ಇಂಜಿನಿಯರ್ಸ್ ಡೇ: ಡಿಜಿಟಲ್ ಕ್ರಾಂತಿ ಬಗ್ಗೆ ಜನಾರ್ಧನ ಸ್ವಾಮಿ ಉಪನ್ಯಾಸ

By Web DeskFirst Published Sep 12, 2018, 5:28 PM IST
Highlights

ಸರ್ ಎಂ ವಿಶ್ವೇಶ್ವರಯ್ಯ ಎಂದರೆ ಕರ್ನಾಟಕ ಮಾತ್ರವಲ್ಲ ಇಡೀ ಭಾರತದ ಜನ ಒಂದು ಕ್ಷಣ  ಗೌರವ ಸೂಚಿಸುತ್ತಾರೆ. ಅದರಲ್ಲೂ ಇಂಜಿನಿಯರ್ ಗಳ ಪಾಲಿಗೆ ವಿಶ್ವೇಶ್ವರಯ್ಯನವರ ಜೀವನವೇ ಒಂದು ದೊಡ್ಡ ಗ್ರಂಥ ಭಂಡಾರ. 

ಬೆಂಗಳೂರು[ಸೆ.12]  ಸರ್ .ಎಂ.ವಿಶ್ವೇಶರಯ್ಯ ಅವರ ಜನ್ಮದಿನವನ್ನು ಇಂಜಿನಿಯರ್ಸ್ ಡೇ ಆಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.  ನಗರದ ಅಂಬೇಡ್ಕರ್ ವೀದಿಯ ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಆವರಣದಲ್ಲಿ  ಸೆ.15 ರಂದು ಸಂಜೆ 5.30ಕ್ಕೆ ಇಂಜಿನಿಯರ್ಸ್ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್, ಮಾಜಿ ಸಂಸದ ಜನಾರ್ಧನ ಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಿಜಿಟಲ್ ಕ್ರಾಂತಿಯ ಇಂದಿನ ಅಗತ್ಯಗಳ ಬಗ್ಗೆ ಮಾತನಾಡಲಿದ್ದಾರೆ. ಕೈಗಾರಿಕೆ ಬೆಳವಣಿಗೆಯಲ್ಲಿ ನವೀನ ತಂತ್ರಜ್ಞಾವನ್ನು ಹೇಗೆ ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ವಿವರಿಸಲಿದ್ದಾರೆ.

ಯುಬಿಡಿಟಿ ಕಾಲೇಜಿನಿಂದ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದ ಜನಾರ್ಧನ ಸ್ವಾಮಿ ಎಲೆಕ್ಟ್ರಿಕಲ್ ಕಮ್ಯೂನಿಕೇಶನ್ ವಿಭಾಗದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಚೀನಾ, ತೈವಾನ್ ಮತ್ತು ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿಯೂ ಕೆಲಸ ಮಾಡಿದ್ದ ಸ್ವಾಮಿ ನಂತರ ಭಾರತಕ್ಕೆ ಹಿಂದಿರುಗಿ ಬಿಜೆಪಿಯ ಐಟಿ ಸೆಲ್ ನಲ್ಲಿ ಕೆಲಸ ಮಾಡಿ ಚಿತ್ರದುರ್ಗದಿಂದ ಲೋಕಸಭೆಗೆ ಸ್ಪರ್ಧಿಸಿ ಜಯಗಳಿಸಿದ್ದರು.

ಸಾಧಕ ಇಂಜಿನಿಯರ್‌ಗಳಾದ ಜಲಮಂಡಳಿಯ ಪಿ ಎನ್ ರವೀಂದ್ರ. ಎಚ್‌ಎಎಲ್‌ ನ ಟಿ.ಆರ್.ರಾಜಣ್ಣ, ದಾವಣಗೆರೆಯ ರೇವಣಸಿದ್ದಪ್ಪ, ಹಾಸನದ ಡಾ,ರಮೇಶ್ ಮತ್ತು ಎಫ್‌ ಐ ಇಯ ಅಧ್ಯಕ್ಷ ಎನ್.ಚಿಕ್ಕಣ್ಣ ಅವರನ್ನು ಸನ್ಮಾನಿಸಲಾಗುವುದು. 

 

click me!