ಕಾಳಧನಿಕರಿಗೆ ಮೋದಿಯಿಂದ ಮತ್ತೊಂದು ಶಾಕ್! ಅಕೌಂಟ್'ಗೆ ದೊಡ್ಡ ಮೊತ್ತ ಹಾಕಿದವರಿಗೆ ಉಳಿಯೋದು ಬಿಡಿಗಾಸು ಮಾತ್ರ..!

Published : Nov 21, 2016, 03:56 AM ISTUpdated : Apr 11, 2018, 12:38 PM IST
ಕಾಳಧನಿಕರಿಗೆ ಮೋದಿಯಿಂದ ಮತ್ತೊಂದು ಶಾಕ್! ಅಕೌಂಟ್'ಗೆ ದೊಡ್ಡ ಮೊತ್ತ ಹಾಕಿದವರಿಗೆ ಉಳಿಯೋದು ಬಿಡಿಗಾಸು ಮಾತ್ರ..!

ಸಾರಾಂಶ

ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಅನ್ನೋ ಸ್ಥಿತಿಗೆ ಕಪ್ಪು ಕುಳವನ್ನ ತಂದಿರೋ ಹೆಗ್ಗಳಿಕೆ ಕೇಂದ್ರದ ಮುಡಿಗೇರ್ತಿದೆ. ಏನಪ್ಪಾ ಇದು ಅಂತಾ ಕುತೂಹಲನಾ? ಇದರ ಕಂಪ್ಲೀಟ್ ಡೀಟೇಲ್ಸ್ ಮುಂದಿದೆ.

ಬೆಂಗಳೂರು(ನ. 21): ನೋಟ್ ನಿಷೇಧದ ನಂತರ ಕೇಂದ್ರ ಸರ್ಕಾರ ಕಾಳಧನಿಕರಿಗೆ ಮತ್ತೊಂದು ಶಾಕ್ ನೀಡಿದೆ. 2.5 ಲಕ್ಷಕ್ಕೂ ಅಧಿಕ ಹಣವನ್ನ ಯಾರೇ ತಮ್ಮ ಖಾತೆಗೆ ಜಮಾ ಮಾಡಿದ್ರೂ ಸೂಕ್ತ ದಾಖಲೆ ನೀಡಬೇಕು. ಒಂದು ವೇಳೆ ಆ ದಾಖಲೆಗಳಲ್ಲಿ  ಲೋಪವಿದ್ದಲ್ಲಿ ಠೇವಣಿ ಹಣಕ್ಕೆ ಇನ್ಮುಂದೆ ತೆರಿಗೆ ಜೊತೆ ದಂಡವೂ ಬೀಳಲಿದೆ.

ನೋಟ್​ ಬ್ಯಾನ್'​ಗೂ ಮೊದಲೇ ಕೇಂದ್ರ ಸರ್ಕಾರ ಕಾಳಧನಿಕರಿಗೆ ಕಪ್ಪು ಹಣವನ್ನೂ ಕೂಡ ಅಕೌಂಟ್​'ಗೆ ಜಮೆ ಮಾಡಿ, ಸರಿಯಾದ ತೆರಿಗೆ ಕಟ್ಟಲು ಅವಕಾಶವನ್ನ ನೀಡಿತ್ತು. ಆದ್ರೆ ಇದನ್ನ ಕಪ್ಪುಕುಳಗಳು ಗಣನೆಗೆ ತೆಗೆದುಕೊಂಡಿರಲಿಲ್ಲ. ಆದ್ರೆ ಅದರ ಪರಿಣಾಮವನ್ನ ಈಗ ಅನುಭವಿಸುವಂತಾಗಿದೆ.

ಕಪ್ಪುಹಣ ಠೇವಣಿ ಮಾಡಿದರೆ ಉಳಿಯುವುದೆಷ್ಟು?

5 ಲಕ್ಷ ಠೇವಣಿ:
ಶೇ.30  - ಆದಾಯ ತೆರಿಗೆ - 1.5 ಲಕ್ಷ
ಶೇ.3 - ಶಿಕ್ಷಣ ಸೆಸ್ - 4,500 ರೂ.
ಶೇ. 200 ದಂಡ - 3.09 ಲಕ್ಷ ರೂ.
ಒಟ್ಟು ತೆರಿಗೆ - 4,63,500 ರೂ.
ಉಳಿಯುವುದು - 36,500 ರೂ.

10 ಲಕ್ಷ ಠೇವಣಿ:
ಶೇ.30  - ಆದಾಯ ತೆರಿಗೆ - 3, 00, 000
ಶೇ.3 - ಶಿಕ್ಷಣ ಸೆಸ್ - 9000 ರೂ.
ಶೇ. 200 ದಂಡ - 6, 18,000 ರೂ.
ಒಟ್ಟು ತೆರಿಗೆ - 9,27,000 ರೂ.
ಉಳಿಯುವುದು - 73,500 ರೂ.

15 ಲಕ್ಷ ಠೇವಣಿ:
ಶೇ.30  - ಆದಾಯ ತೆರಿಗೆ -4,50, 000
ಶೇ.3 - ಶಿಕ್ಷಣ ಸೆಸ್ - 13, 500 ರೂ.
ಶೇ. 200 ದಂಡ - 9, 27,000 ರೂ.
ಒಟ್ಟು ತೆರಿಗೆ - 13, 90,500 ರೂ.
ಉಳಿಯುವುದು - 1,09, 000 ರೂ.

ಲಕ್ಷಗಟ್ಟಲೇ ಠೇವಣಿ ಮಾಡಿದ್ರೆ ಉಳಿಯೋದು ಪುಡಿಗಾಸು. ಇನ್ನು, ಬಚ್ಚಿಟ್ಟ ಹಣವನ್ನ ಹಾಗೇ ಇಟ್ರೆ ಮೌಲ್ಯವಿಲ್ಲ.

ಬೇನಾಮಿ ಲೆಕ್ಕ ಕೊಟ್ಟರೆ 7 ವರ್ಷ ಜೈಲು?
ದಂಡದಿಂದ ತಪ್ಪಿಸಿಕೊಳ್ಳಲು ಕೆಲವರು ಬೇನಾಮಿ ಅಕೌಂಟ್ ಸೃಷ್ಟಿ ಮಾಡಿರುವ ಪ್ರಮೇಯಗಳು ಇವೆ, ಅದೂ ಸಾಲದು ಎಂಬಂತೆ ಮತ್ತೊಬ್ಬರ ಅಕೌಂಟ್'​ನಲ್ಲಿ ಜಮೆ ಮಾಡಿ, ಅವರಿಗೆ ಪರ್ಸೆಂಟೇಜ್ ಲೆಕ್ಕದಲ್ಲಿ ಹಣ ನೀಡುವ ವ್ಯವಹಾರಗಳು ನಡೆಯುತ್ತಿವೆ. ಇಂಥವರೇನಾದ್ರೂ ಸಿಕ್ಕಿಬಿದ್ರೆ ದಂಡದ ಜೊತೆ 7 ವರ್ಷಗಳ ಕಾರಾಗೃಹ ಶಿಕ್ಷೆ ಕೂಡ ಅನುಭವಿಸಬೇಕಾಗುತ್ತೆ.

ಹೀಗೆ ಕಪ್ಪುಕುಳಗಳ ಎಲಾ ರೀತಿಯ ವಾಮಮಾರ್ಗವನ್ನೂ ಬಂದ್ ಮಾಡುವ ಕೆಲಸ ನಡೆಯುತ್ತಿದೆ. ಈ ಮಧ್ಯೆ ಇಂದಿನಿಂದ ಮತ್ತೆ ಎಲ್ಲಾ ಬ್ಯಾಂಕ್'​ಗಳಲ್ಲಿ ವ್ಯವಹಾರಗಳು ಪುನಾರಂಭವಾಗುತ್ತಿವೆ. ದೇಶಾದ್ಯಂತ ನೋಟು ವಿನಿಮಯ ನಡೆಯಲಿದೆ.

- ಧಾನ್ಯಶ್ರೀ, ನ್ಯೂಸ್ ಡೆಸ್ಕ್ ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?