ವರದಕ್ಷಿಣೆ ಸಾವು - ಸಾಕ್ಷಿ ಇದ್ದರೆ ಮಾತ್ರ ಅಪರಾಧಿ!

Published : Nov 21, 2016, 04:58 AM ISTUpdated : Apr 11, 2018, 12:50 PM IST
ವರದಕ್ಷಿಣೆ ಸಾವು - ಸಾಕ್ಷಿ ಇದ್ದರೆ ಮಾತ್ರ ಅಪರಾಧಿ!

ಸಾರಾಂಶ

ಪ್ರಕರಣದ ಬಗ್ಗೆ ನ್ಯಾಯಾಲಯದ ಆದೇಶ ಬರುವವರೆಗೆ ಆರೋಪಿ ಮುಗ್ಧ ಎಂದು ಪರಿ ಭಾವಿಸಲು ಅವಕಾಶ ಇರಲಿಲ್ಲ. ಇಂಥದ್ದೊಂದು ತಿದ್ದುಪಡಿಯನ್ನು ಸಾಕ್ಷ್ಯ ಕಾಯ್ದೆಗೆ ಸೇರಿಸಲಾಗಿತ್ತು.

ನವದೆಹಲಿ(ನ.21): ವರದಕ್ಷಿಣೆಗೆ ಬೇಡಿಕೆ ಇಟ್ಟು ಪತ್ನಿಗೆ ಕಿರುಕುಳ ನೀಡಲಾಗಿತ್ತು ಎಂಬುದಕ್ಕೆ ಸಾಕ್ಷ್ಯ ಇದ್ದರೆ ಮಾತ್ರ, ವರದಕ್ಷಿಣೆ ಸಾವು ಪ್ರಕರಣದ ಆರೋಪಿ ಶಿಕ್ಷೆಗೆ ಅರ್ಹನೆಂದು ಭಾವಿಸಬಹುದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ಮದುವೆ ಆದ ಏಳು ವರ್ಷಗಳಲ್ಲಿ ಪತ್ನಿ ಸಾವನ್ನಪ್ಪಿದರೆ ಹಾಗೂ ಸಾವಿಗೆ ಮೊದಲು ಆಕೆ ಹಿಂಸೆಗೆ ಒಳಗಾಗಿದ್ದಳು ಎಂಬುದಕ್ಕೆ ಸಾಕ್ಷ್ಯವಿದ್ದರೆ, ಆರೋಪಿಯು ತಪ್ಪು ಮಾಡಿದ್ದಾನೆ ಎಂದು ಮೇಲ್ನೋಟಕ್ಕೆ ಭಾವಿಸಲಾಗುತ್ತಿತ್ತು.

ಪ್ರಕರಣದ ಬಗ್ಗೆ ನ್ಯಾಯಾಲಯದ ಆದೇಶ ಬರುವವರೆಗೆ ಆರೋಪಿ ಮುಗ್ಧ ಎಂದು ಪರಿ ಭಾವಿಸಲು ಅವಕಾಶ ಇರಲಿಲ್ಲ. ಇಂಥದ್ದೊಂದು ತಿದ್ದುಪಡಿಯನ್ನು ಸಾಕ್ಷ್ಯ ಕಾಯ್ದೆಗೆ ಸೇರಿಸಲಾಗಿತ್ತು.

ವರದಕ್ಷಿಣೆ ಸಾವು ಪ್ರಕರಣದ ಆರೋಪಿ, ವರದಕ್ಷಿಣೆಗಾಗಿ ಪೀಡಿಸಿ ಮಹಿಳೆಯ ಸಾವಿಗೆ ಕಾರಣನಾಗಿದ್ದಾನೆ ಎಂಬುದನ್ನು ಸ್ಪಷ್ಟ ಸಾಕ್ಷ್ಯಗಳೊಂದಿಗೆ ಸಾಬೀತು ಮಾಡಲು ಪ್ರಾಸಿಕ್ಯೂಷನ್ ವಿಫಲವಾದರೆ, ಆ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸಲು ಆಗದು ಎಂದು ಸುಪ್ರೀಂ ಕೋರ್ಟ್​​ ತೀರ್ಪು ಪ್ರಕಟಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?