ಮೋದಿಗೆ ದೇವೇಗೌಡರ ಲೆಟರ್, ಮಹಾರಾಷ್ಟ್ರದಲ್ಲಿ ಶಿವಸೇನೆ ಸರ್ಕಾರ್? ನ.03ರ ಟಾಪ್ 10 ಸುದ್ದಿ!

By Web DeskFirst Published Nov 3, 2019, 4:42 PM IST
Highlights

ವಿದೇಶದಿಂದ ಹಾಲು ಆಮದು ಮಾಡಿಕೊಳ್ಳುವ ಕ್ರಮಕ್ಕೆ  ಪ್ರಧಾನಿ ನರೇಂದ್ರ ಮೋದಿಗೆ ಜೆಡಿಎಸ್  ವರಿಷ್ಠ ಎಚ್‌.ಡಿ.ದೇವೇಗೌಡ ಪತ್ರ ಬರೆದಿದ್ದಾರೆ. ಮಾಜಿ ಸಚಿವ ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಸಂಸದ ಡಿ.ಕೆ.​ಸು​ರೇಶ್‌ ಅವರ ಭಯಕ್ಕೆ ಕನ​ಕ​ಪುರ ನಗ​ರ​ಸಭೆ ಚುನಾ​ವ​ಣೆ​ಯಲ್ಲಿ ಸ್ಪರ್ಧಿ​ಸಿ​ರುವ ಅಭ್ಯ​ರ್ಥಿ​ಗಳು ಕನ​ಕ​ಪುರ ತೊರೆದು ಪ್ರವಾಸ ಹೊರ​ಟಿ​ದ್ದಾರೆ. ಕಿಚ್ಚನ ಜೊತೆ ವಾರದ ಮಾತುಕತೆಯಲ್ಲಿ ಬಿಗ್‌ಬಾಸ್ ಮಾಸ್ಟರ್ ಪ್ಲಾನ್ ಬಹಿರಂಗವಾಗಿದೆ. ಭಾರತ-ಬಾಂಗ್ಲಾ ಟಿ20 ಪಂದ್ಯ, ಮಹಾರಾಷ್ಟ್ರದಲ್ಲಿ ಶಿವಸೇನೆ ಸರ್ಕಾರ ಸೇರಿದಂತೆ ನ.03ರ ಭಾನುವಾರ ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.

1) ಆಯ್ಕೆ: ಪಶ್ಚಾತ್ತಾಪ ಪಟ್ಟ ಸಿದ್ದರಾಮಯ್ಯರಿಂದ ಕ್ಷಮೆಯಾಚನೆ..!

 ಕೆಪಿಸಿಸಿ ಕಚೇರಿಯಲ್ಲಿ ನಡೆದ ಕೆ.ಆರ್.ಪುರಂ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕ್ಷಮೆ ಕೇಳಿದ ಪ್ರಸಂಗ ನಡೆಯಿತು. ಅನ್ಯಾಯ ಆಗಿದೆ ಎಂದು ಕಾರ್ಯಕರ್ತರು ಆಕ್ರೋಶಕ್ಕೆ ಸಿದ್ದು ಕ್ಷಮೆಯಾಚಿಸಿದ್ದಾರೆ.

2) ಡಿಕೆ ಸಹೋ​ದ​ರ​ರಿಗೆ ಹೆದರಿ ಕನ​ಕ​ಪುರ ತೊರೆದ ಬಿಜೆ​ಪಿ​ ಅ​ಭ್ಯ​ರ್ಥಿ​ಗಳು!

 ಮಾಜಿ ಸಚಿವ ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಸಂಸದ ಡಿ.ಕೆ.​ಸು​ರೇಶ್‌ ಅವರ ಭಯಕ್ಕೆ ಕನ​ಕ​ಪುರ ನಗ​ರ​ಸಭೆ ಚುನಾ​ವ​ಣೆ​ಯಲ್ಲಿ ಸ್ಪರ್ಧಿ​ಸಿ​ರುವ ಅಭ್ಯ​ರ್ಥಿ​ಗಳು ಕನ​ಕ​ಪುರ ತೊರೆದು ಪ್ರವಾಸ ಹೊರ​ಟಿ​ದ್ದಾರೆ. ಈ ಕ್ಷೇತ್ರದಲ್ಲಿ ಬೇರೆ ಪಕ್ಷದ ಅಭ್ಯ​ರ್ಥಿ​ಗ​ಳಾ​ಗಲಿ ಅಥವಾ ಪಕ್ಷೇ​ತ​ರ​ರಾಗಿ ಯಾರೂ ನಾಮ​ಪತ್ರ ಸಲ್ಲಿ​ಸ​ದಂತೆ ಡಿಕೆ ಬ್ರದರ್ಸ್ ಎಚ್ಚರ ವಹಿ​ಸಿ​ದ್ದರು.

3) ತಂದೆ ಸಮಾಧಿ ಧ್ವಂಸಕ್ಕೆ ಸಿಎಂ ಆದೇಶ! ಈ ಜಾಗದಲ್ಲಿ ಸಾರ್ವಜನಿಕರಿಗೆ ಸೌಕರ್ಯ

ಪುರಿ ನಗರದಲ್ಲಿರುವ ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್‌ ಅವರ ಸಮಾಧಿ ಸುತ್ತ ನಿರ್ಮಿಸಲಾಗಿದ್ದ ಸ್ಮಾರಕ ಹಾಗೂ ಕಾಂಪೌಂಡ್‌ ಗೋಡೆಯನ್ನು ತೆರವುಗೊಳಿಸಲು ಖುದ್ದು ಅವರ ಪುತ್ರ ಹಾಗೂ ಹಾಲಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನಿರ್ಧರಿಸಿದ್ದಾರೆ.


4) ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಸರ್ಕಾರಕ್ಕೆ ಯತ್ನ?

ಮಹಾರಾಷ್ಟ್ರದ ಮುಖ್ಯಮಂತ್ರಿ ಗದ್ದುಗೆಗಾಗಿ ಬಿಜೆಪಿ ಹಾಗೂ ಶಿವಸೇನೆ ನಡುವೆ ಸೃಷ್ಟಿಯಾಗಿರುವ ಕಗ್ಗಂಟು  ಬಗೆಹರಿದಿಲ್ಲ. ಈ ನಡುವೆ, ರಹಸ್ಯ ರಾಜಕೀಯ ಬೆಳವಣಿಗೆಗಳು ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದು, ಶಿವಸೇನೆ- ಎನ್‌ಸಿಪಿ ಸರ್ಕಾರ ಅಸ್ತಿತ್ವಕ್ಕೆ ಬರಬಹುದು ಎಂಬ ಲೆಕ್ಕಾಚಾರಗಳು ಕೇಳಿಬಂದಿವೆ.

5) ಕಾಂಗ್ರೆಸ್‌ಗೆ ಭಾರಿ ಆಘಾತ: ಬಿಜೆಪಿ ಸೇರಿದ 62 ‘ಕೈ’ ಮುಖಂಡರು

ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಗೋಕಾಕ್‌ ಕ್ಷೇತ್ರದ ತಾಲೂಕು ಪಂಚಾಯಿತಿಯ 23 ಸದಸ್ಯರು ಕಾಂಗ್ರೆಸ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಬೆನ್ನಲ್ಲಿಯೇ ಶನಿವಾರ ಮತ್ತೆ ಗೋಕಾಕ್‌ ನಗರಸಭೆ, ಕೊಣ್ಣೂರು ಪುರಸಭೆ ಹಾಗೂ ಮಲ್ಲಾಪುರ ಪಿ.ಜಿ ಪಟ್ಟಣ ಪಂಚಾಯಿಯ ಕಾಂಗ್ರೆಸ್‌ ಬೆಂಬಲಿತ ಸದಸ್ಯರು ನಗರದಲ್ಲಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಕಚೇರಿಯಲ್ಲಿ ಬಿಜೆಪಿಗೆ  ಸೇರ್ಪಡೆಯಾಗಿದ್ದಾರೆ.

6) ಪ್ರಧಾನಿ ನರೇಂದ್ರ ಮೋದಿಗೆ ದೇವೇಗೌಡರ ಪತ್ರ

 ವಿದೇಶದಿಂದ ಹಾಲು ಆಮದು ಮಾಡಿಕೊಳ್ಳುವ ಕ್ರಮಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ಪತ್ರ ಬರೆದಿದ್ದಾರೆ.

7) ದೆಹಲಿ ಮಾಲಿನ್ಯಕ್ಕೆ ಬಿಸಿಸಿಐ ಕಂಗಾಲು, ಮೊದಲ ಪಂದ್ಯ ರದ್ದಾಗೋ ಭೀತಿ!

ದೆಹಲಿಯಲ್ಲಿ ಆಯೋಜಿಸಲಾಗಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯ ನಡೆಯುವುದೇ ಅನುಮಾನವಾಗಿದೆ. ಮಾಲಿನ್ಯ ಮೀತಿ ಮೀರಿದ್ದು, ಪಂದ್ಯ ರದ್ದು ಮಾಡುವು ಕುರಿತು ಬಿಸಿಸಿಐ ಚಿಂತಿಸುತ್ತಿದೆ.

8) BB7: ಗೇಮ್ ಅಥವಾ ಇರೋದೆ ಹೀಗಾ? ಬಯಲಾಯ್ತು ಚೈತ್ರಾ ಕೊಟ್ಟೂರ್ ಮಾಸ್ಟರ್ ಪ್ಲಾನ್?

ಒಂದು ವಾರ ಬಿಗ್‌ ಬಾಸ್‌ ಮನೆಯಲ್ಲಿ ಗೆಸ್ಟ್ ಆಗಿದ್ದ ರವಿ ಬೆಳಗೆರೆ ಹೊರ ಬಂದಿದ್ದೇ ತಡ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಶುರುವಾಯಿತು. ಇನ್ನು ಮೊದಲನೇ ವಾರದಲ್ಲೇ ಪ್ರೀತಿ ಪ್ರೇಮ ವಿಚಾರದಲ್ಲಿ ಸೌಂಡ್ ಮಾಡಿದವರು ಚೈತ್ರಾ ಕೋಟೂರ್. ಇದೀಗ ಕಿಚ್ಚನ ಜೊತೆ ಮಾತುಕತೆಯಲ್ಲಿ ಬಿಗ್ ಬಾಸ್ ಮಾಸ್ಟರ್ ಪ್ಲಾನ್ ಬಯಲಾಗಿದೆ.


9) ಈಜಿಪ್ಟ್‌ ಮಮ್ಮಿ ಮಾದರಿ ಬೆಂಗಳೂರಿನ ಡ್ಯಾಡಿ!...


ಮೃತ ವ್ಯಕ್ತಿಯ ಶರೀರವನ್ನು ನೂರಾರು ವರ್ಷಗಳ ಕಾಲ ಸಂರಕ್ಷಿಸುವ ವಿಶ್ವದಲ್ಲೇ ವಿನೂತನವಾದ ‘ಮುಂಬಾಲ್ಮಿಂಗ್‌’ ಎಂಬ ವಿಧಾನವನ್ನು ಕನ್ನಡ ನಾಡಿನ ವೈದ್ಯರೊಬ್ಬರು ಆವಿಷ್ಕಾರ ಮಾಡಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡ ನಾಡಿನ ಕೀರ್ತಿ ಪತಾಕೆ ಹಾರಿಸಿದ್ದಾರೆ.

10)

ಕಲರ್ಸ್‌ ಸೂಪರ್ ವಾಹಿನಿಯ ಮೊಸ್ಟ್‌ ಎಂಟರ್ಟೇನಿಂಗ್ ಧಾರಾವಾಹಿ 'ರಾಜಾ ರಾಣಿ'ಯಲ್ಲಿ ರಾಣಿಯಾಗಿ ಮಿಂಚಿದ ಚಂದನ ಅನಂತಕೃಷ್ಣ ಈಗ ಬಿಗ್ ಬಾಸ್ ಮೂಲಕ ಮನೆ ಮನೆ ಮಾತಾಗಿದ್ದಾರೆ. ಕೆಳಗಿರುವ ಫೋಟೋಗಳನ್ನು ಚಂದನ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
 

click me!