ಗಂಗೆಗೆ ಜೀವಂತ ವ್ಯಕ್ತಿಯ ಮಾನ್ಯತೆಗೆ ಸುಪ್ರೀಂ ತಡೆ

By Suvaran Web DeskFirst Published Jul 7, 2017, 2:27 PM IST
Highlights

ಗಂಗಾ ಮತ್ತು ಯಮುನಾ ನದಿಗೆ ಜೀವಂತ ವ್ಯಕ್ತಿಯ ಮಾನ್ಯತೆ ನೀಡುವ ಉತ್ತರಾಖಂಡ ಹೈಕೋರ್ಟಿನ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು ತಡೆ ನೀಡಿದೆ. ಗಂಗಾ, ಯಮುನಾ ಮತ್ತು ಅವುಗಳ ಉಪನದಿಗಳಿಗೆ ಜೀವಂತ ವ್ಯಕ್ತಿಯ ದರ್ಜೆ ನೀಡಿ ಉತ್ತರಾಖಂಡ ಹೈಕೋರ್ಟ್ ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿತ್ತು.

ನವದೆಹಲಿ: ಗಂಗಾ ಮತ್ತು ಯಮುನಾ ನದಿಗೆ ಜೀವಂತ ವ್ಯಕ್ತಿಯ ಮಾನ್ಯತೆ ನೀಡುವ ಉತ್ತರಾಖಂಡ ಹೈಕೋರ್ಟಿನ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು ತಡೆ ನೀಡಿದೆ.

ಗಂಗಾ, ಯಮುನಾ ಮತ್ತು ಅವುಗಳ ಉಪನದಿಗಳಿಗೆ ಜೀವಂತ ವ್ಯಕ್ತಿಯ ದರ್ಜೆ ನೀಡಿ ಉತ್ತರಾಖಂಡ ಹೈಕೋರ್ಟ್ ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿತ್ತು.

ನದಿಗೆ ಜೀವಂತ ವ್ಯಕ್ತಿಯ ಮಾನ್ಯತೆ ನೀಡಿದಲ್ಲಿ, ಅವುಗಳಿಂದಾಗುವ ನೆರೆ ಸಂಬಂಧಿ ಕಷ್ಟ-ನಷ್ಟಗಳಿಗೆ ಮುಖ್ಯ ಕಾರ್ಯದರ್ಶಿಯ ವಿರುದ್ಧ ಸಂತ್ರಸ್ತರು ದೂರು ಸಲ್ಲಿಸಬಹುದು, ಹಾಗಾಗಿ ಹಣಕಾಸಿನ ಹೊರೆ ರಾಜ್ಯ ಸರ್ಕಾರದ ಮೇಲೆ ಬೀಳಲಿದೆ ಎಂದು ಉತ್ತರಾಖಂಡ ರಾಜ್ಯವು ವಾದಿಸಿದೆ.

ಗಂಗಾ, ಯಮುನಾ ಮತ್ತು ಅವುಗಳ ಉಪನದಿಗಳಿಗೆ ಕಾನೂನಾತ್ಮಕವಾಗಿ ಜೀವಂತ ವ್ಯಕ್ತಿಯ ಸ್ಥಾನಮಾನ ನೀಡಬೇಕೆಂದು ಕಳೆದ ಮಾ.20ರಂದು ಉತ್ತರಾಖಂಡ ಹೈಕೋರ್ಟ್ ಆದೇಶಿಸಿತ್ತು. ನಮಮಿ ಗಂಗೆ ಯೋಜನೆಯ ನಿರ್ದೇಶಕರು, ಉತ್ತರಾಖಂಡ ರಾಜ್ಯದ ಎಡ್ವೋಕೇಟ್ ಜನರಲ್ ಹಾಗೂ ಮುಖ್ಯ ಕಾರ್ಯದರ್ಶಿಯವರು ‘ಕಾನೂನಾತ್ಮಕ ಪೋಷಕ’ರಾಗಿರುವರು ಕೋರ್ಟ್ ಹೇಳಿತ್ತು.

click me!