
ಪ್ಯಾರಿಸ್: ಅಮೆರಿಕಾ ಅಧ್ಯಕ್ಷ ಪದವಿಗೆ ಏರಿದ ಮೇಲೂ ವಯಸ್ಸಿಗೆ ತಕಲ್ಕ ನಡವಳಿಕೆ ತೋರದ್ದಕ್ಕಾಗಿ ಸದಾ ಟೀಕೆಗೆ ಒಳಗಾಗುವ ಡೊನಾಲ್ಡ್ ಟ್ರಂಪ್, ಮತ್ತೆ ಅದೇ ಕೆಲಸ ಮಾಡಿದ್ದಾರೆ.
ಪ್ಯಾರಿಸ್ ಪ್ರವಾಸದ ವೇಲೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್’ರ ಪತ್ನಿ ಬ್ರಿಗೆಟ್ಟೆ ಅವರ ದೇಹ ಸೌಂದರ್ಯವನ್ನು ಹೊಗಳಿ ಟೀಕೆಗೆ ಗುರಿಯಾಗಿದ್ದಾರೆ.
ಇಲ್ಲಿನ ವಸ್ತುಸಂಗ್ರಹಾಲಯವೊಂದಕ್ಕೆ ತೆರಳಿದ್ದ ಭಯ ನಾಯಕರು ಮಾತುಕತೆ ಮುಗಿದು, ಇನ್ನೇನು ಗುಡ್’ಬೈ ಹೇಳಬೇಕೆನ್ನುವಷ್ಟರಲ್ಲಿ, ಫ್ರೆಂಚ್ ಅಧ್ಯಕ್ಷರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್’ರತ್ತ ತಿರುಗಿದ ಟ್ರಂಪ್, ‘ನಿಮಗೆ ಗೊತ್ತಾ, ನೀವು ಎಂತಹ ತ್ತಮ ಆಕಾರ (ಶೇಪ್) ಹೊಂದಿದ್ದೀರೆಂದರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರಿಗೆಟ್ಟಿ (64) ತಮ್ಮ ಪತಿ ಮ್ಯಾಕ್ರಾನ್ (39)ರ ಮಾಜಿ ಹೈಸ್ಕೂಲ್ ಶಿಕ್ಷಕಿಯಾಗಿದ್ದು, ಅವರಿಬ್ಬರ ಸಂಬಂಧದ ಬಗ್ಗೆ , ಅದರಲ್ಲೂ ಅವರಿಬ್ಬ ವಯಸ್ಸಿನ ಅಂತರದ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.