
ಬೆಂಗಳೂರು (ಸೆ.19): ಇತ್ತೀಚೆಗೆ ಭಟ್ಕಳ ಪುರಸಭೆಯಲ್ಲಿ ಅಂಗಡಿ ಹರಾಜು ಸಂಬಂಧಿಸಿದಂತೆ ನಡೆದ ಗಲಭೆಯನ್ನು ಕಲ್ಲಡ್ಕ ಆಗಲು ಬಿಡಬೇಡಿ. ನಮ್ಮವರನ್ನು ಅನಾವಶ್ಯಕವಾಗಿ ಬಂಧಿಸಿದ್ರೆ ಸುಮ್ಮನಿರಲ್ಲ. ಉತ್ತರಕನ್ನಡ ಡಿಸಿ ಎಸ್ ಎಸ್ ನಕುಲ್ ಅವರಿಗೆ ಶೋಭಾ ಕರಂದಾಜ್ಲೆ ಫೋನಿನಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಭಟ್ಕಳ ಪುರಸಭೆಯ ಅಂಗಡಿ ಹರಾಜು ಪ್ರಕ್ರಿಯೆಯಲ್ಲಿ ನಡೆದ ಗಲಾಟೆ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಅವತ್ತು ಭಟ್ಕಳ ಪುರಸಭೆ ಅಂಗಡಿ ಹರಾಜಿಗೆ ಮುಂದಾದಾಗ ಗಲಾಟೆ ನಡೆದಿತ್ತು.. ಈ ವೇಳೆ ವ್ಯಾಪಾರಿ ರಾಮಚಂದ್ರ ನಾಯ್ಕ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಸೋದರ ಸುಟ್ಟುಗಾಯಗೊಂಡಿದ್ದಾನೆ. ಇವತ್ತು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮೃತ ರಾಮಚಂದ್ರನ ಮನೆಗೆ ಭೇಟಿ ಕೊಟ್ಟು ಕುಟುಂಬಕ್ಕೆ ಸಾಂತ್ವನ ಹೇಳಿದರು. ಅದಾದ ಬಳಿಕ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರಿಗೆ ಫೋನ್ನಲ್ಲೇ ಎಚ್ಚರಿಕೆ ಕೊಟ್ಟರು.
ಭಟ್ಕಳ ಗಲಭೆ ಸಂಬಂಧ ಈಗಾಗಲೇ 66 ಜನ ಹಿಂದು ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ. 11 ಮಂದಿಯನ್ನು ಬಂಧಿಸಲಾಗಿದೆ.. ಸುಖಾಸುಮ್ಮನೇ ಗೂಂಡಾ ಕೇಸ್ ಹಾಕಿದ್ಯಾಕೆ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ.. ಸರ್ಕಾರ ಒಂದು ಸಮುದಾಯದ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಹಿಂದೂಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಿಸದಿದ್ರೆ ಭಟ್ಕಳಕ್ಕೆ ಬಂದು ಪ್ರತಿಭಟಿಸೋದಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.