ಭಾರತ್ ಮತಾಕೀ ಜೈ ಎಂದೇಳಲು ದಿನ ಕನ್ನಡಿ ಮುಂದೆ ನಿಂತು ಪ್ರಾಕ್ಟೀಸ್ ಮಾಡ್ತಿದ್ದೇನೆ ಎಂದು ಅನರ್ಹ ಶಾಸಕ, ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಹೇಳಿಕೆ ನಿಡಿದ್ದಾರೆ. ಯಾರದು ಈ ಕೆಳಗಿನಂತಿದೆ ನೋಡಿ..
ಬೆಂಗಳೂರು, [ನ.24]: ಭಾರತ್ ಮತಾಕೀ ಜೈ ಎಂದು ಹೇಳುವುದರಲ್ಲಿ ಎಲ್ಲಿ ತಪ್ಪಾಗುತ್ತೆ ಎಂದು ದಿನ ಕನ್ನಡಿ ಮುಂದೆ ನಿಂತು ಪ್ರಾಕ್ಟೀಸ್ ಮಾಡುತ್ತಿದ್ದೇನೆ ಎಂದು ಯಶವಂತಪುರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಯಶವಂತಪುರದಲ್ಲಿ ಇಂದು [ಭಾನುವಾರ] ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಜತೆ ಬಿಜೆಪಿ ಅಭ್ಯೃರ್ಥಿ ಎಸ್.ಟಿ.ಸೋಮಶೇಖರ್ ಭರ್ಜರಿ ಪ್ರಚಾರ ಮಾಡಿದರು.
undefined
ಸ್ಟಾರ್ ಹೋಟೆಲ್ ರೂಂನಲ್ಲಿ ಕಡತಕ್ಕೆ ಸಹಿ ಪಡೆಯುತ್ತಿದ್ಳು ನಟಿ! ಸೋಮಶೇಖರ್ ಹಚ್ಚಿದ್ರು ಕಿಡಿ
ಈ ವೇಳೆ ಮಾತನಾಡಿದ ಸೋಮಶೇಖರ್, ಪಕ್ಷಕ್ಕೆ [ಬಿಜೆಪಿ] ಸೇರುವಾಗ ನಾವು ಹೇಗೆ ಇರಬೇಕು ಎಂಬುದನ್ನು ಕಲಿಯಲು ನಳೀನ್ ಕುಮಾರ್ ಕಟೀಲ್ ನಮಗೆ ಪುಸ್ತಕ ಕೊಟ್ಟಿದ್ದಾರೆ ಎಂದರು.
ಒಬ್ಬರು ಫೋನ್ ಮಾಡಿ ಹರಿ ಓಂ ಅಂತಾರೆ. ಅದಕ್ಕೆ ನಾನು ಸ್ವಲ್ಪ ಎಚ್ಚರಿಕೆಯಿಂದ ಹೇಗೆ ಇರಬೇಕು ಎಂದು ಎಲ್ಲವನ್ನೂ ಕಲಿಯುತ್ತಿದ್ದೇನೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ನಾನು ದ್ರೋಹ ಮಾಡುವುದಿಲ್ಲ. ಪಕ್ಷದಲ್ಲಿ ನಾನು ಶಿಸ್ತಿನಿಂದ ಇರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅನರ್ಹ ಶಾಸಕರು ಬಿಜೆಪಿ ಸೇರುವ ಬಗ್ಗೆ ಪರ-ವಿರೋಧಗಳ ವ್ಯಕ್ತವಾಗಿದ್ದು, ಅನರ್ಹ ಶಾಸಕರುಗಳಿಗೆ ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಪಾಲಿಸಲು ಆಗುವುದಿಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸೋಮಶೇಖರ್ ಅವರು ಈ ರೀತಿಯ ಮಾತುಗಳನ್ನಾಡಿದ್ದಾರೆ.