ಡಿಕೆಶಿ ಅರೆಸ್ಟ್: ದೇವೇಗೌಡ ನಿವಾಸಕ್ಕೆ ಕುಮಾರಸ್ವಾಮಿ ದೌಡು

Published : Sep 03, 2019, 11:17 PM ISTUpdated : Sep 03, 2019, 11:21 PM IST
ಡಿಕೆಶಿ ಅರೆಸ್ಟ್: ದೇವೇಗೌಡ ನಿವಾಸಕ್ಕೆ ಕುಮಾರಸ್ವಾಮಿ ದೌಡು

ಸಾರಾಂಶ

ದೇವೇಗೌಡ ನಿವಾಸಕ್ಕೆ ಕುಮಾರಸ್ವಾಮಿ ದೌಡು| ಮಲೇಷ್ಯಾ ಪ್ರವಾಸದಿಂದ ವಾಪಸ್ಸಾದ ಕುಮಾರಸ್ವಾಮಿ| ಡಿಕೆಸಿ ಬಂಧನದ ಸುದ್ದಿ ತಿಳಿದು ಗೌಡರ ನಿವಾಸಕ್ಕೆ ಧಾವಿಸಿದ ಎಚ್ಡಿಕೆ| ಡಿಕೆಶಿ ಬೆನ್ನಿಗೆ ನಿಲ್ಲುವ ಬಗ್ಗೆ ಪಕ್ಷದ ನಿಲುವಿನ ಬಗ್ಗೆ ಅಪ್ಪ-ಮಗ ಚರ್ಚೆ  

ಬೆಂಗಳೂರು, [ಸೆ.03]:  ಮನಿ ಲಾಂಡರಿಂಗ್ ಪ್ರಕರಣದಲ್ಲಿ ನವದೆಹಲಿಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಬಂಧಿಸುತ್ತಿದ್ದಂತೆಯೇ ಇತ್ತ ಕುಮಾರಸ್ವಾಮಿ ಅವರು ದೇವೇಗೌಡರ ನಿವಾಸಕ್ಕೆ ದೌಡಾಯಿಸಿದ್ದಾರೆ.

ಮಗ ಡಿಕೆಶಿ ಅರೆಸ್ಟ್ ಸುದ್ದಿ ಕೇಳಿ ತಾಯಿ ಗೌರಮ್ಮ ಅಸ್ವಸ್ಥ

ಮಲೇಷ್ಯಾ ಪ್ರವಾಸದಿಂದ ಇಂದು [ಮಂಗಳವಾರ] ಬೆಂಗಳೂರಿಗೆ ವಾಪಸ್ಸಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ದಿಢೀರ್ ದೇವೇಗೌಡರನ್ನು ಭೇಟಿ ಮಾಡಲು ಹೋಗಿದ್ದಾರೆ.

ಈ ಎರಡೇ ಎರಡು ಪ್ರಶ್ನೆಯೇ ಡಿಕೆಶಿ ಅರೆಸ್ಟ್ ಆಗಲು ಕಾರಣವಾಯ್ತು..!

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ಮನೆಗೆ ತೆರಳಿರುವ ಕುಮಾರಸ್ವಾಮಿ ಅವರು ಡಿಕೆಶಿ ಬೆನ್ನಿಗೆ ನಿಲ್ಲಬೇಕೋ ಬೇಡವೋ? ಎನ್ನುವ ಪಕ್ಷದ ನಿಲುವಿನ ಬಗ್ಗೆ ನಡೆಸುತ್ತಿದ್ದಾರೆ  ಎನ್ನುವ ಮಾಹಿತಿ ಲಭ್ಯವಾಗಿದೆ.

ಥ್ಯಾಂಕ್ಸ್ ಬಿಜೆಪಿ ಫ್ರೆಂಡ್ಸ್... ಬಂಧನದ ನಂತರ ಡಿಕೆಶಿ ಮೊದಲ ಮಾತು!

ಡಿಕೆಶಿ ಅರೆಸ್ಟ್ ಖಂಡಿಸಿ ಈಗಾಗಲೇ ರಾಜ್ಯಾದ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.  ಇನ್ನು ರಾಮನಗರ ಹಾಗೂ ಡಿಕೆಶಿ ಕ್ಷೇತ್ರ ಕನಕಪುರದಲ್ಲಿ ಮೂರ್ನಾಲ್ಕು KSRTC ಬಸ್ ಗಳಿಗೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ನಾಳೆ [ಬುಧವಾರ] ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ [ಕೆಪಿಸಿಸಿ] ಸೂಚನೆ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾ ಕೇಂದ್ರಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿಯಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ