ಬೇಡದ ಪ್ಲಾಸ್ಟಿಕ್ ದಾಖಲೆಗೆ ಪಾತ್ರವಾದ ದೊಡ್ಡ ಕಂಪನಿ, ನೀವು ಕಾಯಂ ಗ್ರಾಹಕರಾ?

Published : Oct 24, 2019, 05:00 PM ISTUpdated : Oct 24, 2019, 05:06 PM IST
ಬೇಡದ ಪ್ಲಾಸ್ಟಿಕ್ ದಾಖಲೆಗೆ ಪಾತ್ರವಾದ ದೊಡ್ಡ ಕಂಪನಿ, ನೀವು ಕಾಯಂ ಗ್ರಾಹಕರಾ?

ಸಾರಾಂಶ

ಆತಂಕಕಾರಿ ಅಂಶ ತೆರೆದಿಟ್ಟ ಸರ್ವೆ/ 37 ದೇಶಗಳ್ಲಿ ಸಂಗ್ರಹ ಮಾಡಿದ ಕಸದಲ್ಲಿ ಈ ಕಂಪನಿಯ ಪ್ಲಾಸ್ಟಿಕ್ ತ್ಯಾಜ್ಯಗಳೆ ಅಧಿಕ/ ಕೋಕಾ ಕೋಲಾ ಕಂಪನಿಗೆ ಬೇಡದ ದಾಖಲೆ/

ನವದೆಹಲಿ(ಅ. 24)  ಪ್ಲಾಸ್ಟಿಕ್ ಮುಕ್ತ ಭಾರತದ ಕಲ್ಪನೆ ನಿಧಾನವಾಗಿ ಸಾಕಾರವಾಗುತ್ತಿದೆ. ಪ್ಲಾಸ್ಟಿಕ್ ಎಂಬ ಭೂತವನ್ನು ಪ್ರಪಂಚದಿಂದಲೇ ಹೊರಗೆ ಅಟ್ಟಲು ಎಲ್ಲ ದೇಶಗಳು ಕೈಂಕರ್ಯ ತೆಗೆದುಕೊಂಡಿವೆ.  ಹಾಗಾದರೆ ಯಾವ ಬ್ಯ್ರಾಂಡ್ ಪ್ಲಾಸ್ಟಿಕ್ ಮಾಲಿನ್ಯದಲ್ಲಿ ಬೇಡದ ಅಗ್ರ ಸ್ಥಾನ ಪಡೆದುಕೊಂಡಿದೆ.

ಕೋಕಾ ಕೋಲಾ ಕಂಪನಿ ನಿರಂತರವಾಗಿ ಎರಡನೇ ಸಾರಿ ಅತಿಹೆಚ್ಚು ಮಾಲಿನ್ಯಕಾರಕ ಬ್ಯ್ರಾಂಡ್ ಎಂಬ ಬೇಡದ ಹಣೆಪಟ್ಟಿಯನ್ನು ಪಡೆದುಕೊಂಡಿದೆ.

ಸೆಪ್ಟೆಂಬರ್ ನಲ್ಲಿ ನಡೆದ ಅಡಿಟ್ ಈ ವಿಚಾರವನ್ನು ತೆರೆದಿಟ್ಟಿದೆ. ಸರ್ವೆಯಲ್ಲಿ ಭಾಗವಹಿಸಿದ್ದವರು ಸಂಗ್ರಹಿಸಿದ ಕಸ, ಬಾಟಲ್, ಕಪ್ ಗಳ ಆಧಾರದಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

8000 ಅಧಿಕ ಕಂಪನಿಗಳ ಕಸ ಸಂಗ್ರಹಿಸಿದ ಸ್ವಯಂ ಸೇವಕರು ಅದನ್ನು ಬ್ರ್ಯಾಂಡ್ ಆಧಾರದ ಮೇಲೆ ವಿಂಗಡನೆ ಮಾಡಿದ್ದಾರೆ. 37 ದೇಶಗಳಲ್ಲಿ  ಸಂಗ್ರಹಿಸದ ಕಸದಲ್ಲಿ ಕೋಕಾ ಕೋಲಾ ಕಂಪನಿಯ 11,732 ಪ್ಲಾಸ್ಟಿಕ್ ಪೀಸ್ ಗಳು ಪತ್ತೆಯಾಗಿವೆ. ಯುರೋಪ್ ಮತ್ತು ಆಫ್ರಿಕಾದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಏಷ್ಯಾ ಮತ್ತು ದಕ್ಚಿಣ ಅಮೆರಿಕಾದಲ್ಲಿ ಎರಡನೇ ಸ್ಥಾನ ಕೋಕಾ ಕೋಲಾ ಕಂಪನಿಯ ವೇಸ್ಟ್ ಗೆ ಇದೆ.

ಭೇಷ್ ಬಾಲಕ, ಅಮೆಜಾನ್ಮ ಮತ್ತು ಫ್ಲಿಪ್ ಕಾರ್ಟ್ ಗೆ ಎಂಥ ಏಟು ಕೊಟ್ಯಪ್ಪಾ?

ಕೋಕಾ ಕೋಲಾದ ನಂತರದ ಸ್ಥಾನದಲ್ಲಿ ನೆಸ್ಲೆ, ಪೆಪ್ಸಿ ಕೋ, ಮೊಂಡೆಲ್ಸಜ್ ಇಂಟರ್ ನ್ಯಾಶನಲ್, ಯುನಿಲಿವರ ಬ್ರ್ಯಾಂಡ್ ಗಳಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಕಾ ಕೋಲಾ ಕಂಪನಿಯ ವಕ್ತಾರರೊಬ್ಬರು, ಇದು ನಮಗೆ ಅರಿಗಿಸಿಕೊಳ್ಳಲಾಗದ ಸಂಗತಿಯಾಗಿದೆ. ನಮ್ಮ ಸಹಭಾಗಿತ್ವದ ಕಂಪನಿಗಳ ಜತೆ ಗೂಡಿ  ಅಂತಾರಾಷ್ಟ್ರೀಯವಾಗಿರುವ ಈ ಸಮಸ್ಯೆ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಮುದ್ರ-ಸಾಗರಗಳನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಲೇ ಬಂದಿದ್ದೇವೆ ಎಂದು ತಿಳಿಸಿದ್ದಾರೆ.

ನಾವು ಸ್ಥಳೀಯವಾಗಿಯೂ ಕ್ರಮ ತೆಗೆದುಕೊಂಡಿದ್ದು ನಮ್ಮ ಮಾರುಕಟ್ಟೆ ಆಧಾರದಲ್ಲಿ ಬಾಟಲ್ ಮತ್ತಿತರ ವಸ್ತುಗಳ ಮರು ಸಂಸ್ಕರಣೆಗೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಆ ಕಂಪನಿ ಅಥವಾ ಈ ಕಂಪನಿ ಅಂಥ ಅಲ್ಲ. ಪ್ಲಾಸ್ಟಿಕ್ ಮುಕ್ತ ಮಾಡುವ ಕೆಲಸ ಆರಂಭದಿಂದಲೇ ಶುರುವಾಗಬೇಕಿದ್ದು ನಮ್ಮ ಪರಿಸರ ಕಾಪಾಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆಯೂ ಇರುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ