ಸರ್ಕಾರದ ವಿರುದ್ಧ ಮುಸ್ಲಿಂ ಮಹಿಳೆಯರ ರಣಕಹಳೆ

By Web DeskFirst Published Aug 2, 2018, 5:26 PM IST
Highlights

ಒಮ್ಮೊಮ್ಮೆ ಕಾನೂನುಗಳು  ಸಂಪ್ರದಾಯವೊಂದರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಏನಿದು ಕತೆ ? ಅಷ್ಟಕ್ಕೂ ಇಲ್ಲಿ ಜಾರಿಯಾದ ಕಾನೂನಾನದರೂ ಏನು?

ಕೋಪನ್ ಹೇಗನ್[ಆ.2]  ಡೆನ್ಮಾರ್ಕ್ ನಲ್ಲಿ ಹೊಸ ಕಾನೂನಿಗೆ ವಿರೋಧ ವ್ಯಕ್ತವಾಗಿದ್ದು ಪ್ರತಿಭಟನೆ ಹಂತಕ್ಕೆ ತಿರುಗಿದೆ. ಮುಖ ಮರೆಸಿ ಸಾರ್ವಜನಿಕ ಸ್ಥಳದಲ್ಲಿ ಓಡಾಡುವಂತಿಲ್ಲ ಎಂದು ಕಾನೂನು ಹೇಳಿದೆ.

ಆದರೆ ಇದು ಮುಸ್ಲಿಂ ಸಂಪ್ರದಾಯಕ್ಕೆ ವಿರೋಧದ ರೀತಿ ವರ್ತಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ಪ್ರತಿಭಟನೆಗೆ ತಿರುಗಿದೆ. ಮೇ ತಿಂಗಳಿನಲ್ಲೇ ಡೆನ್ಮಾರ್ಕ್ ನಲ್ಲಿ ಈ ಕಾನೂನು ಪಾಸ್ ಆಗಿದ್ದು ನಿನ್ನೆಯಿಂದ ಜಾರಿಗೆ ಬಂದಿದೆ. ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರು ಮುಖ ಮುಚ್ಚಿಕೊಂಡು ಓಡಾಡಿದರೆ ದಂಡಕ್ಕೆ ಗುರಿಯಾಗಬೇಕಾಗುತ್ತದೆ. 

ಬುಧವಾರ ಸಂಜೆ ಮುಸ್ಲಿಂ ಮಹಿಳೆಯರೊಬ್ಬರು ಸಾಂಪ್ರದಾಯಿಕ ಮುಸ್ಲಿಂ ಧಿರಿಸು ನಿಕಾಬ್ ಧರಿಸಿ ಪ್ರತಿಭಟನೆಗೆ ಇಳಿದಿದ್ದರು. ಕೋಪನ್ ಹೇಗನ್ ಹೃದಯ ಭಾಗದಲ್ಲಿ ಪ್ರತಿಭಟನೆಗೆ ಇಳಿದವರು ಡೆನ್ಮಾರ್ಕ್ ಸರಕಾರದ ವಿರುದ್ಧ ಘೋಷಣೆ ಕೂಗಿದರು.ಪ್ರತಿಭಟನೆ ನಡೆಸುವ ವೇಳೆ ಮುಸ್ಲಿಂ ಮಹಿಳೆಯರು ತಮ್ಮ ಮುಖವನ್ನು ಭಾಗಶಃ ಮುಚ್ಚಿಕೊಂಡಿದ್ದರು.

ಆದರೆ ಪೊಲೀಸರು ಇವರಿಗೆ ಯಾವುದೇ ದಂಡ ಹಾಕಲಿಲ್ಲ. ಮಹಿಳೆಯರು ಮುಕ್ತವಾಗಿ ತಮಗೆ ಬೇಕಾದ ಬಟ್ಟೆ ಧರಿಸಲು ಸ್ವತಂತ್ರವಾಗಿದ್ದಾರೆ. ಇದು ಒಂದು ಕಡೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ. ಒಟ್ಟಿನಲ್ಲಿ ಕಾನೂನು ಜಾರಿಯಾದರೂ ಸಮುದಾಯವೊಂದರ ವಿರೋಧದಿಂದ ಮತ್ತೆ ಪರಿಶೀಲನೆಗೆ ಒಳಪಡುವ ಸಾಧ್ಯತೆ ಇದೆ.

click me!