ಹುಷಾರ್!:ಮಕ್ಕಳ ಜೀವ ತೆಗೆಯಲು ಬರುತ್ತಿದೆ ಮೋಮೋ!

Published : Aug 02, 2018, 05:00 PM IST
ಹುಷಾರ್!:ಮಕ್ಕಳ ಜೀವ ತೆಗೆಯಲು ಬರುತ್ತಿದೆ ಮೋಮೋ!

ಸಾರಾಂಶ

ಮಕ್ಕಳ ಬಲಿ ಕೇಳುವ ಮತ್ತೊಂದು ಗೇಮ್! ಜಪಾನ್ ಮೂಲದ ಮೋಮೋ ಆನ್‌ಲೈನ್ ಗೇನ್! ಅರ್ಜೆಂಟೈನಾದಲ್ಲಿ 12 ವರ್ಷದ ಬಾಲಕಿ ಬಲಿ! ಭಾರತಕ್ಕೂ ಕಾಲಿಡುತ್ತಾ ಈ ದರಿದ್ರ ಗೇಮ್?   

ನವದೆಹಲಿ(ಆ.2): ಬ್ಲೂವೇಲ್ ಎಂಬ ಪೆಡಂಬೂತ ಈಗಾಗಲೇ ಭಾರತವೂ ಸೇರಿದಂತೆ ಜಗತ್ತಿನೆಲ್ಲೆಡೆ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಇನ್ನೇನು ಬ್ಲೂವೇಲ್ ಕತೆ ಮುಗೀತು ಅಂದುಕೊಳ್ಳುವಷ್ಟರಲ್ಲೇ ಕಿಕಿ ಚಾಲೆಂಜ್ ದುತ್ತೆಂದು ಎದುರು ಬಂದು ನಿಂತಿದೆ.

ಆದರೆ ಇದೆಲ್ಲಕ್ಕೂ ಹೆಚ್ಚು ಗಾಬರಿ ಹುಟ್ಟಿಸುವ ಆನ್ ಲೈನ್ ಗೇಮ್ ವೊಂದು ಇದೀಗ ಸದ್ದು ಮಾಡುತ್ತಿದೆ. ಜಗತ್ತಿನ ಕೆಲವು ದೇಶಗಳಲ್ಲಿ ಈಗಾಗಲೇ ಮುಗ್ದ  ಮಕ್ಕಳ ಜೀವ ಪಡೆದಿರುವ ಈ ಗೇಮ್ ಹೆಸರು ಮೋಮೋ.

ವಾಟ್ಸಪ್ ಗೇಮ್ ಆಗಿರುವ ಮೋಮೋ, ಅರ್ಜೆಂಟೈನಾದ ೧೨ ವರ್ಷದ ಬಾಲಕಿಯೋರ್ವಳನ್ನು  ಈಗಾಗಲೇ ಬಲಿ ಪಡೆದಿದೆ. ತಾನು ಸಾಯುವ ಬಗೆಯನ್ನು ಆ ಬಾಲಕಿ ಮೊಬೈಲ್ ನಲ್ಲಿ ಚಿತ್ರೀಕರಿಸಿ ಈ ಜಗತ್ತನ್ನು ತೊರೆದಿದ್ದಳು.

ಜಪಾನ್ ಮೂಲದ ಈ ಮೋಮೋ ಗೇಮ್ ಬ್ಲೂವೇಲ್ ಗೇಮ್ ಜೊತೆ ಲಿಂಕ್ ಹೊಂದಿದ್ದು, ತನ್ನ ಗ್ರಾಹಕರಿಗೆ ಸಾಯುವ ಟಾಸ್ಕ್ ನೀಡುತ್ತಿದೆ. ಅಗಲ ಕಣ್ಣುಗಳಿರುವ ಭಯಾನಕ  ಬಾಲಕಿಯೋರ್ವಳ ಮುಖಚರ್ಯೆ ಹೊಂದಿರುವ ಈ ಗೇಮ್ ಟಾರ್ಗೆಟ್ ಹದಿಹರೆಯದ ಮಕ್ಕಳೇ ಆಗಿದ್ದಾರೆ. ಈ ಭಯಾನಕ ಆಟ ಭಾರತಕ್ಕೂ ಕಾಲಿಡುವ ಮುನ್ನ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಪೋಷಕರು ಎಚ್ಚೆತ್ತುಕೊಳ್ಳಬೇಕಾಗಿರುವುದು ಇಂದಿನ ತುರ್ತು ಅಗತ್ಯ.    

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bhabana Menon: 'ಮಲಯಾಳಂ ಚಿತ್ರರಂಗದ ಹೆಮ್ಮೆ' ಎಂದ ಸಚಿವರು; ನಟಿ ಭಾವನಾಗೆ ಪ್ರಶಂಸೆ ಸುರಿಮಳೆ!'
ಆದಾಯ ಕಡಿಮೆ ಆಗಿದ್ದೋ, ಖರ್ಚು ಜಾಸ್ತಿಯಾಗಿದ್ದೋ! ಯೋಚಿಸಬೇಕಾದ ಕೆಲವು ಆರ್ಥಿಕ ಸಂಗತಿಗಳು