ನೆರೆ ಪರಿಹಾರ ತನ್ನಿ ಎಂದಿದಕ್ಕೆ ಚಕ್ರವರ್ತಿ ವಿರುದ್ಧ ಸಿಂಹ ಘರ್ಜನೆ

By Web DeskFirst Published Oct 3, 2019, 6:10 PM IST
Highlights

ಉತ್ತರ ಕರ್ನಾಟಕದಲ್ಲಿ ಉಂಟಾದ ನೆರೆ ನಷ್ಟಕ್ಕೆ ಪರಿಹಾರ ತನ್ನಿ ಎಂದಿದಕ್ಕೆ ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಬಿಜೆಪಿ ಸಂಸದರು ಮೈ ಪರಿಚಿಕೊಳ್ಳುತ್ತಿದ್ದಾರೆ. ಸದಾನಂದಗೌಡ ಟ್ವೀಟ್‌ನಲ್ಲಿ  ಕಿರುಚಾಡಿದ್ರು, ಇದೀಗ ಪ್ರತಾಪ್ ಸಿಂಗ ಸರದಿ. ಹಾಗಾದ್ರೆ ಪ್ರತಾಪ್ ಸಿಂಹ ಏನು ಹೇಳಿದ್ದಾರೆ ಎನ್ನುವುದನ್ನು ಈ ಕೆಳಗಿನಂತಿದೆ ನೋಡಿ.

ಮೈಸೂರು, (ಅ.03): ಪರಿಹಾರ ನೀಡುವಂತೆ ಮೋದಿ ಅವರನ್ನು ಕೇಳಿ ಎಂದು ಹೇಳಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧವೇ ಮೈಸೂರು ಸಂಸದ ಪ್ರತಾಪ್ ಸಿಂಹ ಕೊಂಕು ಮಾತುಗಳನ್ನಾಡಿದ್ದಾರೆ. 

ಇಂದು (ಗುರುವಾರ) ಮೈಸೂರಿನಲ್ಲಿ ಮಾತನಾಡಿರುವ ಪ್ರತಾಪ್ ಸಿಂಹ,  ಈಗ ಮೋದಿ ವಿರುದ್ಧ ಮಾತನಾಡುತ್ತಿರುವವರ ಭಾಷಣಕ್ಕೆ ಮೋದಿಯೇ ಬಂಡವಾಳ ಅವರಿಗೆ ಮೋದಿಯೇ ಐಡೆಂಟಿಟಿ. ಮೋದಿ ಹೆಸರೇಳದಿದ್ದರೆ ಅವರ ಭಾಷಣ ಕೇಳಲು ಯಾರು ಬರುತ್ತಾರೆ ಎಂದು ತೀಕ್ಷ್ಣವಾಗಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಿಡಿಕಾರಿದರು.

ಚಕ್ರವರ್ತಿಯನ್ನ ಬೈದ್ರೆ ಪಕ್ಷಕ್ಕೆ ಹಿನ್ನಡೆ: ಸದಾನಂದಗೌಡ್ರನ್ನ ಹಿಗ್ಗಾಮುಗ್ಗಾ ಜಾಡಿಸಿದ ಬಿಜೆಪಿ ನಾಯಕ

ಇವರು ಭಾಷಣ ಶುರುಮಾಡುವುದಕ್ಕಿಂತ ಮುಂಚೆಯೇ ಮೋದಿಯವರ ಆತ್ಮಕಥೆ ಬರೆದಿದ್ದೆ. ಇವರಿಂದ ನಾನು ಮೋದಿ ಪ್ರೇಮ ಕಲಿಯಬೇಕಾಗಿಲ್ಲ. ಇವರ ಟೀಕೆ ವಿವೇಚನ ರಹಿತವಾಗಿದೆ. ಈಗಾಗಿ ಮೋದಿ ಟೀಕಿಸಬೇಡಿ ಎಂದೆ ನಾನು ಎಂದು ಸಮಜಾಯಿಸಿ ನೀಡಿದರು.

ನಾನಾಗಲಿ ಕೆಲ ಸಂಸದರಾಗಲಿ ಗೆದ್ದಿದ್ದು ಮೋದಿಯವರಿಂದಲೇ. ಸದಾನಂದಗೌಡ, ರಮೇಶ್ ಜಿಗಜಣಗಿ ಮತ್ತಿತ್ತರರು ಮೋದಿ ರಾಷ್ಟ್ರ ರಾಜಕಾರಣಕ್ಕೆ ಬರುವ ಮುಂಚೆಯೆ ಸಂಸದರಾಗಿದ್ದಾರೆ. ಟೀಕೆ ಮಾಡುವ ವ್ಯಕ್ತಿ ಇದನ್ನು ನೆನಪಿಟ್ಟುಕೊಳ್ಳಲ್ಲಿ ಎಂದು ಪರೋಕ್ಷವಾಗಿ ಸೂಲಿಬೆಲೆ ಅವರಿಗೆ ಟಾಂಗ್ ನೀಡಿದರು.

ಮೋದಿ ಬಗ್ಗೆ ಮಾತನಾಡುವವರು ಆಕಾಶಕ್ಕೆ ಉಗುಳಿದಂತೆ: ಪ್ರತಾಪ್ ಸಿಂಹ ಗುಡುಗು

ಮೋದಿಯವರನ್ನ ಟೀಕೆ ಮಾಡಬಾರದು ಎಂದು ನಾನು ಹೇಳಿಲ್ಲ. ವಿಚಾರಗಳನ್ನು ಇಟ್ಟುಕೊಂಡು ಟೀಕೆ ಮಾಡಿ ಎಂದಷ್ಟೇ ಹೇಳಿದ್ದೇನೆ. ಕೇಂದ್ರದ ನೆರೆ ಪರಿಹಾರ ನಿಧಿ ಕರ್ನಾಟಕ ಮಾತ್ರವಲ್ಲದೆ ಉಳಿದ ರಾಜ್ಯಗಳಿಗು ಬಂದಿಲ್ಲ.

 350ಕ್ಕೂ ಹೆಚ್ಚು ಜನರು ಸಾವನಪ್ಪಿದ್ದಾರೆ. ಅಲ್ಲಿಗೂ ಕೂಡ ಪರಿಹಾರ ಬಿಡುಗಡೆಯಾಗಿಲ್ಲ. ಆ ರಾಜ್ಯಗಳಿಗೆ ಬಿಡುಗಡೆಯಾಗಿ ನಮ್ಮ ರಾಜ್ಯಕ್ಕೆ ಬಿಡುಗಡೆಯಾಗಿಲ್ಲ ಅಂದರೆ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಪ್ರಶ್ನೆ ಮಾಡಬೇಕಿತ್ತು ಎಂದು ಸಬೂಬು ಹೇಳಿದರು.

BJPಯಲ್ಲಿ ನೆರೆ ಪರಿಹಾರ ಸಮರ, ಮಯಾಂಕ್ ದ್ವಿಶತಕದ ಅಬ್ಬರ; ಇಲ್ಲಿವೆ ಅ.03ರ ಟಾಪ್ 10 ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದರೆ ಆಕಾಶಕ್ಕೆ ಉಗುಳಿದಂತೆ ಎಂದು ಇದೇ ಪ್ರತಾಪ್ ಸಿಂಹ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

click me!