ನಾಳೆ ಬೆಂಗಳೂರಿಗೆ ಮೋದಿ: ಇಸ್ರೋ ಸಾಧನೆ ಕಣ್ತುಂಬಿಕೊಳ್ಳಲಿರುವ ಪ್ರಧಾನಿ!

By Web DeskFirst Published Sep 5, 2019, 7:49 PM IST
Highlights

ನಾಳೆ(ಸೆ.06) ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ|  ಸೆ.07ರಂದು ಚಂದ್ರಯಾನ-2 ನೌಕೆ ಚಂದ್ರನ ನೆಲ ಸ್ಪರ್ಶಿಸುವ ಕ್ಷಣಕ್ಕೆ ಸಾಕ್ಷಿ| ಇಸ್ರೋ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಿ ಮೋದಿ| ಪೀಣ್ಯ ಬಳಿ ಇರುವ  ಇಸ್ರೋದ ಇಸ್ಟ್ರಾಕ್‍ನಲ್ಲಿ ವೀಕ್ಷಣೆ|

ಬೆಂಗಳೂರು(ಸೆ.05): ನಾಳೆ(ಸೆ.06) ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ, ಸೆ.07ರಂದು ಇಸ್ರೋದ ಚಂದ್ರಯಾನ-2 ನೌಕೆಯ ವಿಕ್ರಮ್ ಲ್ಯಾಂಡರ್ ಚಂದ್ರನ ನೆಲ ಸ್ಪರ್ಶಿಸುವ ಕ್ಷಣ ಕಣ್ತುಂಬಿಕೊಳ್ಳಲಿದ್ದಾರೆ.

ಪೀಣ್ಯ ಬಳಿ ಇರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ)ದ ಇಸ್ಟ್ರಾಕ್‍ನಲ್ಲಿ ಚಂದ್ರಯಾನ-2 ವೀಕ್ಷಣೆ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.

ಇದೇ ವೇಳೆ ಇಸ್ರೋ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ರಾಯಚೂರು ಜಿಲ್ಲೆ ಸಿಂಧನೂರು ನಗರದ ಡಾಫಡಿಲ್ಸ್‌ ಕಾನ್ಸೆಫ್ಟ್‌ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಜಿ.ವೈಷ್ಣವಿ ನಾಗರಾಜ ಕೂಡ ಭಾಗವಹಿಸಲಿದ್ದಾರೆ.

ಬಳಿಕ ಅಲ್ಲಿಂದ ನೇರವಾಗಿ ಪ್ರಧಾನಿ ಮೋದಿ ಮುಂಬೈಗೆ ತೆರಳಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

click me!