
ಪಬ್‌ಜಿ ಆಟ ವಿಶ್ವದಾದ್ಯಂತ ಭಾರೀ ಸಂಖ್ಯೆಯಲ್ಲಿ ಆಟಗಾರರನ್ನು ಹೊಂದಿದೆ. ಗೇಮ್‌ನಲ್ಲಿ ನೀಡುವ ನಿರ್ದೇಶನದಂತೆ ನಡೆದುಕೊಳ್ಳುವುದು ಆಟದ ಒಂದು ಭಾಗ. ಇದರಂತೆ ಸ್ನೇಹಿತರನ್ನು ಪಬ್‌ಜಿ ಆಟಕ್ಕೆ ಸೆಳೆಯುವುದು, ಅಲ್ಲದೆ ಅವರಿಂದ ಸ್ಕೋರ್ ಪಡೆದುಕೊಳ್ಳುವುದು ಸಹ ಸೇರಿದೆ.
ಅದರಂತೆ ತನಗೆ ಪಬ್‌ಜಿ ಆನ್‌ಲೈನ್ ಆಟದ ವೇಳೆ 6ಎಕ್ಸ್ ಅಂಕ ಕೊಡಲಿಲ್ಲ ಎಂದು ಜಪಾನ್‌ನ ಯುವಕನೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ ಎಂದು ಸುದ್ದಿಯಾಗಿದೆ. ಆತನನ್ನು ಪೊಲೀಸರು ಬೇಡಿ ಹಾಕಿ ಕರೆದೊಯ್ಯುವ ಚಿತ್ರವನ್ನು ಪ್ರಕಟಿಸಿ ಪಬ್‌ಜಿ ಆಟದಲ್ಲಿ ಸ್ಕೋರ್ ನೀಡದ ಗೆಳೆಯನ್ನು ಈತ ಹೊಡೆದು ಕೊಂದಿದ್ದಾನೆ ಎಂದು ಸಾಮಾಜಿಕ ತಾಣದಲ್ಲಿ ಹರಿಯಬಿಡಲಾಗಿದೆ.
ಈ ಸಂಬಂಧ ಇಂಡಿಯಾ ಟುಡೇ ಕೊಂಚ ಆಳಕ್ಕಿಳಿದು ಪರಿಶೀಲಿಸಿದಾಗ ಈತ ಚೀನಾ ದೇಶದ ಪ್ರಜೆ ಎಂದು ಗೊತ್ತಾಗಿದೆ. ಚೀನಾದ ಮಿಜಿ ಪ್ರಾಂತ್ಯದಲ್ಲಿ ವಾಸವಾಗಿರುವ ಈತ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಸಹಪಾಠಿಗಳು ಇವನನ್ನು ಬೆದರಿಸುತ್ತಿದ್ದರು. ಅವರ ಮೇಲೆ ಈತನಿಗೆ ತುಂಬಾ ಕೋಪವಿತ್ತು.
ಹಾಗಾಗಿ ದ್ವೇಷ ತೀರಿಸಿಕೊಳ್ಳಲು ಈತ ಒಂದು ದಿನ ಶಾಲೆಗೆ ಹೋದಾಗ ಅಲ್ಲಿ ಆತನಿಗೆ ತನ್ನನ್ನು ರೇಗಿಸುತ್ತಿದ್ದ ಸಹಪಾಠಿಗಳು ಸಿಕ್ಕಿಲ್ಲ. ಅದೇ ಆಕ್ರೋಶದಲ್ಲಿ ಶಾಲೆಯಿಂದ ಹೊರಬರುತ್ತಿದ್ದ ಒಂಬತ್ತು ಮಕ್ಕಳನ್ನು ಚಾಕು ಇರಿದು ಕೊಂದಿದ್ದ. ಈ ಪ್ರಕರಣದಲ್ಲಿ ಅಲ್ಲಿನ ನ್ಯಾಯಾಲಯ ಈತನಿಗೆ ಶಿಕ್ಷೆ ವಿಧಿಸಿತ್ತು.
ಈಗ ಜಪಾನ್‌ನಲ್ಲಿ ಪಬ್‌ಜಿ ಆಟದ ವೇಳೆ ಸ್ಕೋರ್ ನೀಡಲಿಲ್ಲ ಎಂದು ಗೆಳೆಯನನ್ನು ಕೊಂದಿದ್ದಾನೆಂದು ಹರಿದಾಡುತ್ತಿರುವುದು ಈತನದೇ ಫೋಟೋ. ಹೀಗಾಗಿ ಪಬ್‌ಜಿ ಸುದ್ದಿ ಸುಳ್ಳು ಎನ್ನುವುದು ಖಚಿತವಾಗಿದೆ.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.