
ಜೋಧ್‌ಪುರ(ಜ.18): ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್,ಬುಧವಾರ ಇಲ್ಲಿ ಸುಖೋಯ್ -30 ಎಂಕೆಐ ಯುದ್ಧ ವಿಮಾನದಲ್ಲಿ ಸಂಚರಿಸುವ ಮೂಲಕ ಅದರ ಅನುಭವ ಪಡೆದುಕೊಂಡರು.
ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನಗಳ ಪೈಕಿ ಒಂದಾದ ಸುಖೋಯ್ ವಿಮಾನವನ್ನು ಜಿ ಸೂಟ್ (ಭಾರೀ ವೇಗದಲ್ಲಿ ಸಂಚರಿಸುವಾಗ ಗುರುತ್ವಾಕರ್ಷಣೆ ಬಲದ ವ್ಯತ್ಯಯದಿಂದ ಉಂಟಾಗುವ ಹಾನಿ ತಪ್ಪಿಸುವ ಉಡುಗೆ) ತೊಟ್ಟು ಏರಿದ ನಿರ್ಮಲಾ ಜೋಧ್‌ಪುರ ವಿಮಾನ ನಿಲ್ದಾಣದಿಂದ ಸಂಚಾರ ಕೈಗೊಂಡು ಸುಮಾರು 45 ನಿಮಿಷಗಳ ಕಾಲ ಆಗಸದಲ್ಲಿ ಸಂಚರಿಸಿದರು. ಈ ವಿಮಾನ ಗಂಟೆಗೆ 2100 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲದಾಗಿದೆ. ಅಂದರೆ ಬೆಂಗಳೂರಿನಿಂದ ದೆಹಲಿಗೆ ಕೇವಲ ಒಂದು ಗಂಟೆಯಲ್ಲಿ ತಲುಪಬಲ್ಲದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.