಖಾಲಿ ಮಾಡಿ, ತಮ್ಮ ಸ್ವಂತ ಮನೆಗೆ ತೆರಳಿದ್ದರು. ಇದು ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು.

ಜೇಟ್ಲಿ ಬಗ್ಗೆ ತಿಳಿಯದ ಹಲವು ವಿಷಯಗಳು

2014ರ ಮೊದಲ ಅವಧಿಯಲ್ಲಿ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ, ನೋಟು ಅಮಾನ್ಯೀಕರಣ, ಜಿಎಸ್‌ಟಿ ಜಾರಿ, ತೆರಿಗೆ ಸುಧಾರಣೆ, ಆರ್‌ಬಿಐ ನೀತಿ ನಿರೂಪಣೆ ಸೇರಿದಂತೆ ಹಲವು ಐತಿಹಾಸಿಕ ನಿರ್ಧಾರಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಅದರಲ್ಲೂ ಪ್ರಮುಖವಾಗಿ ನೋಟು ಅಮಾನ್ಯೀಕರಣದ ಬಳಿಕ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ, ಆರ್ಥಿಕ ಶಿಸ್ತು ಹಳಿ ತಪ್ಪದಂತೆ ನೋಡಿಕೊಂಡ ಜೇಟ್ಲಿ ವಿತ್ತ ಜ್ಞಾನಕ್ಕೆ ಎಲ್ಲರೂ ತಲೆದೂಗಿದ್ದರು. ಬಿಜೆಪಿಯ ಥಿಂಕ್ ಟ್ಯಾಂಕ್‌ನಲ್ಲಿ ಪ್ರಮುಖರಾಗಿದ್ದ ಅವರು, ಪಕ್ಷದ ಸೈದ್ಧಾಂತಿಕ ನಿಲುವನ್ನು ಅತ್ಯಂತ ಗಟ್ಟಿಯಾಗಿ ಪ್ರತಿಪಾದಿಸಿದ ಹಿರಿಯ ನಾಯಕರಲ್ಲೊಬ್ಬರಾಗಿದ್ದರು.

 

 

ಡಿಸೆಂಬರ್ 28, 1952ರಲ್ಲಿ ದೆಹಲಿಯಲ್ಲಿ ಜನಸಿದ್ದ ಜೇಟ್ಲಿ, ಸೇಂಟ್ ಕ್ಸೇವಿಯರ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ನಂತರ 1977ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದರು.

ಜೇಟ್ಲಿ ನಡೆದು ಬಂದ ದಾರಿ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!