ಹವಾಮಾನ ಇಲಾಖೆ ವಿರುದ್ಧ ರೈತನ ಕೇಸ್

By Suvarna Web DeskFirst Published Jul 15, 2017, 1:14 PM IST
Highlights

ಮುಂಗಾರು ಮಳೆ ಕುರಿತು ಹವಾಮಾನ ಇಲಾಖೆ ನೀಡುವ ಮಾಹಿತಿ ಉಲ್ಟಾ ಆಗುವುದೇ ಹೆಚ್ಚು. ಆದರೆ ಇಂಥ ಪ್ರಕರಣದಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಮಹಾರಾಷ್ಟ್ರದ ರೈತರೊಬ್ಬರು ಮಳೆಯ ಕುರಿತು ಸುಳ್ಳು ಮಾಹಿತಿ ನೀಡಿ ನಮಗೆ ಭಾರೀ ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿ ಹವಾಮಾನ ಇಲಾಖೆಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ.

ಮುಂಬೈ: ಮುಂಗಾರು ಮಳೆ ಕುರಿತು ಹವಾಮಾನ ಇಲಾಖೆ ನೀಡುವ ಮಾಹಿತಿ ಉಲ್ಟಾ ಆಗುವುದೇ ಹೆಚ್ಚು. ಆದರೆ ಇಂಥ ಪ್ರಕರಣದಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಮಹಾರಾಷ್ಟ್ರದ ರೈತರೊಬ್ಬರು ಮಳೆಯ ಕುರಿತು ಸುಳ್ಳು ಮಾಹಿತಿ ನೀಡಿ ನಮಗೆ ಭಾರೀ ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿ ಹವಾಮಾನ ಇಲಾಖೆಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ.

ಜೂನ್ ತಿಂಗಳಿನಲ್ಲಿ ಉತ್ತಮ ಮಳೆಯಾಗುತ್ತದೆ ಎಂದು ಪುಣೆ  ಮತ್ತು ಕೊಲಾಬಾದ ಹವಾಮಾನ ಇಲಾಖೆಯ ಅಧಿಕಾರಿಗಳು ಭವಿಷ್ಯ ನುಡಿದ್ದಿದ್ದರು. ಅದನ್ನು ನಂಬಿ ನಾವು ಬಿತ್ತನೆ ಮಾಡಿದ್ದೆವು. ಆದರೆ ಆರಂಭದಲ್ಲಿ ಸ್ವಲ್ಪ ಮಳೆಯಾಗಿದ್ದು ಹೊರತುಪಡಿಸಿದರೆ ಮತ್ತೆ ಮಳೆಯಾಗಿಲ್ಲ. ಹೀಗಾಗಿ ನಾವು ಬಿತ್ತಿದ ಬೀಜ ಸುಟ್ಟು ಹೋಗಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರ ಕಂಪನಿಗಳ ಜೊತೆ ಹವಾಮಾನ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಉತ್ತಮ ಮಳೆಯಾಗಲಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಎಂದು ಒತ್ತಾಯಿಸಿ ಬೀಡ್ ಜಿಲ್ಲೆಯ ಆನಂದ್’ಗಾಂವ್ ಗ್ರಾಮದ ಗಂಗಾಭೀಷಣ್ ಥಾವರೆ ಎಂಬ ರೈತ ಪೊಲೀಸರಿಗೆ ದೂರು ನೀಡಿದ್ದಾರೆ.  

(ಸಾಂದರ್ಭಿಕ ಚಿತ್ರ)

click me!