Video, ನೆರೆ ಪರಿಹಾರದಲ್ಲೂ ಫೋಟೋ ಹುಚ್ಚು: ಕೊಚ್ಚೆಗೆ ಬಿದ್ದ ಬಿಜೆಪಿ ಸಂಸದ!

Published : Oct 03, 2019, 05:17 PM IST
Video, ನೆರೆ ಪರಿಹಾರದಲ್ಲೂ ಫೋಟೋ ಹುಚ್ಚು: ಕೊಚ್ಚೆಗೆ ಬಿದ್ದ ಬಿಜೆಪಿ ಸಂಸದ!

ಸಾರಾಂಶ

ಪ್ರವಾಹ ವೀಕ್ಷಣೆಗೆ ತೆರಳಿದ್ದ ಸಂಸದ ಫೋಟೋಗೆ ಫೋಸ್ ನೀಡಲು ಹೋಗಿ ಕೊಚ್ಚೆಗೆ ಬಿದ್ದ| ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ತೀವ್ರ ಮುಜುಗರಕ್ಕೀಡಾದ ನಾಯಕ| 

ಲಕ್ನೋ[ಅ.03]: ಪ್ರವಾಹ ವೀಕ್ಷಣೆಗೆ ತೆರಳಿದ್ದ ಸಂಸದನೊಬ್ಬ ಫೋಟೋ ತೆಗೆಸಿಕೊಳ್ಳುವ ಭರದಲ್ಲಿ, ಕೊಳಚೆ ನೀರಿನಲ್ಲಿ ಬಿದ್ದಿರುವ ಘಟನೆ ಬಿಹಾರದ ಪಾಟಲೀಪುತ್ರದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಸದನಿಗೆ ತೀವ್ರ ಮುಜುಗರವುಂಟು ಮಾಡಿದೆ. 

ಹೌದು ಬಿಹಾರದಲ್ಲಿ ವರುಣನ ಅಬ್ಬರದಿಂದ ಪ್ರವಾಹ ಉಂಟಾಗಿದ್ದು, ಅಪಾರ ಹಾನಿಯುಂಟಾಗಿದೆ. ಹೀಗಿರುವಾಗ ಪಾಟಲೀಪುತ್ರ ಕ್ಷೇತ್ರದ ಬಿಜೆಪಿ ಸಂಸದ ರಾಮ್ ಕೃಪಾಲ್ ಯಾದವ್ ಪ್ರವಾಹ ಪೀಡಿತ ತನ್ನ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರವಾಹದ ನೀರಿನ ಮಧ್ಯೆ ನಿಂತು ಫೋಟೋ ತೆಗೆಸಿಕೊಳ್ಳಲು ಹೋದ ಸಂಸದ ನಿಯಂತ್ರಣ ತಪ್ಪಿ ಕೊಳಚೆ ನೀರಿಗೆ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಜನರು ಅವರನ್ನು ನೀರಿನಿಂದ ಮೇಲೆ ಬರಲು ಸಹಾಯ ಮಾಡಿದ್ದಾರೆ.

ಟಯರ್ ಗಳಿಗೆ ಕಟ್ಟಿದ್ದ ಮರದ ಹಲಗೆಯ ಮೇಲೆ, ಜನರೊಂದಿಗೆ ನಿಂತು ಫೋಟೋಗೆ ಫೋಸ್ ನೀಡಿದ್ದ ಸಂಸದ ಕೊಳಚೆ ನೀರಿಗೆ ಬಿದ್ದ ದೃಶ್ಯಾವಳಿಗಳು ಸದ್ಯ ಎಲ್ಲೆಡೆ ವೈರಲ್ ಆಗುತ್ತಿವೆ. ಇದನ್ನು ವೀಕ್ಷಿಸಿದವರೆಲ್ಲಾ ರಾಜಕಾರಣಿಗೆ ತಕ್ಕ ಶಾಸ್ತಿಯಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ