
ಹಾಸನ(ಜು.07): ಫೇಸ್'ಬುಕ್'ನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ಸಂಬಂಧ ವರ್ಷದೊಳಗೆ ಅಂತ್ಯ ಕಂಡಿರುವ ಪ್ರಸಂಗವೊಂದು ನಡೆದಿದೆ.
ಕಡೂರು ಮೂಲದ ಅಮೂಲ್ಯ ಹಾಗೂ ಹಾಸನ ಜಿಲ್ಲೆ ಅರಸೀಕೆರೆಯ ನವೀನ್, ಫೇಸ್'ಬುಕ್'ನಲ್ಲಿ ಪರಿಚಯವಾಗಿ ಮದುವೆ ಆಗಿದ್ದರು. ಬೆಂಗಳೂರಿನಲ್ಲಿ ಆಟೋ ಚಾಲಕನಾಗಿದ್ದ ನವೀನ್ 6 ತಿಂಗಳ ಹಿಂದೆ ಅಮೂಲ್ಯಳನ್ನ ವರಿಸಿದ್ದ. ಐದೂವರೆ ತಿಂಗಳು ಜೊತೆಗಿದ್ದ ಅಮೂಲ್ಯ ಮನೆಯವರನ್ನು ನೋಡಬೇಕು ಅಂತಾ ಬೆಂಗಳೂರಿನಿಂದ ಊರಿಗೆ ಹೋಗಿದ್ದಾಳೆ.
ಈಗ ಅಮೂಲ್ಯ ಪೋಷಕರು ಆಕೆಯನ್ನು ವಾಪಸ್ ಕಳುಹಿಸಲು ನಿರಾಕರಿಸ್ತಾ ಇದ್ದಾರೆ . ಇದೀಗ ಆಕೆಯ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ . ಈ ಬಗ್ಗೆ ಹಾಸನ ಎಸ್ಪಿ ಕಚೇರಿಗೆ ದೂರು ನೀಡಿರುವ ನವೀನ್ , ನನಗೆ ನನ್ನ ಹೆಂಡ್ತಿ ಬೇಕು ಕೊಡಿಸಿಕೊಡಿ ಅಂತಾ ಕಣ್ಣೀರು ಹಾಕುತ್ತಾ ಬೇಡ್ತಿದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.