IMA ಸಹಯೋಗದ ಪ್ರಸಿದ್ಧ ಆಸ್ಪತ್ರೆಗೆ ಎದುರಾಗಿದೆ ಮುಚ್ಚುವ ಭೀತಿ

By Kannadaprabha NewsFirst Published Jun 14, 2019, 9:18 AM IST
Highlights

IMA ದತ್ತು ಪಡೆದಿದ್ದ ಶಾಲೆಗೆ ಸಂಕಷ್ಟ ಎದುರಾದ ಬೆನ್ನಲ್ಲೇ ಇದೀಗ ಆಸ್ಪತ್ರೆಯೊಂದನ್ನು ತಲೆ ನೋವು ಎದುರಾಗಿದೆ. ಇಲ್ಲಿರುವ ಸಿಬ್ಬಂದಿಗೆ ತಮ್ಮ ಕೆಲಸದ ಅಭದ್ರತೆ ಕಾಡಲು ಶುರುವಾಗಿದೆ. 

ಬೆಂಗಳೂರು (ಜೂ.14) :  ಐಎಂಎ ಕಂಪನಿಯ ದೋಖಾ ಪ್ರಕರಣದಲ್ಲಿ ಕೇವಲ ಹೂಡಿಕೆದಾರರು, ಕಂಪನಿ ದತ್ತು ಪಡೆದಿದ್ದ ಶಾಲೆಯ ವಿದ್ಯಾರ್ಥಿಗಳು ಮಾತ್ರವಲ್ಲದೇ ಐಎಂಎ ಕಂಪನಿಯ ಅಂಗ ಸಂಸ್ಥೆಯಾದ ಫ್ರಂಟ್‌ಲೈನ್ ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳಿಗೂ ಬಿಸಿ ತಟ್ಟಿದೆ. ಆಸ್ಪತ್ರೆಯಲ್ಲಿ ದಾಖಲಾಗಿ ರುವ ರೋಗಿಗಳಿಗೆ ಆತಂಕ ಎದುರಾಗಿದ್ದರೆ, ಹೊರ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಎಷ್ಟು ದಿನ ಆಸ್ಪತ್ರೆ ನಡೆಯುತ್ತದೆ ಎಂಬ ಅನಿಶ್ಚಿತತೆ ಕಾಡಲು ಶುರುವಾಗಿದೆ.

ಐಎಂಎ ಅಂಗ ಸಂಸ್ಥೆಯಾದ ಫ್ರಂಟ್‌ಲೈನ್ ಆಸ್ಪತ್ರೆಯು ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಐಎಂಎ ಕಂಪನಿಯಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದೆ. ಈ ಮೂಲಕ ತಾವು ಪ್ರತ್ಯೇಕ ಸಂಸ್ಥೆ ಎಂದು ಹೇಳಿಕೊಂಡು ನಿರಾತಂಕವಾಗಿ ಆಸ್ಪತ್ರೆ ಉದ್ಯಮ ಮುಂದುವರಿ ಸಲು ಪ್ರಯತ್ನಿಸಿದೆ. ಇದರ ಭಾಗವಾಗಿ ಆಸ್ಪತ್ರೆಯ ನಾಮಫಲಕದಲ್ಲಿದ್ದ ‘ಐಎಂಎ ಇನಿಷಿಯೇಟಿವ್’ ಹೆಸರನ್ನು ಕಿತ್ತು ಎಸೆದಿದೆ. ಆದರೆ, ಐಎಂಎ ಅಧಿಕೃತ ವೆಬ್‌ಸೈಟ್‌ನಲ್ಲಿ ಫ್ರಂಟ್‌ಲೈನ್ ಆಸ್ಪತ್ರೆ ತಮ್ಮದೇ ಎಂಬ ಬಗ್ಗೆ ಮಾಹಿತಿ ಹಾಗೆಯೇ ಉಳಿದಿದೆ.

ಹಗರಣದಲ್ಲಿ ಮುಖ್ಯ ರೂವಾರಿಯಾಗಿರುವ ಮನ್ಸೂರ್ ಖಾನ್ ಪರಾರಿಯಾದ ಬೆನ್ನಲ್ಲೇ ಅವರು ದತ್ತು ಪಡೆದಿದ್ದ ಸರ್ಕಾರಿ ಶಾಲೆಗೆ ಸಂಕಷ್ಟ ಎದುರಾಗಿತ್ತು.  ಇದರ ಬೆನ್ನಲ್ಲೇ ಫ್ರಂಟ್ ಲೈನ್ ಆಸ್ಪತ್ರೆಯ ಭವಿಷ್ಯವೂ ಡೋಲಾಯಮಾ ನವಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ 250ಕ್ಕೂ ಹೆಚ್ಚು ವೈದ್ಯರು ಹಾಗೂ ಸಿಬ್ಬಂದಿ ಭವಿಷ್ಯಕ್ಕೂ ಆತಂಕ ಎದುರಾಗಿದೆ.  

ಆಸ್ಪತ್ರೆಗೆ ಬಿಗಿ ಭದ್ರತೆ: ಈ ನಡುವೆ 2018 ರಲ್ಲಿ ಶಿವಾಜಿನಗರದ ವೆಂಕಟಸ್ವಾಮಿ ನಾಯ್ಡು ರಸ್ತೆ ಯಲ್ಲಿ ಪ್ರಾರಂಭವಾಗಿ ಸುತ್ತಮುತ್ತಲಿನ ನಾಗರಿಕರಿಗೆ ಕಡಿಮೆ ಹಣಕ್ಕೆ ಗುಣಮಟ್ಟದ ಚಿಕಿತ್ಸೆ ನೀಡಲು ಹೆಸರಾಗಿದ್ದ ಆಸ್ಪತ್ರೆಗೆ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಇದೇ ಕಾರಣಕ್ಕೆ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ನಿರಾಕರಿಸಿ ವಾಪಸು ಕಳುಹಿಸುತ್ತಿದೆ ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿ ಬಂದಿದೆ. ಶಿವಾಜಿನಗರ ಸುತ್ತಮುತ್ತಲಿನ ಡಯಾಬಿಟಿಸ್ ರೋಗಿಗಳಿಗೆ ಅತಿ ಕಡಿಮೆ ದರಕ್ಕೆ ಡಯಾಲಿಸಿಸ್ ಮಾಡಲಾಗುತ್ತಿತ್ತು.  

ಆದರೆ, ಗುರುವಾರ ಆಸ್ಪತ್ರೆ ಸಿಬ್ಬಂದಿ ಶುಕ್ರವಾರದಿಂದ ಬರಬೇಡಿ ಎಂದು ಹೇಳಿದ್ದಾರೆ. ಏಕಾಏಕಿ ಈ ರೀತಿ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ನಾವು ಇಲ್ಲಿ ಚಿಕಿತ್ಸೆ ಪಡೆದು ಫಾಲೋ ಅಪ್ ಚಿಕಿತ್ಸೆಗೆ ಬೇರೆಡೆಗೆ ಹೋಗಲು ಆಗುವುದಿಲ್ಲ. ಹೀಗಾಗಿಇಲ್ಲೇ ಚಿಕಿತ್ಸೆ ಮುಂದುವರಿಸಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.

click me!