ರಾಜ್ಯಕ್ಕೆ ಮುಂಗಾರು ಪ್ರವೇಶ ಆಗಿದ್ಯೋ, ಇಲ್ವೋ? ಹವಾಮಾನ ಇಲಾಖೆಗೇ ಗೊತ್ತಿಲ್ಲ

Published : Jun 14, 2019, 10:00 AM IST
ರಾಜ್ಯಕ್ಕೆ ಮುಂಗಾರು ಪ್ರವೇಶ ಆಗಿದ್ಯೋ, ಇಲ್ವೋ? ಹವಾಮಾನ ಇಲಾಖೆಗೇ ಗೊತ್ತಿಲ್ಲ

ಸಾರಾಂಶ

ಕರಾವಳಿ ತೀರದಲ್ಲಿ ಅತ್ಯುತ್ತಮ ಮಳೆಯಾಗುತ್ತಿದ್ದು,ಮುಂಗಾರು ಪ್ರವೇಶವಾದ ಸುಳಿವು ಸಿಕ್ಕಿದೆ. ಮಲೆನಾಡಿನಲ್ಲಿಯೂ ಓಕೆ ಎನ್ನುವಂಥ ಮಳೆ ಸುರಿಯುತ್ತಿದೆ. ಆದರೆ, ಇತರೆ ಭಾಗಕ್ಕೆ ಮುಂಗಾರು ಪ್ರವೇಶವಾಗುವುದು ಯಾವಾಗ? ಏನು ಹೇಳುತ್ತೆ ಹವಾಮಾನ ಇಲಾಖೆ?

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇನ್ನು ಮೂರು ದಿನ ಮಳೆ ಮುಂದುವರೆಯಲಿದೆ. ಗುರುವಾರ ರಾಜ್ಯದ ಒಳನಾಡು ಜಿಲ್ಲೆಗಳ ಕೆಲವಡೆ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆದರೆ, ಕೇರಳ ತೀರಕ್ಕೆ ಮುಂಗಾರು ಪ್ರವೇಶವಾಗಿ ಆರು ದಿನ ಕಳೆದಿದೆ. ಆದರೂ ಭಾರತೀಯ ಹವಾಮಾನ ಇಲಾಖೆ ಮಂಗಾರು ಕರ್ನಾಟಕ ಪ್ರವೇಶ ಮಾಡಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಸ್ಪಷ್ಟಮಾಹಿತಿಯನ್ನು ನೀಡುತ್ತಿಲ್ಲ. ವಾಯು ಚಂಡಮಾರುತದ ಪರಿಣಾಮವಾಗಿ ಮುಂಗಾರು ಪ್ರವೇಶದ ಕುರಿತು ಸ್ಪಷ್ಟತೆ ಲಭ್ಯವಾಗುತ್ತಿಲ್ಲ ಎಂದು ಹೇಳುತ್ತಿದೆ.

ಮಳೆಗಾಲದಲ್ಲಿ ಗ್ಯಾಜೆಟ್ ಸುರಕ್ಷತೆಗೆ ಹೀಗ್ ಮಾಡಿ

ಅರಬ್ಬಿ ಸಮುದ್ರದಲ್ಲಿ ರೂಪಗೊಂಡಿದ್ದ ವಾಯು ಚಂಡಮಾರುತದ ಪ್ರಭಾವದಿಂದ ಕಳೆದ ನಾಲ್ಕು ದಿನಗಳಿಂದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಗಾಳಿ ಮಳೆ ಸುರಿದಿತ್ತು. ಇದೀಗ ಚಂಡಮಾರುತ ಗುಜರಾತ್‌ ಕರಾವಳಿ ತೀರವನ್ನು ತಲುಪಿದ್ದು, ರಾಜ್ಯದಲ್ಲಿ ಪ್ರಭಾವ ಕಡಿಮೆಯಾಗಿದೆ. ಹೀಗಾಗಿ, ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಗಾಳಿಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೂ ಮುಂದಿನ ಮೂರು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದಕ್ಷಿಣ ಹಾಗೂ ಉತ್ತರ ಒಳನಾಡು ಜಿಲ್ಲೆಗಳ ಕೆಲ ಭಾಗದಲ್ಲಿ ಮಾತ್ರ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ತುಂತುರು ಮಳೆ ಹಾಗೂ ಜೋರು ಗಾಳಿ, ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ತಿಳಿಸಿದ್ದಾರೆ.

ಮಳೆಯಲ್ಲಿ ಹೇಗಿ ನೋಡಿಕೊಳ್ಳಬೇಕು ಆರೋಗ್ಯ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

3700 ಸರ್ಕಾರಿ ಶಾಲೆ, ಕಾಲೇಜಲ್ಲಿ ಸದ್ಯದಲ್ಲೇ ಸ್ಮಾರ್ಟ್‌ ಕ್ಲಾಸ್‌ ಶುರು, ಖಾಸಗಿ ಶಾಲೆಗಳ ಮಾದರಿ ಡಿಜಿಟಲ್‌ ಶಿಕ್ಷಣಕ್ಕೆ ಸರ್ಕಾರ ಸಿದ್ಧತೆ
ಕಾಲಿಗೆ ಚಿಪ್‌ ಅಳವಡಿಸಿ ಪೊಲೀಸ್‌ ಪೇದೆ ಹುದ್ದೆಗಳ ದೈಹಿಕ ಪರೀಕ್ಷೆಗೆ ಸಿದ್ಧತೆ, ಓಟ ಮುಗಿಸ್ತಿದ್ದಂತೆ ಮೊಬೈಲ್‌ಗೆ ಬರಲಿದೆ ರಿಸಲ್ಟ್‌