ಚುನಾವಣೆಯಲ್ಲಿ BJP ಮಂದಹಾಸ; ಬಾಂಗ್ಲಾ ಸರಣಿಗೆ ತಂಡ ಪ್ರಕಟ; ಅ.24ರ ಟಾಪ್ 10 ಸುದ್ದಿ!

By Web DeskFirst Published Oct 24, 2019, 5:30 PM IST
Highlights

ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಮಂದಹಾಸ ಬೀರಿದೆ. ಫಲಿತಾಂಶ ಬಿಜೆಪಿ ಪಾಳಯದಲ್ಲಿ ಸಮಾಧಾನ ತಂದಿದ್ದರೆ, ಇತರರಿಗೆ ಮುಖಭಂಗವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮಖಂಡ ಬಿಜೆಪಿ ಸೇರಲು ರೆಡಿಯಾಗಿದ್ದಾರೆ. ಜೈಲು ಸೇರಿದ್ದ ಡಿಕೆ ಶಿವಕುಮಾರ್ ಬಿಡುಗಡೆ ವೇಳೆ ಬಿಜೆಪಿ ಮುಖಂಡರಿಗೆ ಕೃತಜ್ಞತೆ ಹೇಳೋ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬಾಂಗ್ಲಾದೇಶ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಅ.24ರ ಟಾಪ್ 10 ಸುದ್ದಿ ಇಲ್ಲಿವೆ.

1)

ತೀವ್ರ ಕುತೂಹಲ ಮೂಡಿಸಿರುವ ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮತ ಎಣಿಕೆ ಕಾರ್ಯ ಆರಂಭವಾಗಿದೆ. ನಿರೀಕ್ಷೆಯಂತೆ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, ಹರಿಯಾಣದಲ್ಲಿ ಮಾತ್ರ ಆಡಳಿತಾರೂಢ ಬಿಜೆಪಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾದಂತಿದೆ.

2) ಕಾಂಗ್ರೆಸ್‌ಗೆ ಬಿಗ್ ಶಾಕ್ : ಸಿದ್ದರಾಮಯ್ಯ ಆಪ್ತ ಬಿಜೆಪಿಗೆ!


ಮಹಾರಾಷ್ಟ್ರ ಹಾಗೂ ಹರ್ಯಾಣ ಚುನಾವಣೆ ಫಲಿತಾಂಶಗಳು ಪ್ರಕಟವಾಗುತ್ತಿರುವ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ಗೆ ಮರ್ಮಾಘಾತವಾಗಿದೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆಪ್ತ, ಮಾಜಿ ಸಂಸದ ಸಿ.ಎಚ್.ವಿಜಯ್ ಶಂಕರ್ ಮತ್ತೆ ಬಿಜೆಪಿಯತ್ತ ಮುಖ ಮಾಡುವ ಸೂಚನೆ ನೀಡಿದ್ದಾರೆ. ಆ ಮೂಲಕ ಕಾಂಗ್ರೆಸ್ಸಿಗರಿಗೆ ಶಾಕ್ ನೀಡಲು ಸಜ್ಜಾಗಿದ್ದಾರೆ. 

3) ದೆಹಲಿಯಿಂದ ಬಿಜೆಪಿ ನಾಯಕರಿಗೂ ಡಿಕೆಶಿ ಕೃತಜ್ಞತೆ: ಏನಿದರ ಮರ್ಮ..?

ಹವಾಲಾ ಪ್ರಕರಣದಲ್ಲಿ ಜೈಲು ಸೇರಿದ್ದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಗೆ ಬಿಡುಗಡೆಯಾಗಿದ್ದಾರೆ.  ಜೈಲಿನಿಂದ ಹೊರಬಂದಿರುವ ಡಿಕೆಶಿ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನ್ನಾಡಿ ಬಿಜೆಪಿ ನಾಯಕರಿಗೆ ಅಭಿನಂದನೆಗಳನ್ನ ಹೇಳಿದ್ದಾರೆ. ಇದೀಗ ತೀವ್ರ ಕುತೂಹಲ ಕೆರಳಿಸಿದೆ.

4) ಗದಗ: ಬಿಜೆಪಿ ಮುಖಂಡನಿಗೆ ಸೇರಿದ ಹೋಟೆಲ್ ಮೇಲೆ ಐಟಿ ದಾಳಿ!

ಬಿಜೆಪಿ ಮುಖಂಡ ಹಾಗೂ ಕನಕದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿ ದಂಡಿನ್ ಅವರಿಗೆ ಸೇರಿದ ಹೋಟೆಲ್ ರಾಯಲ್ ವಿಲ್ಲಾ ಮೇಲೆ ಐಟಿ ಅಧಿಕಾರಿಗಳು ಇಂದು(ಗುರುವಾರ) ದಾಳಿ ನಡೆಸಿದ್ದಾರೆ.  ಗೋವಾ, ಹುಬ್ಬಳ್ಳಿ ಹಾಗೂ ಬೆಂಗಳೂರು ಕಚೇರಿಯ ನಾಲ್ವರು ಹಿರಿಯ ಅಧಿಕಾರಿಗಳ ನೇತೃತ್ವದ ತಂಡ ದಾಳಿ ಮಾಡಿದ್ದಾರೆ. ಈ ವೇಳೆ ಹೋಟೆಲ್‌ನ ವಿವಿಧ ಕೊಠಡಿಗಳನ್ನು ತಪಾಸಣೆ ನಡೆಸಿ,   ಕೈಗೆ ಸಿಕ್ಕ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದಾರೆ. 


5) ಫಾರಿನ್ ಹುಡ್ಗಿಗೆ ಮನಸೋತ ಹಾರ್ದಿಕ್ ಪಾಂಡ್ಯ...!

ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿರುವ ಹಾರ್ದಿಕ್ ಪಾಂಡ್ಯ ಇದೀಗ ಫಾರಿನ್ ಹುಡ್ಗಿಯ ಹಿಂದೆ ಬಿದ್ದಿದ್ದಾರೆ. ಅಷ್ಟಕ್ಕೂ ಪಾಂಡ್ಯ ಹಿಂದೆ ಬಿದ್ದಿರುವ ಹುಡುಗಿ ಹೇಗಿದ್ದಾಳೆ..? ಯಾರಾಕೆ ಎನ್ನುವ ನಿಮ್ಮು ಕುತೂಹಲಕ್ಕೆ ಈ ಸ್ಟೋರಿ ನೋಡಿ.

6)

ಕನ್ನಡ ಚಿತ್ರರಂಗದ ಲಾಫಿಂಗ್ ಸ್ಟಾರ್ ಶೈನಿಂಗ್ ಬಾಯ್ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಮೊನಾಲಿಸಾ' ಚಿತ್ರದಲ್ಲಿ ನಟಿಯಾಗಿ ಮಿಂಚಿದ ಸದಾ ಈಗ ಲೈಂಗಿಕ ಕಾರ್ಯಕರ್ತೆಯಾಗಿದ್ದಾರೆ. ಗಾಬರಿಯಾಗಬೇಡಿ. ನಿಜ ಜೀವನದಲ್ಲಿ ಅಲ್ಲ. ತೆಲುಗು ಚಿತ್ರದಲ್ಲಿ. ಈಗಾಗಲೇ ಈ ಚಿತ್ರದ ಕೆಲವು ಪೋಸ್ಟರ್‌ಗಳನ್ನು ಅಂತರ್ಜಾಲದಲ್ಲಿ ಕಾಣಿಸುತ್ತಿದ್ದು, ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.

7) ಐರಾಗೆ ಸಿಗದ ಅಂಬಿ ಗಿಫ್ಟ್‌: ಯಶ್ 2ನೇ ಮಗೂಗೆ ಆ ಅದೃಷ್ಟ!

ಇನ್ನೊಂದು ತಿಂಗಳಿಗೆ ಅಂಬಿ ಕರುನಾಡನ್ನು ಅಗಲಿ ವರ್ಷವಾಗಲಿದೆ. ಸಾವಿಗೂ ಮುನ್ನವೇ ಯಶ್-ರಾಧಿಕಾ ದಂಪತಿ ಮಗುವಿಗೆ ಗಿಫ್ಟ್ ಬುಕ್ ಮಾಡಿದ್ದರು ಅಂಬಿ ತಾತ. ಅದ್ಯಾಕೋ ಅದು ಐರಾಗೆ ಸಿಗಲೇ ಇಲ್ಲ. ಇದರ ಬಗ್ಗೆ ಹಾಗೂ ಇನ್ನತರೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ.


8) ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 63ನೇ ಸ್ಥಾನ!

ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿರುವ ಉದ್ಯಮ ಸ್ನೇಹಿ ದೇಶಗಳ ಪಟ್ಟಿಯಲ್ಲಿ ಭಾರತ 14 ಸ್ಥಾನಗಳ ಏರಿಕೆ ಕಂಡು 63ನೇ ಸ್ಥಾನಕ್ಕೆ ಏರಿದೆ. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆ ಮತ್ತು ಇತರ ಸುಧಾರಣಾ ಕ್ರಮಗಳು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ. 


9) ನಿಸಾನ್‌, ಡಾಟ್ಸನ್‌ ಕಾರು ಕೊಳ್ಳುವವರಿಗೆ ಭರ್ಜರಿ ಆಫರ್!

ದೀಪಾವಳಿ ಹಬ್ಬಕ್ಕೆ ಎಲ್ಲಾ ವ್ಯವಹಾರದಲ್ಲೂ ಆಫರ್, ರಿಯಾಯಿತಿಗಳು ಸಾಮಾನ್ಯ. ಈ ಬಾರಿ ಆಟೋಮೊಬೈಲ್ ಕ್ಷೇತ್ರ ಕೊಂಚ ಹಿನ್ನಡೆ ಅನುಭವಿಸಿರುವ ಕಾರಣ, ಈ ಬಾರಿಯ ದೀಪಾವಳಿಗೆ ಭರ್ಜರಿ ಆಫರ್ ನೀಡುತ್ತಿದೆ. ಇದೀಗ ನಿಸಾನ್ ಹಾಗೂ ದಾಟ್ಸನ್ ಹಬ್ಬದ ಆಫರ್ ಘೋಷಿಸಿದೆ.

10) ಬಾಂಗ್ಲಾ ಸರಣಿಗೆ ಟೀಂ ಇಂಡಿಯಾ ಪ್ರಕಟ: 3 ಕನ್ನಡಿಗರಿಗೆ ಸ್ಥಾನ

ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನವೆಂಬರ್ 03ರಿಂದ ನಡೆಯಲಿರುವ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟಿಸಲಾಗಿದ್ದು, ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಟಿ20 ತಂಡ ಮುನ್ನಡೆಸಿದರೆ, ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ ವಿರಾಟ್ ಟೀಂ ಇಂಡಿಯಾ ನಾಯಕತ್ವ ವಹಿಸಲಿದ್ದಾರೆ.

click me!