ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದಿರೋ ಡಿಕೆ ಶಿವಕುಮಾರ್ ಗೆ ಬಿಗ್ ಟ್ರಬಲ್ ಎದುರಾಗಿದೆ. ಕನಕಪುರ ಬಂಡೆಯನ್ನು ಇನ್ನು 10 ದಿನಗಳ ಕಾಲ ಇಡಿ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ. ಟ್ರಬಲ್ ಶೂಟರ್' ಮುಂದಿನ ಆಯ್ಕೆಗಳು? ಎನ್ನುವ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ..
ನವದೆಹಲಿ, [ಸೆ.04]: ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಡಿ ವಿಶೇಷ ನ್ಯಾಯಾಲಯ ಸೆ.13ರ ವರೆಗೆ ಇಡಿ ವಶಕ್ಕೆ ನೀಡಿ ಇಂದು [ಬುಧವಾರ] ಆದೇಶ ಹೊರಡಿಸಿದೆ.
4 ದಿನಗಳ ಕಾಲ ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು ನಿನ್ನೆ [ಮಂಗಳವಾರ] ಡಿಕೆಶಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ಇಂದು [ಬುಧವಾರ] ಸಂಜೆ ನವದೆಹಲಿಯ ರೋಸ್ ಅವೆನ್ಯೂ ಇಡಿ ವಿಶೇಷ ಕೋರ್ಟ್ ಹಾಜರುಪಡಿಸಲಾಯಿತು.
ಟ್ರಬಲ್ ಶೂಟರ್‌ಗೆ ಬಿಗ್ ಟ್ರಬಲ್: ಇಡಿ ವಶಕ್ಕೆ ಡಿಕೆ ಶಿವಕುಮಾರ್
ಆದ್ರೆ ಕೋರ್ಟ್ ಡಿಕೆಶಿ ಪರ ವಕೀಲರ ಮನವಿಯನ್ನು ತಿರಸ್ಕರಿಸಿ ಇಂದಿನಿಂದ 10 ದಿನಗಳ ಕಾಲ ಅಂದ್ರೆ ಸೆಪ್ಟೆಂಬರ್ 23ರ ವರೆಗೆ ಇಡಿ ವಶಕ್ಕೆ ನೀಡಿದೆ.
ಇದೀಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಬಂಧನದಲ್ಲಿರುವ ಟ್ರಬಲ್ ಶೂಟರ್ ಮುಂದಿರುವ ಕಾನೂನು ಅವಕಾಶಗಳೇನು? ಎನ್ನುವ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.
* ಇಡಿ ವಶಕ್ಕೆ ನೀಡಿದ ರೋಸ್ ಅವೆನ್ಯೂ ಕೋರ್ಟ್ ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಲು ಅವಕಾಶ ಇದೆ.
*ಜಾಮೀನಿಗಾಗಿ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬಹುದು.
* ಒಂದು ವೇಳೆ ದೆಹಲಿ ಹೈಕೋರ್ಟಿನಲ್ಲಿ ಜಾಮೀನು ಸಿಗದಿದ್ದರೆ ಸುಪ್ರೀಂಕೋರ್ಟ್ ಮೊರೆ ಹೋಗಬಹುದು.