ಥಿಯೇಟರ್'ನಲ್ಲಿ ಕಸ ಗುಡಿಸುವವ ಈಗ ಬಿಬಿಎಂಪಿ ನೌಕರ! ಏನಿದು ಕಹಾನಿ ಮೇ ಟ್ವಿಸ್ಟ್?

Published : Sep 19, 2017, 08:49 PM ISTUpdated : Apr 11, 2018, 12:58 PM IST
ಥಿಯೇಟರ್'ನಲ್ಲಿ ಕಸ ಗುಡಿಸುವವ ಈಗ ಬಿಬಿಎಂಪಿ ನೌಕರ! ಏನಿದು ಕಹಾನಿ ಮೇ ಟ್ವಿಸ್ಟ್?

ಸಾರಾಂಶ

ಆತ ಅಸಲಿಗೆ ಥಿಯೇಟರ್'ನಲ್ಲಿ ಕಸ ಗುಡಿಸುವವ. ಆದರೆ ಇದೀಗ ಬಿಬಿಎಂಪಿ ನೌಕರ. ಥಿಯೇಟರ್ ಕಸ ಗೂಡಿಸವವನು ಹೇಗೆ ಪಾಲಿಕೆಯಲ್ಲಿ ಕೆಲಸ ಗಿಟ್ಟಿಸಿಕೊಂಡ ಅಂತೀರಾ? ಇಲ್ಲಿದೆ ಕಹಾನಿ ಮೆ ಟ್ವಿಸ್ಟ್!

ಬೆಂಗಳೂರು (ಸೆ.19): ಆತ ಅಸಲಿಗೆ ಥಿಯೇಟರ್'ನಲ್ಲಿ ಕಸ ಗುಡಿಸುವವ. ಆದರೆ ಇದೀಗ ಬಿಬಿಎಂಪಿ ನೌಕರ. ಥಿಯೇಟರ್ ಕಸ ಗೂಡಿಸವವನು ಹೇಗೆ ಪಾಲಿಕೆಯಲ್ಲಿ ಕೆಲಸ ಗಿಟ್ಟಿಸಿಕೊಂಡ ಅಂತೀರಾ? ಇಲ್ಲಿದೆ ಕಹಾನಿ ಮೆ ಟ್ವಿಸ್ಟ್!

ವಿದೇಶದಲ್ಲಿ ಭರ್ಜರಿಯಾಗಿ ಪೋಟೋ ತೆಗೆದುಕೊಳ್ಳುತ್ತಾ ಕೋಟಿ-ಕೋಟಿ ಸಂಪಾದನೆ ಇದ್ದಂತೆ ಕಾಣುವ ಈತ ಅಶೋಕ್ ಕುಮಾರ್ ಅಲಿಯಾಸ್ ನಕಲಿ ಬಾಬು. ಶಿವಾಜಿ ನಗರದ ಬಿಬಿಎಂಪಿ ಕಚೇರಿಯಲ್ಲಿ ಜವಾನ ಆಗಿರುವ ಈತನ  ಮೇಲೆ ಬಿಎಂಟಿಎಫ್ ಎಫ್'ಐಆರ್ ದಾಖಲು ಮಾಡಿದೆ. ಕಾರಣ  ಇಷ್ಟೇ 1995ರಲ್ಲಿ  ಬಿಬಿಎಂಪಿಯಲ್ಲಿ ಡಿ ಗ್ರೂಪ್​ ನೌಕರರನಾಗಿ ಸೇರಿಕೊಂಡಿದ್ದಾನೆ. ತೆಲಗು ಬೋವಿ ಜನಾಂಗದ ಕೆಂಚಯ್ಯ ಎಂಬುವವರು ಪರಿಚಯಮಾಡಿಕೊಂಡಿದ ಅಶೋಕ್ ಕುಮಾರ್ . ಕೆಂಚಯ್ಯ ಸತ್ತ ಮೇಲೆ ಅವರ ಮಗನೆಂದು ಕೇಳಿಕೊಂಡು,ಅನುಕಂಪದ ಆಧಾರದ ಮೇಲೆ ಬಿಬಿಎಂಪಿಯಲ್ಲಿ  ಡಿ ಗ್ರೂಪ್​ ನೌಕರನಾಗಿ ನೇಮಕವಾಗುತ್ತಾನೆ. ಅವರಿವರ ಕೈಕಾಲು ಹಿಡಿದು, ಕ್ಲಾಸ್​ 4 ಹುದ್ದೆಯಲ್ಲಿ ಅಟೆಂಡರ್​ಯಾದ ಬಾಬು,ಶಿವಾಜಿನಗರದಲ್ಲಿರುವ ಬಿಬಿಎಂಪಿ ಅಚೇರಿಯಲ್ಲಿ ಕಾರ್ಯನಿರ್ವಹಿಸುತ್ತಾನೆ.  ಅಷ್ಟೇ ಅಲ್ಲದೆ  ಏಳೇಂಟು ಬಾರಿ ವಿದೇಶಕ್ಕೂ ಹೋಗಿ ಬಂದಿದ್ದಾನೆ. 2 ಲಕ್ಷ ರೂಪಾಯಿ ಲಂಚ ಕೊಟ್ಟು ಚೆನ್ನೈ ಮೂಲದ ವಿವಿಯೊಂದರಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾನೆ.

ಈತನ ಬಗ್ಗೆ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸುವರ್ಣ ನ್ಯೂಸ್ ಸಮಗ್ರವಾಗಿ ವರದಿ ಪ್ರಸಾರ ಮಾಡಿತ್ತು. ಈತನ ಬಗ್ಗೆ ಬಿಎಂಟಿಎಫ್ ನಲ್ಲಿ ದೂರು ಕೂಡಾ ದಾಖಲಾಗಿತ್ತು. ಇದೀಗ ಎಫ್ ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ನಕಲಿ ಬಾಬು ಮನೆಗೆ ಹೋದಾಗ ಆತ ಇರಲಿಲ್ಲ. ಪ್ರಕರಣ ಬೆಳಕಿಗೆ ಬರ್ತಿದ್ದಂತೆ ಆತ  ತಲೆ ಮರೆಸಿಕೊಂಡಿದ್ದು ತಿಳಿದು ಬಂದಿದೆ. ಒಟ್ಟಿನಲ್ಲಿ  ಪ್ರಾಮಾಣಿಕ ಅಧಿಕಾರಿಗಳ ಪಾಲಿಗೆ ಬಕಾಸುರನಾಗಿದ್ದ ಬಾಬು ಈಗ ಬಿಎಂಟಿಎಫ್ ಕೈಗೆ ಸಿಲುಕಿ  ಬಂಧನ ಭೀತಿಯಲ್ಲಿ ಇದ್ದಾನೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ರೈಲು, 7 ಗಜ ಬಲಿ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ