FACT CHECK: ತಾಯಿ, ನರ್ಸ್ ಕೊಂದ ರಾಕ್ಷಸ ರೂಪದ 8 ಕೆಜಿ ಮಗು

By Web Desk  |  First Published Nov 24, 2019, 10:33 PM IST

ವಿಚಿತ್ರ  ರಕ್ಕಸಾಕಾರದ ಮಗು ಜನನ/ ಅಸ್ಸಾಂನಿಂದ ಘಟನೆ ವರದಿ/ ಹುಟ್ಟಿತ್ತಲೇ ದಾದಿ ಮತ್ತು ತಾಯಿಯ ಕೊಂದ ಮಗು/ ಚುಚ್ಚುಮದ್ದು ನೀಡಿ ಮಗು ಸಾಯಿಸಿದ ಸ್ಥಳೀಯರು


ಅಸ್ಸಾಂ]ನ. 24]  ಮೂರು ಕಾಲಿರುವ ಮಗು, ಮೂರು ಕಣ್ಣಿರುವ ಮಗು ಜನಿಸಿತು ಎಂಬ ವರದಿಗಳನ್ನೆಲ್ಲ ಕೇಳುತ್ತೇವೆ. ಆದರೆ ಅಸ್ಸಾಂನ ಹಳ್ಳಿಯೊಂದರಿಂದ ವರದಿಯಾದ ಘಟನೆ ಇಡೀ ಮಾನವ ಕುಲವನ್ನೇ ಬೆಚ್ಚಿ ಬೀಳಿಸುವಂತಿದೆ.

ವಿಚಿತ್ರ ಆಕೃತಿಯುಳ್ಳ ಮಗು ಜನನವಾಗಿದ್ದು ಹುಟ್ಟುತ್ತಲೇ ಅಮ್ಮ ಮತ್ತು ದಾದಿಯನ್ನು  ಕೊಂದಿದೆ ಎಂಧು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಗೊತ್ತಿಲ್ಲ. ಕೆಲ ಕಿಡಿಗೇಡಿಗಳು ಫೋಟೋಶಾಪ್ ಬಳಸಿ ಇಂಥ ಕೃತ್ಯ ಮಾಡಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದೆ.

Tap to resize

Latest Videos

ಮಗು ಹೆರುವವರೆಗೂ ಆಕೆ ಗರ್ಭ ಧರಿಸಿದ್ದೇ ಗೊತ್ತಿರಲಿಲ್ಲ

11 ತಿಂಗಳಾದರೂ ಮಹಿಳೆಗೆ ಹೆರಿಗೆ ಆಗಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಆಸ್ಪತ್ರಗೆ ಗರ್ಭಿಣಿಯನ್ನು ದಾಖಲು ಮಾಡಿದ್ದಾರೆ. ಸಾಮಾನ್ಯ ಹೆರಿಗೆ ಲಕ್ಷಣ ಕಾಣದಿದ್ದಾಗ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.

ಮಗು ಹೊರಬರುವಾಗಲೇ ತಾಯಿ ಸಾವನ್ನಪ್ಪಿದ್ದರು,. ದಾದಿಯ ಕೈಯನ್ನು ಮಗು ಹುಟ್ಟಿದ ತಕ್ಷಣವೇ ತಿಂದಿದ್ದು ಆಕೆಯೂ ಸಾವನ್ನಪ್ಪಿದ್ದಾಳೆ.ಹುಟ್ಟಿದ ,ಗು ಬರೋಬ್ಬರಿ 8 ಕೆಜೆ ಭಾರವಿದ್ದು ಗಂಟೆಗಳಲ್ಲೇ 12 ಕೆಜಿ ಆಗಿದೆ. ಮಗುವನ್ನು ಚುಚ್ಚುಮದ್ದು ನೀಡಿ ಸಾಯಿಸಲಾಗಿದೆ.... ಇದು ಸೋಶಿಯಲ್ ಮೀಡಿಯಾ ಸುದ್ದಿ. ಮಾತ್ರವಲ್ಲ ಕೆಲ ಮಾಧ್ಯಮಗಳು ವರದಿ ಮಾಡಿವೆ. ಪ್ಲಾಸ್ಟಿಕ್ ಮಗು ಎಂದು ಕರೆದಿವೆ.

click me!