ಭೂವಿವಾದದ ಸುಳಿಯಲ್ಲಿ ಬಿಜೆಪಿ ಮಾಜಿ ಸಚಿವರ ಪುತ್ರ

Published : Nov 21, 2016, 03:36 AM ISTUpdated : Apr 11, 2018, 01:08 PM IST
ಭೂವಿವಾದದ ಸುಳಿಯಲ್ಲಿ ಬಿಜೆಪಿ ಮಾಜಿ ಸಚಿವರ ಪುತ್ರ

ಸಾರಾಂಶ

ಬಿಜೆಪಿಯ ಯುವ ಮುಖಂಡರೂ ಆಗಿರುವ ಸಪ್ತಗಿರಿ ಗೌಡರ ವಿರುದ್ಧ ವಿರುದ್ಧ ಕ್ರಮಕ್ಕೆ ಸರಕಾರ ಮುಂದಾಗುತ್ತಾ ಎಂದು ಕಾದು ನೋಡಬೇಕು.

ಬೆಂಗಳೂರು(ನ. 21): ಬಿಜೆಪಿಯ ಮಾಜಿ ಶಾಸಕರೊಬ್ಬರ ಮಗನೀಗ ಭೂವಿವಾದಲ್ಲಿ ಸಿಲುಕಿದ್ದಾರೆ. ಮಾಜಿ ಸಚಿವ ರಾಮಚಂದ್ರಗೌಡ ಅವರ ಪುತ್ರ ಸಪ್ತಗಿರಿ ಗೌಡ ಅವರು ಬಡವರಿಂದ ಭೂಮಿ ಖರೀದಿಸಿ ಸರ್ಕಾರಿ ಷರತ್ತುಗಳನ್ನು ಮೀರಿ ಸ್ವತ್ತನ್ನ ತನ್ನದಾಗಿಸಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿದೆ. ಅದಕ್ಕೆ ಸಂಬಂಧಿಸಿದ ಎಕ್ಸ್‌'ಕ್ಲೂಸಿವ್ ದಾಖಲೆಗಳು ಸುವರ್ಣ ನ್ಯೂಸ್'ಗೆ ಲಭ್ಯವಾಗಿದೆ.

ಬಡವರನ್ನು ಒಕ್ಕಲೆಬ್ಬಿಸಿ 20 ಎಕರೆ ಜಮೀನು ಸ್ವಾಹ?
ರಾಮನಗರ ಜಿಲ್ಲೆ ಮಾಗಡಿ ತಾಲೂಕು ಸರ್ವೆ ನಂಬರ್ 17ರ ಮಾಡಬಾಳ ಹೋಬಳಿಯಲ್ಲಿನ ಬರೋಬ್ಬರಿ 20 ಎಕರೆ ಸರ್ಕಾರಿ ಗೋಮಾಳವನ್ನು ತನ್ನ ತಂದೆಯ ರಾಜಕೀಯ ಶಕ್ತಿ ಬಳಸಿಕೊಂಡು ಸಪ್ತಗಿರಿ ಗೌಡ ತನ್ನ ಹೆಸರಿಗೆ ಮಂಜೂರಿ ಮಾಡಿಸಿಕೊಂಡಿದ್ದಾರೆ. ತೊಂಬತ್ತರ ದಶಕದಲ್ಲಿ ಸರ್ಕಾರಿ ಗೋಮಾಳದಲ್ಲಿ ಬಡವರು ಬಗರ್'ಹುಕ್ಕುಂ ಸಾಗುವಳಿ ಮಾಡ್ತಿದ್ರು. ಆದ್ರೆ ರಾಮಚಂದ್ರೇಗೌಡರ ಪುತ್ರ ಆ ಬಡ ರೈತರಿಂದ ಭೂಮಿ ಮಂಜೂರಾದ 15 ವರ್ಷದೊಳಗೆ ಬರೋಬ್ಬರಿ 19 ಎಕರೆ 34 ಗುಂಟೆ ಜಾಗವನ್ನ ತನ್ನ ಹೆಸರಿಗೆ ಮಾಡಿಕೊಂಡಿದ್ದಾರೆ ಅನ್ನೋದು ಸಾಮಾಜಿಕ ಹೋರಾಟಗಾರ ಹೆಮಂತರಾಜು ಆರೋಪ.

ಇಷ್ಟೇ ಅಲ್ಲ, ಸರ್ವೆ ನಂಬರ್ 17ರಲ್ಲಿ ಬರೋ 165 ಎಕರೆ ಜಾಗವು ಸಪ್ತಗಿರಿ ಗೌಡರ ಕಡೆಯವರ ಗೋಲ್ಮಾಲ್'ಗೆ ತುತ್ತಾಗುವ ಅಪಾಯವಿದೆ ಎನ್ನಲಾಗಿದೆ. ದಾಖಲೆ ಸಮೇತ ಸುವರ್ಣನ್ಯೂಸ್ ಈ ಹಗರಣ ಬಿಚ್ಚಿಟ್ಟಿದೆ. ಬಿಜೆಪಿಯ ಯುವ ಮುಖಂಡರೂ ಆಗಿರುವ ಸಪ್ತಗಿರಿ ಗೌಡರ ವಿರುದ್ಧ ವಿರುದ್ಧ ಕ್ರಮಕ್ಕೆ ಸರಕಾರ ಮುಂದಾಗುತ್ತಾ ಎಂದು ಕಾದು ನೋಡಬೇಕು.

- ರವಿ ಶಿವರಾಮ್, ಪೋಲಿಟಿಕಲ್ ಬ್ಯೂರೊ ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!