ಭಾರತೀಯ ಮೂಲದ ಗಣಿತಜ್ಞನಿಗೆ ಫೀಲ್ಡ್ಸ್ ಮೆಡಲ್!

Published : Aug 02, 2018, 05:23 PM IST
ಭಾರತೀಯ ಮೂಲದ ಗಣಿತಜ್ಞನಿಗೆ ಫೀಲ್ಡ್ಸ್ ಮೆಡಲ್!

ಸಾರಾಂಶ

ಫೀಲ್ಡ್ಸ್ ಮೆಡಲ್ ಪ್ರಶಸ್ತಿಗೆ ಭಾಜನರಾದ ಅಕ್ಷಯ್ ವೆಂಕಟೇಶ್! ಗಣಿತ ಕ್ಷೇತ್ರದ ನೊಬೆಲ್ ಎಂದೇ ಖ್ಯಾತಿ ಪಡೆದ ಪ್ರಶಸ್ತಿ!  ಆಸ್ಟ್ರೆಲೀಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಅಕ್ಷಯ್! ನಾಲ್ಕು ವರ್ಷಕ್ಕೊಮ್ಮೆ ಫೀಲ್ಡ್ಸ್ ಮೆಡಲ್ ಪ್ರಶಸ್ತಿ ಪ್ರದಾನ  

ನ್ಯೂಯಾರ್ಕ್(ಆ.2): ಭಾರತ ಮೂಲದ ಆಸ್ಟ್ರೇಲಿಯನ್ ಗಣಿತಶಾಸ್ತ್ರಜ್ಞ ಅಕ್ಷಯ್ ವೆಂಕಟೇಶ್, ಗಣಿತದ ನೋಬೆಲ್ ಎಂದು ಖ್ಯಾತಿ ಪಡೆದಿರುವ ಪ್ರತಿಷ್ಠಿತ ಫೀಲ್ಡ್ಸ್ ಪ್ರಶಸ್ತಿ ಗೆ ಭಾಜನರಾಗಿದ್ದಾರೆ. ಗಣಿತ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದವರಿಗೆ ನೀಡಲಾಗುವ ಈ ಪ್ರಶಸ್ತಿಗೆ ಅಕ್ಷಯ್ ಸೇರಿ ನಾಲ್ವರನ್ನು ಆಯ್ಕೆ ಮಾಡಲಾಗಿದೆ.

36 ವರ್ಷದ ಅಕ್ಷಯ್ ನವದೆಹಲಿ ಮೂಲದವರು. ಆಸ್ಟ್ರೇಲಿಯಾ ನಿವಾಸಿಯಾಗಿರುವ ಇವರು ಸ್ಟಾನ್‌ಫ‌ರ್ಡ್‌ ವಿಶ್ವವಿದ್ಯಾಲಯದಲ್ಲಿ ಗಣಿತ ಬೋಧಕರಾಗಿದ್ದಾರೆ. ಅಕ್ಷಯ್ ಎರಡು ವರ್ಷದ ಮಗುವಾಗಿದ್ದಾಗಲೇ ಪೋಷಕರೊಡನೆ ಆಸ್ತ್ರೇಲಿಯಾಗೆ ತೆರಳಿದ್ದರು. ಚಿಕ್ಕ ವಯಸ್ಸಿನಿಂದ ಅಗಾಧ ಬುದ್ದಿವಂತಿಕೆ ಹೊಂದಿದ್ದ ಅಕ್ಷಯ್, 13ನೇ ವಯಸ್ಸಿನಲ್ಲಿ ವೆಸ್ಟ್ ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯದಲ್ಲಿ ಅದ್ಯಯನ ಕೈಗೊಂಡಿದ್ದರು.

16ನೇ ವಯಸ್ಸಿಗೆ ಗಣಿತದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ನಂತರ ಪ್ರಿನ್ಸನ್​ ಯೂನಿವರ್ಸಿಟಿ ಸೇರಿದ್ದರು ಅಕ್ಷಯ್.ಸಂಖ್ಯಾ ಸಿದ್ಧಾಂತ, ಅಂಕಗಣಿತ, ರೇಖಾಗಣಿತ, ಟೋಪೋಲೊಜಿ, ಆಟೋಮಾರ್ಫಿಕ್ ರೂಪಗಳು ಮತ್ತು ಎರ್ಗೊಡಿಕ್ ಸಿದ್ಧಾಂತಗಳ ಬಗ್ಗೆ ಉನ್ನತ ಮಟ್ಟದ ಸಂಶೋಧನೆ ಮಾಡಿರುವ ಅಕ್ಷಯ್ ಅವರಿಗೆ, ಈಗಾಗಲೇ ಓಸ್ಟ್ರೋಸ್ಕಿ ಪ್ರಶಸ್ತಿ, ಇನ್ಫೋಸಿಸ್​ ಪ್ರಶಸ್ತಿ, ಸೇಲಂ ಪ್ರಶಸ್ತಿ, ರಾಮಾನುಜನ್ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳು ಲಭಿಸಿದೆ.

ಏನಿದು ಫೀಲ್ಡ್ಸ್ ಮೆಡಲ್ ಪ್ರಶಸ್ತಿ?:

ಫೀಲ್ಡ್ಸ್ ಮೆಡಲ್ ಪ್ರಶಸ್ತಿ ಗಣಿತಶಾಸ್ತ್ರದ ನೋಬೆಲ್ ಎಂದು ಗುರುತಿಸಿಕೊಂಡಿದೆ. ಸುಮಾರು 40ರ ವಯೋಮಾನದ ಅತ್ಯಂತ ಪ್ರತಿಭಾವಂತ ಗಣಿತಜ್ಞರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಇನ್ನು ಈ ಪ್ರಶಸ್ತಿಯನ್ನು ನಾಲ್ಕು ವರ್ಷಕ್ಕೊಮ್ಮೆ ನೀಡುತ್ತಾರೆ ಎಂಬುದು ವಿಶೇಷ.

ಈ ಬಾರಿ .ಬ್ರೆಜಿಲ್ ರಿಯೋ ಡಿ ಜನೈರೊದಲ್ಲಿ ನಡೆದ ಅಂತಾರಾಷ್ಟ್ರೀಯ ಗಣಿತ ಸಮಾವೇಶದಲ್ಲಿ ಅಕ್ಷಯ್ ವೆಂಕಟೇಶ್ ಅವರಿಗೆ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಪ್ರಶಸ್ತಿಯು 15 ಸಾವಿರ ಕೆನಡಿಯನ್ ಡಾಲರ್ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಅಕ್ಷಯ್ ಜೊತೆಗೆ ಕೌಚರ್‌ ಬರ್ಕರ್‌ (ಇರಾನ್‌ ಕುರ್ಡಿಶ್‌ ಮೂಲದ, ಕ್ಯಾಂಬ್ರಿಜ್‌ ವಿವಿ ಪ್ರೊಫೆಸರ್‌), ಜರ್ಮನಿಯ ಪೀಟರ್‌ ಶೋಲ್‌ಜ್‌ (ಬಾನ್‌ ವಿವಿ ಬೋಧಕ), ಮತ್ತು ಅಲೆಸ್ಸಿಯೋ ಫಿಗಾಲಿ (ಇಟಿಝಡ್‌ ಜ್ಯುರಿಕ್‌ನಲ್ಲಿನ ಇಟಾಲಿಯನ್‌ ಗಣಿತಜ್ಞ) ಅವರುಗಳು ಸಹ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bhabana Menon: 'ಮಲಯಾಳಂ ಚಿತ್ರರಂಗದ ಹೆಮ್ಮೆ' ಎಂದ ಸಚಿವರು; ನಟಿ ಭಾವನಾಗೆ ಪ್ರಶಂಸೆ ಸುರಿಮಳೆ!'
ಆದಾಯ ಕಡಿಮೆ ಆಗಿದ್ದೋ, ಖರ್ಚು ಜಾಸ್ತಿಯಾಗಿದ್ದೋ! ಯೋಚಿಸಬೇಕಾದ ಕೆಲವು ಆರ್ಥಿಕ ಸಂಗತಿಗಳು