ಅವರು ಮಾಡಿದ್ದನ್ನು ಅನುಭವಿಸ್ತಾರೆ: ಡಿಕೆಶಿಯನ್ನು ಟೀಕಿಸಿದ ನಕಲಿ ಸುಮಲತಾ

By Web DeskFirst Published Sep 5, 2019, 8:46 PM IST
Highlights

ಅಕ್ರಮ ಹಣಕಾಸು ವರ್ಗಾವಣೆ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಯಲದ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಕುರಿತಾಗಿ ಸಂಸದೆ ಸುಮಲತಾ ಅಂಬರೀಶ್ ಹೆಸರಿನ ಫೇಸ್ ಬುಕ್ ಸ್ಟೇಟಸ್ ಫುಲ್ ವೈರಲ್ ಆಗಿದೆ.

ಬೆಂಗಳೂರು, [ಸೆ.05]: ಸಾಮಾಜಿಕ ತಾಣಗಳಲ್ಲಿ ನಕಲಿ ಖಾತೆಗಳ ಹಾವಳಿ ಹೆಚ್ಚಾಗಿದೆ. ಈ ನಕಲಿ ಖಾತೆಗಳು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಬೆನ್ನು ಬಿದ್ದಿವೆ.

ನಕಲಿ ಅಕೌಂಟ್‍ನಲ್ಲಿ ಮೂಲಕ ಸುಮಲತಾ ಅಂಬರೀಶ್ ಅವರ 4 ವರ್ಷಗಳ ಹಿಂದಿನ ಹಳೆಯ ವಿಡಿಯೋವನ್ನು ಹಾಕಿ ತೇಜೋವಧೆಗೆ ಯತ್ನಿಸಲಾಗಿತ್ತು. ಈ ಬಗ್ಗೆ ಸುಮಲತಾ ಅಂಬರೀಶ್ ಸೈಬರ್ ಕ್ರೈಂಗೆ ದೂರು ನೀಡಿದ್ದರು.

ಆದರೂ ಮತ್ತೆ ನಕಲಿ 'ಸುಮಲತಾ' ಬಾಲ ಬಿಚ್ಚಿದ್ದಾಳೆ. ಆದ್ರೆ ಈ ಬಾರಿ ಡಿಕೆ ಶಿವಕುಮಾರ್ ಅವರನ್ನು ಟೀಕಿಸಿ ಪೋಸ್ಟ್ ಮಾಡಲಾಗಿದೆ. ಡಿಕೆ ಶಿವಕುಮಾರ್ ಪೋಟೋ ಜತೆಗೆ ನ್ಯಾಯದ ಮುಂದೆ ಎಲ್ಲರೂ ಒಂದೇ. ಅವರು ಮಾಡಿದ್ದನ್ನು ಅವರು ಅನುಭವಿಸುತ್ತಾರೆ. ಇದಕ್ಕಾಗಿ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡುವುದು ಸರಿಯಲ್ಲ ಎಂಬ ಸ್ಟೇಟಸ್ ಹಾಕಲಾಗಿದೆ.

ಸಂಸದೆ ಸುಮಲತಾ ವಿರುದ್ಧ ಅವಾಚ್ಯ ಪದ ಬಳಕೆ: ದೂರು ದಾಖಲು

ಈ ಸ್ಟೇಟಸ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಕೆಲವರು ಇದನ್ನು ಸಂಸದೆ ಸುಮಲತಾ ಅಂಬರೀಶ್ ಅವರೇ ಮಾಡಿದ್ದಾರೆಂದು ನಂಬಿದ್ದಾರೆ, ಅಷ್ಟೇ ಅಲ್ಲದೇ ಅವರಿಗೆ ಹಿಗ್ಗಾಮುಗ್ಗಾ ಬೈದಿದ್ದಾರೆ. 

ಇದು ಸುಮಲತಾ ಗಮನಕ್ಕೆ ಬಂದಿದ್ದು, ಕೂಡಲೇ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ನಕಲಿ ಖಾತೆ ಸೃಷ್ಟಿ ಮಾಡಿ ಸ್ಟೇಟಸ್ ಹಾಕಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಟ್ಟಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಮತ್ತೆ ನಕಲಿ 'ಸುಮಲತಾ'ಗಳ ಹಾವಳಿ!.
ಸಂಸದೆ ಸುಮಲತಾ ಹೆಸರಿಗೆ ಮಸಿ ಬಳಿಯಲು ಯತ್ನ.
ನಕಲಿ ಫೇಸ್ಬುಕ್ ಅಕೌಂಟ್ ತೆರೆದಿರುವ ಕಿಡಿಗೇಡಿಗಳು.
ಸುಮಲತಾ ಅಂಬರೀಶ್ ಹೆಸರಲ್ಲಿ ನಕಲಿ ಅಕೌಂಟ್.
IS THERE NO WAY TO STOP THIS FAKE ACCOUNT MISCHIEF MAKERS ! THEY R GOING TOO FAR pic.twitter.com/nbhLF9raaE

— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA)
click me!